
shimoga | ಶಿವಮೊಗ್ಗ : 72 ಕೇಸ್ ಗಳಿರುವ ಬೆಂಗಳೂರಿನ ಕಲ್ಕರೆ ಮಂಜನ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಜಯನಗರ ಠಾಣೆ ಪೊಲೀಸರು!
ಶಿವಮೊಗ್ಗ (shivamogga), ಜೂ. 5: ಬರೋಬ್ಬರಿ 72 ಕ್ಕೂ ಅಧಿಕ ಕೇಸ್ ಗಳಿರುವ, ಅಂತಾರಾಜ್ಯ ಕಳವು ಆರೋಪಿ ಕಲ್ಕೆರೆ ಮಂಜುನಾಥ ಯಾನೆ ಕಲ್ಕೆರೆ ಮಂಜ (47) ಎಂಬಾತನ ಕಾಲಿಗೆ, ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಗುಂಡಿಕ್ಕಿ ಬಂಧಿಸಿದ ಘಟನೆ, ನಗರದ ಹೊರವಲಯ ಬಸವನಗಂಗೂರು ಚಾನಲ್ ಬಳಿ ಜೂ. 6 ರ ಮುಂಜಾನೆ ನಡೆದಿದೆ.
ಬೆಂಗಳೂರಿನ ಕಲ್ಕೆರೆ ನಿವಾಸಿಯಾದ ಆರೋಪಿಯು, ಕಳವು ಕೃತ್ಯ ನಡೆಸಲು ನಗರದಲ್ಲಿ ಹೊಂಚು ಹಾಕಿ ಓಡಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದಿದ್ದ ಜಯನಗರ ಠಾಣೆ ಇನ್ಸ್’ಪೆಕ್ಟರ್ ಸಿದ್ದೇಗೌಡ ಅವರು, ವಿಶೇಷ ಗಸ್ತು ಪಡೆ ರಚಿಸಿದ್ದರು.
ಈತನ ಇರುವಿಕೆಯ ಸುಳಿವು ಪಡೆದ ಸಬ್ ಇನ್ಸ್’ಪೆಕ್ಟರ್ ನವೀನ್ ನೇತೃತ್ವದ ಪೊಲೀಸ್ ತಂಡ ಬಂಧನಕ್ಕೆ ತೆರಳಿತ್ತು. ಈ ವೇಳೆ ಆರೋಪಿಯು ಪೊಲೀಸ್ ಸಿಬ್ಬಂದಿ ದ್ಯಾಮಪ್ಪ ಎಂಬುವರ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ.
ತಕ್ಷಣವೇ ಸಬ್ ಇನ್ಸ್’ಪೆಕ್ಟರ್ ನವೀನ್ ಅವರು ಆರೋಪಿ ಕಾಲಿಗೆ ಗುಂಡಿಕ್ಕಿ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿ ಹಾಗೂ ಆತನ ದಾಳಿಯಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಕೃತ್ಯ : ಆರೋಪಿ ಮಂಜನು ತನ್ನ ಸಹಚರನೋರ್ವನ ಜೊತೆ ಸೇರಿಕೊಂಡು, ಕೆಲ ತಿಂಗಳುಗಳ ಹಿಂದೆ ಶಿವಮೊಗ್ಗದ ಗಾಂಧಿನಗರ ಬಡಾವಣೆಯಲ್ಲಿ ಮನೆಯೊಂದರಲ್ಲಿ ಚಿನ್ನಾಭರಣ ಹಾಗೂ ಕಾರು ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಜಿ ಕೆ ಮಿಥುನ್ ಕುಮಾರ್ ಹೇಳಿದ್ದೇನು?
*** ‘ಆರೋಪಿ ಕಲ್ಕೆರೆ ಮಂಜನ ವಿರುದ್ದ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ 72 ಕೇಸ್ ಗಳಿವೆ. ಮನೆಗಳ್ಳತನ, ಮೋಸ, ಕೊಲೆ ಯತ್ನ ಮೊದಲಾದ ಆರೋಪಗಳು ಈತನ ವಿರುದ್ದವಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು ಮಾಧ್ಯಮ ಸಂದೇಶದಲ್ಲಿ ಮಾಹಿತಿ ನೀಡಿದ್ದಾರೆ.
Shivamogga, June 5: The incident of inter-state theft accused Kalkere Manjunath alias Kalkere Manja (47) being shot in the leg by the Jayanagar police station in Shivamogga, who has more than 72 cases, took place in the early hours of June 6 near the Basavanagangur channel on the outskirts of the city. “There are 72 cases against accused Kalkere Manjan for his alleged involvement in various criminal acts. He is facing charges of housebreaking, cheating, attempt to murder, etc.,” District Protection Officer GK Mithun Kumar said in a media release.