
shimoga | ಶಿವಮೊಗ್ಗ : ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೆ ಆಗ್ರಹಿಸಿ ಶಕ್ತಿಧಾಮ ನಿವಾಸಿಗಳಿಂದ ಶಾಸಕರಿಗೆ ಮನವಿ
ಶಿವಮೊಗ್ಗ (shivamogga), ಜೂ. 3: ಶಿವಮೊಗ್ಗ ನಗರದ ಹೊರವಲಯ ಸಾಗರ ರಸ್ತೆಯಲ್ಲಿರುವ ಗ್ರಾಮ ಪಂಚಾಯಿತಿ ಅಧೀನದ ಶಕ್ತಿಧಾಮ ಲೇಔಟ್ ನ್ನು, ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು ಎಂದು ಶಕ್ತಿಧಾಮ ನಿವಾಸಿಗಳ ಕ್ಷಮಾಭಿವೃದ್ಧಿ ಸಂಘ ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ.
ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ್ ಹಾಗೂ ಜಿಲ್ಲಾಡಳಿತಕ್ಕೆ ಸಂಘದ ವತಿಯಿಂದ ಮನವಿ ಪತ್ರ ಅರ್ಪಿಸಲಾಗಿದೆ.
ಶಕ್ತಿಧಾಮ ಲೇಔಟ್ ಅಭಿವೃದ್ಧಿ ಹೊಂದುತ್ತಿರುವ ಜನವಸತಿ ಪ್ರದೇಶವಾಗಿದೆ. ಬಡಾವಣೆಯಲ್ಲಿ ತೀವ್ರ ಸ್ವರೂಪದ ಕುಡಿಯುವ ನೀರಿನ ಸಮಸ್ಯೆ, ಯುಜಿಡಿ, ಬೀದಿ ದೀಪ ಸೇರಿದಂತೆ ಹಲವು ಮೂಲ ಸೌಕರ್ಯಗಳ ಕೊರತೆಯಿದೆ.
ಗ್ರಾಮ ಪಂಚಾಯಿತಿ ಆಡಳಿತದಿಂದ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಹಾಗೆ ಸಮರ್ಪಕವಾಗಿ ಮೇಲ್ವಿಚಾರಣೆ ಆಗುತ್ತಿಲ್ಲ ಈ ಕಾರಣದಿಂದ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬಡಾವಣೆ ಸೇರ್ಪಡೆಗೊಳಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಮನವಿ ಅರ್ಪಿಸುವ ವೇಳೆ ಸಂಘಟನೆಯ ಪ್ರಮುಖರಾದ ಬಸಯ್ಯ, ನಾಗೇಂದ್ರಪ್ಪ, ಭಾರತಿ ಶೆಟ್ಟಿ ರವೀಂದ್ರ ಶೆಟ್ಟಿ, ತಿಮ್ಮರಾಜು, ಪ್ರಕಾಶ್, ಮಹದೇವಪ್ಪ, ಅರವಿಂದ್, ಚಂದ್ರಚಾರಿ, ಅರವಿಂದ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಪಾಲಿಕೆ ವ್ಯಾಪ್ತಿ ಸೇರ್ಪಡೆಗೆ ಹೆಚ್ಚುತ್ತಿರುವ ಬೇಡಿಕೆ!
*** ಗ್ರಾಮ ಪಂಚಾಯ್ತಿ ಅಧೀನದಲ್ಲಿರುವ ನಗರದ ಹೊರವಲಯದ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿಕೊಳ್ಳಬೇಕೆಂಬ ಆಗ್ರಹ ದಿನದಿಂದ ದಿನಕ್ಕೆ ಹೆಚ್ಚಾಗಲಾರಂಭಿಸಿದೆ. ಇತ್ತೀಚೆಗಷ್ಟೆ ಶಿವಮೊಗ್ಗ ನಗರದ ಹೊರವಲಯ ಕೆಎಚ್ ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಅಬ್ಬಲಗೆರೆ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಮನವಿ ಅರ್ಪಿಸಿಲಾಗಿತ್ತು. ಸದರಿ ಬಡಾವಣೆಯನ್ನು ಪಾಲಿಕೆ ವ್ಯಾಪ್ತಿ ಸೇರ್ಪಡೆಗೆ ನಿರ್ಣಯ ಕೈಗೊಂಡು, ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದು ಸಂಘಟನೆ ಆಗ್ರಹಿಸಿತ್ತು.
Shivamogga, June 3: The Shakti Dham Residents’ Welfare Association has urged the district administration to include the Shakti Dham layout under Muddinakoppa Gram Panchayat limits on Sagar Road on the outskirts of Shivamogga city under the jurisdiction of the Mahanagara Palike.
In this regard, on June 3, the association submitted a petition to the MLA of Shivamogga Rural constituency, Sharada Purya Naik and the district administration.