What caused the stampede near Chinnaswamy Stadium in Bengaluru? ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತಕ್ಕೆ ಕಾರಣವೇನು?

bengaluru stamped | ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತಕ್ಕೆ ಕಾರಣವೇನು?

ಬೆಂಗಳೂರು (bengaluru), ಜೂ. 4: ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಗೆ ಆಗಮಿಸಿದ್ದ 10 ಜನರು, ಜೂ. 4 ರ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಸುಮಾರು 30 ಕ್ಕೂ ಹೆಚ್ಚು ಅಭಿಮಾನಿಗಳು ಗಾಯಗೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಕ್ರೀಡಾಂಗಣದಲ್ಲಿ ಸಂಜೆ ಆರ್.ಸಿ.ಬಿ ತಂಡಕ್ಕೆ ಕೆಎಸ್’ಸಿಎ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆರ್.ಸಿ.ಬಿ ತಂಡ ವೀಕ್ಷಣೆಗೆ ಸಾವಿರಾರು ಸಂಖ್ಯೆಯ ಜನರು ಸ್ಟೇಡಿಯಂ ಬಳಿ ಆಗಮಿಸಿದ್ದರು.

ಸ್ಟೇಡಿಯಂ ಭರ್ತಿಯಾಗಿದ್ದ ಕಾರಣದಿಂದ, ಗೇಟ್ ಗಳನ್ನು ಬಂದ್ ಮಾಡಲಾಗಿತ್ತು. ಈ ವೇಳೆ ಭಾರೀ ಗಾತ್ರದ ಕಬ್ಬಿಣದ ಗೇಟ್ ವೊಂದು ಮುರಿದು ಬಿದ್ದಿದೆ. ಈ ವೇಳೆ ಕಾಲ್ತುಳಿತ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಸಾಕಷ್ಟು ಸಂಖ್ಯೆಯ ಜನರು ಅಸ್ವಸ್ಥಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸಮರ್ಪಕ ಪೂರ್ವ ಸಿದ್ದತೆ ಮಾಡಿಕೊಳ್ಳದೆ, ತರಾತುರಿಯಲ್ಲಿ ಸ್ಟೇಡಿಯಂನಲ್ಲಿ ಆರ್.ಸಿ.ಬಿ ತಂಡಕ್ಕೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದು ದುರಂತಕ್ಕೆ ಕಾರಣವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

Bengaluru, Jun. 4: 10 people who had come to celebrate the Royal Challengers Bangalore team’s victory in the IPL were killed in a stampede near the Chinnaswamy Stadium on the evening of June 4. More than 30 fans were reportedly injured.

In the evening, a felicitation program was organized by the KSCA for the RCB team at the stadium. Thousands of people had gathered near the stadium to watch the RCB team.

Shivamogga: Shakti Dham residents appeal to MLA demanding inclusion in the corporation's jurisdiction ಶಿವಮೊಗ್ಗ : ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೆ ಆಗ್ರಹಿಸಿ ಶಕ್ತಿಧಾಮ ನಿವಾಸಿಗಳಿಂದ ಶಾಸಕರಿಗೆ ಮನವಿ Previous post shimoga | ಶಿವಮೊಗ್ಗ : ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೆ ಆಗ್ರಹಿಸಿ ಶಕ್ತಿಧಾಮ ನಿವಾಸಿಗಳಿಂದ ಶಾಸಕರಿಗೆ ಮನವಿ
shimoga accident | Shivamogga: Horrible accident - Bengaluru resident dies, 10 people injured! shimoga accident | ಶಿವಮೊಗ್ಗ : ಭೀಕರ ಅಪಘಾತ - ಬೆಂಗಳೂರಿನ ನಿವಾಸಿ ಸಾವು, 10 ಜನರಿಗೆ ಗಾಯ! Next post shimoga accident | ಶಿವಮೊಗ್ಗ : ಭೀಕರ ಅಪಘಾತ – ಬೆಂಗಳೂರಿನ ನಿವಾಸಿ ಸಾವು, 10 ಜನರಿಗೆ ಗಾಯ!