Jail sentence for the man who sexually assaulted him for giving him a government job! ಸರ್ಕಾರಿ ಕೆಲಸ ಕೊಡಿಸುವುದಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದವನಿಗೆ ಜೈಲು ಶಿಕ್ಷೆ!

bhadravati | ಭದ್ರಾವತಿ : ಹೊಳೆಹೊನ್ನೂರು ಭದ್ರಾಪುರದಲ್ಲಿ ಕೊಲೆ ಪ್ರಕರಣ – 7 ಜನರಿಗೆ ಜೀವಾವಧಿ ಶಿಕ್ಷೆ!

ಭದ್ರಾವತಿ (bhadravathi), ಜೂ. 7: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ 7 ಜನರಿಗೆ, ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಹೊಳೆಹೊನ್ನೂರು ಸಮೀಪದ ಭದ್ರಾಪುರದ ನಿವಾಸಿಗಳಾದ ಪರಮೇಶ, ಜಗದೀಶ್, ರಮೇಶ, ಗೌತಮ್, ಅಭಿಷೇಕ, ವಿಕ್ರಮ್ ಹಾಗೂ ಸಂಜಯ್ ಶಿಕ್ಷೆಗೊಳಗಾದವರೆಂದು ಗುರುತಿಸಲಾಗಿದೆ.

ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ, ಭದ್ರಾಪುರ ಗ್ರಾಮದ ವಾಸಿಗಳಾದ ನಾಗರಾಜ ಹಾಗೂ ಬಡ್ಡಿ ಪರಮೇಶ್ವರಪ್ಪ ಕುಟುಂಬಗಳ ನಡುವೆ, ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದಿನಿಂದಲೂ ವೈಮನಸ್ಸಿತ್ತು.

ಇದೇ ವಿಚಾರವಾಗಿ 05-03-2020 ರ ರಾತ್ರಿ ನಾಗರಾಜ್ ರವರ ತಂದೆಯಾದ ಕರಿಯಪ್ಪ (65 ವರ್ಷ) ರವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು.

ಈ ಕುರಿತಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0059/2020  ಐಪಿಸಿ ಕಲಂ 143, 147, 148, 504, 341, 323, 324, 307, 302, 506 ಸಹಿತ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.

ಅಂದಿನ ಭದ್ರಾವತಿ ಗ್ರಾಮಾಂತರ ಸರ್ಕಲ್ ಇನ್ಸ್’ಪೆಕ್ಟರ್ ಇ ಓ ಮಂಜುನಾಥ್ ರವರು ಪ್ರಕರಣ ತನಿಖೆ ನಡೆಸಿದ್ದರು. ನಂತರ ಇನ್ಸ್’ಪೆಕ್ಟರ್ ಲಕ್ಷ್ಮಿಪತಿ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು.

Bhadravathi, June 7: The 4th Additional District and Sessions Court has sentenced 7 people to life imprisonment and fine for attacking and murdering a person with deadly weapons in connection with a land dispute.

shimoga | Shimoga: The water board has freed the menace of potholes! shimoga | ಶಿವಮೊಗ್ಗ : ಗುಂಡಿ ಗಂಡಾಂತರಕ್ಕೆ ಮುಕ್ತಿ ಕಲ್ಪಿಸಿದ ಜಲ ಮಂಡಳಿ! Previous post shimoga | ಶಿವಮೊಗ್ಗ : ಗುಂಡಿ ಗಂಡಾಂತರಕ್ಕೆ ಮುಕ್ತಿ ಕಲ್ಪಿಸಿದ ಜಲ ಮಂಡಳಿ!
Allowing alcohol consumption in front of the hotel and shop: File a case! ಹೋಟೆಲ್, ಅಂಗಡಿ ಮುಂಭಾಗ ಮದ್ಯ ಸೇವನೆಗೆ ಅವಕಾಶ : ಕೇಸ್ ದಾಖಲು! Next post soraba | anavatti | ಮದ್ಯದ ಅಮಲಿನಲ್ಲಿ ಕತ್ತರಿಯಿಂದ ಇರಿದು ಅಳಿಯನ ಕೊ*ಲೆ ಮಾಡಿದ ಮಾವ!