shimoga | Shivamogga: Tipper collision – Father and daughter on bike injured! shimoga | ಶಿವಮೊಗ್ಗ : ಟಿಪ್ಪರ್ ಡಿಕ್ಕಿ – ಬೈಕ್ ನಲ್ಲಿದ್ದ ತಂದೆ ಮಗಳಿಗೆ ಗಾಯ!

shimoga | ಶಿವಮೊಗ್ಗ : ಟಿಪ್ಪರ್ ಡಿಕ್ಕಿ – ಬೈಕ್ ನಲ್ಲಿದ್ದ ತಂದೆ, ಮಗಳಿಗೆ ಗಾಯ!

ಶಿವಮೊಗ್ಗ (shivamogga), ಜೂ. 3: ಟಿಪ್ಪರ್ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ನಲ್ಲಿದ್ದ ತಂದೆ ಹಾಗೂ ಮಗಳು ಗಾಯಗೊಂಡ ಘಟನೆ ಜೂ. 3 ರ ಬೆಳಿಗ್ಗೆ ಶಿವಮೊಗ್ಗ ನಗರದ ಹೊರವಲಯ ಶ್ರೀರಾಂಪುರ ಸಮೀಪದ ರಾಷ್ಟ್ರೀಯ ಹೆದ್ಧಾರಿಯಲ್ಲಿ ನಡೆದಿದೆ.

ಮಗಳನ್ನು ಶಾಲೆಗೆ ಬಿಡಲು ಬೈಕ್ ನಲ್ಲಿ ಕರೆದೊಯ್ಯುವಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರಿಗೂ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಬೈಕ್ ಆಯನೂರು ಕಡೆಯಿಂದ ಶಿವಮೊಗ್ಗದೆಡೆಗೆ ತೆರಳುತ್ತಿತ್ತು. ಟಿಪ್ಪರ್ ಲಾರಿ ಚಾಲಕ ಮಿತಿಮೀರಿದ ವೇಗ ಹಾಗೂ ಅಜಾಗರೂಕವಾಗಿ ಚಾಲನೆ ಮಾಡಿಕೊಂಡು ಬಂದು, ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಗಾಯಾಳುಗಳ ಹೆಸರು ಸೇರಿದಂತೆ ಇತರೆ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

ಮಿತಿಮೀರಿದ ವೇಗ : ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಕಾಮಗಾರಿಗೆ ಮಣ್ಣು ಸಾಗಾಣೆ ಮಾಡುವ ಟಿಪ್ಪರ್ ಲಾರಿಗಳು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತಿವೆ. ಕೆಲ ಚಾಲಕರು ಬೇಕಾಬಿಟ್ಟಿಯಾಗಿ ಚಾಲನೆ ಮಾಡುತ್ತಿದ್ಧಾರೆ. ಇದರಿಂದ ಅಪಘಾತಗಳು ಸಂಭವಿಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

Shivamogga, June 3: A father and daughter on a bike were injured after a tipper lorry hit them from behind. The incident took place on the morning of June 3 on the national highway near Srirampur on the outskirts of Shivamogga city.

The accident occurred while they were taking their daughter to school on a bike. Locals have informed that both of them were injured in the accident and have been admitted to a private hospital.

shimoga APMC vegetable prices | Details of vegetable prices for July 8 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 3 ರ ತರಕಾರಿ ಬೆಲೆಗಳ ವಿವರ
Shivamogga: Light lathicharge during RCB fans' celebration - youth dies in accident! ಶಿವಮೊಗ್ಗ : ಆರ್’ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ವೇಳೆ ಲಘು ಲಾಠಿ ಪ್ರಹಾರ – ಅಪಘಾತದಲ್ಲಿ ಯುವಕ ಸಾವು! Next post shimoga | ಶಿವಮೊಗ್ಗ : ಆರ್’ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ವೇಳೆ ಲಘು ಲಾಠಿ ಪ್ರಹಾರ – ಅಪಘಾತದಲ್ಲಿ ಯುವಕ ಸಾವು!