
ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರು ಪೊಲೀಸ್ ಬಲೆಗೆ!
ಭದ್ರಾವತಿ, ಎ. 7: ಗಾಂಜಾ ಮಾರಾಟ ಅಡ್ಡೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಮೂವರು ಯುವಕರನ್ನು ಬಂಧಿಸಿದ ಘಟನೆ, ಭದ್ರಾವತಿ ಪಟ್ಟಣದ ಹೊಳೆಹೊನ್ನೂರು ರಸ್ತೆಯ ಲಕ್ಷ್ಮೀ ಸಾಮಿಲ್ ಸಮೀಪ ನಡೆದಿದೆ.
ಭದ್ರಾವತಿ ಸೀಗೆಬಾಗಿ ನಿವಾಸಿ ರೋಷನ್ (27), ವೀರಾಪುರದ ಮೊಹಮ್ಮದ್ ಇಬ್ರಾಹಿಂ ಮೀರ್ ಯಾನೆ ಟಕ್ಕರ್ (24) ಹಾಗೂ ಭದ್ರಾ ಕಾಲೋನಿ ನಿವಾಸಿ ಮಂಜುನಾಥ್ ಯಾನೆ ಕ್ಯಾತೆ (27) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳಿಂದ 7 ಸಾವಿರ ರೂ. ಮೌಲ್ಯದ 195 ಗ್ರಾಂ ತೂಕದ ಒಣ ಗಾಂಜಾ, 690 ನಗದು, ಕೃತ್ಯಕ್ಕೆ ಬಳಸಿದ್ದ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಭದ್ರಾವತಿ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರಾದ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಹಳೇನಗರ ಪೊಲೀಸ್ ಠಾಣೆ ಪಿಎಸ್ಐ ಶರಣಪ್ಪ ಮತ್ತವರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದರು.
More Stories
ಶಿವಮೊಗ್ಗದಲ್ಲಿ ಮ್ಯಾರಥಾನ್ ಓಟ ಆಯೋಜನೆ
ಶಿವಮೊಗ್ಗ, ಆ. 14: ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಗರದ ನೆಹರೂ ಕ್ರೀಡಾಂಗಣದಿಂದ ಇಂದು ಮ್ಯಾರಥಾನ್ ಓಟ ಏರ್ಪಡಿಸಲಾಗಿತ್ತು. ಯುವಸಬಲೀಕರಣ...