shimoga | Shivamogga: Drinking water is being wasted - is the water board not paying attention? shimoga | ಶಿವಮೊಗ್ಗ : ವ್ಯರ್ಥವಾಗುತ್ತಿದೆ ಕುಡಿಯುವ ನೀರು - ಗಮನಿಸುವುದೆ ಜಲ ಮಂಡಳಿ?a

shimoga | ಶಿವಮೊಗ್ಗ : ಕುಡಿಯುವ ನೀರು ವ್ಯರ್ಥದ ಜೊತೆ ಬಿದ್ದಿದೆ ಗುಂಡಿ – ಗಮನಿಸುವುದೆ ಜಲ ಮಂಡಳಿ?

ಶಿವಮೊಗ್ಗ (shivmogga), ಜೂ. 1: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ 1 ನೇ ವಾರ್ಡ್ ಸೋಮಿನಕೊಪ್ಪ ಬಡಾವಣೆ ರಾಜ್ಯ ಹೆದ್ಧಾರಿಯಲ್ಲಿ, ಕಳೆದ ಕೆಲ ತಿಂಗಳುಗಳಿಂದ ಕುಡಿಯುವ ನೀರು ಪೂರೈಕೆಯ ಪೈಪ್ ಲೈನ್ ಹೊಡೆದು, ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿಯುತ್ತಿದೆ ಎಂದು ಸ್ಥಳೀಯ ನಾಗರೀಕರು ದೂರಿದ್ದಾರೆ!

ಸೋಮಿನಕೊಪ್ಪ ರಾಜ್ಯ ಹಾಗೂ ಜಿಲ್ಲಾ ಹೆದ್ಧಾರಿಗೆ ಹೊಂದಿಕೊಂಡಂತೆ, ಪೈಪ್ ಲೈನ್ ದುರಸ್ತಿಗೀಡಾಗಿದೆ. ಪ್ರತಿನಿತ್ಯ ನೀರು ಹರಿದು ಹೋಗಿ, ಸ್ಥಳದಲ್ಲಿ ಭಾರೀ ಗಾತ್ರದ ಗುಂಡಿ ನಿರ್ಮಾಣವಾಗಿದೆ. ಈಗಾಗಲೇ ಹಲವು ದ್ವಿಚಕ್ರ ವಾಹನ ಸವಾರರು ಗುಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ ಎಂದು ನಾಗರೀಕರು ಆರೋಪಿಸಿದ್ದಾರೆ.

ಈಗಾಗಲೇ ಹಲವು ಬಾರಿ ಪೈಪ್ ಲೈನ್ ದುರಸ್ತಿಗೊಳಿಸಿ, ಗುಂಡಿ ಮುಚ್ಚುವಂತೆ ಸಂಬಂಧಿಸಿದವರ ಗಮನಕ್ಕೆ ತರಲಾಗಿದೆ. ಆದರೆ ತಿಂಗಳುಗಳೇ ಉರುಳಿದರೂ ಇಲ್ಲಿಯವರೆಗೂ ಅವ್ಯವಸ್ಥೆ ಸರಿಪಡಿಸಲು ಮುಂದಾಗಿಲ್ಲ ಎಂದು ನಾಗರೀಕರು ದೂರಿದ್ದಾರೆ.

ತಕ್ಷಣವೇ ಜಲ ಮಂಡಳಿ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ. ಕಾಲಮಿತಿಯೊಳಗೆ ಪೈಪ್ ಲೈನ್ ದುರಸ್ತಿಗೊಳಿಸಬೇಕು. ಜೊತೆಗೆ ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿರುವ ಗುಂಡಿ ಮುಚ್ಚಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.

ಹಾಗೆಯೇ ಸೋಮಿನಕೊಪ್ಪ ಸುತ್ತಮುತ್ತಲಿನ ಬಡಾವಣೆಗಳಲ್ಲಿ 24*7 ಕುಡಿಯುವ ನೀರು ಪೂರೈಕೆ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಕಾಮಗಾರಿಗೆ ತೆಗೆದ ಗುಂಡಿಗಳನ್ನು ಮುಚ್ಚಿಲ್ಲ. ಮಳೆಯಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡು ಜನ-ಜಾನುವಾರುಗಳಿಗೆ ತೊಂದರೆಯಾಗುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿಯೂ ಜಲ ಮಂಡಳಿ ಆಡಳಿತ ಗಮನಹರಿಸಬೇಕಾಗಿದೆ ಎಂದು ನಾಗರೀಕರು ಸಲಹೆ ನೀಡಿದ್ದಾರೆ.

Shivamogga, June 1: Local citizens have complained that a huge amount of water has been flowing wastefully in the State Highway, Sominakoppa Layout, Ward 1, under the jurisdiction of the Shivamogga Municipal Corporation, for the past few months due to a damaged drinking water supply pipeline!

Shimoga: Kashipura flyover road pothole danger is finally freed! ಶಿವಮೊಗ್ಗ : ಕಾಶೀಪುರ ಫ್ಲೈ ಓವರ್ ರಸ್ತೆ ಗುಂಡಿ ಗಂಡಾಂತರಕ್ಕೆ ಕೊನೆಗೂ ಮುಕ್ತಿ! Previous post shimoga | ಶಿವಮೊಗ್ಗ : ಕಾಶೀಪುರ ಫ್ಲೈ ಓವರ್ ರಸ್ತೆ ಗುಂಡಿ ಗಂಡಾಂತರಕ್ಕೆ ಕೊನೆಗೂ ಮುಕ್ತಿ!
Booker Prize-winning writers Banu Mushtaq and Deepa Basti to be awarded Rs 10 lakh each ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ದೀಪಾ ಬಾಸ್ತಿ ಅವರಿಗೆ 10 ಲಕ್ಷ ರೂ. ಪುರಸ್ಕಾರ ಘೋಷಣೆ Next post bengaluru | ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್, ದೀಪಾ ಬಾಸ್ತಿಗೆ 10 ಲಕ್ಷ ರೂ. ಪುರಸ್ಕಾರ ಘೋಷಣೆ