Allowing alcohol consumption in front of the hotel and shop: File a case! ಹೋಟೆಲ್, ಅಂಗಡಿ ಮುಂಭಾಗ ಮದ್ಯ ಸೇವನೆಗೆ ಅವಕಾಶ : ಕೇಸ್ ದಾಖಲು!

soraba | anavatti | ಮದ್ಯದ ಅಮಲಿನಲ್ಲಿ ಕತ್ತರಿಯಿಂದ ಇರಿದು ಅಳಿಯನ ಕೊ*ಲೆ ಮಾಡಿದ ಮಾವ!

ಸೊರಬ, ಜೂ. 7: ಮದ್ಯದ ಅಮಲಿನಲ್ಲಿ ಮಾವ ಹಾಗೂ ಅಳಿಯನ ನಡುವೆ ಏರ್ಪಟ್ಟ ಕಲಹ, ಅಳಿಯನ ಕೊ*ಲೆಯಲ್ಲಿ ಅಂತ್ಯಗೊಂಡ ಘಟನೆ ಸೊರಬ ತಾಲೂಕಿನ ಆನವಟ್ಟಿ ಸಮೀಪ ನಡೆದಿದೆ.

ರವೀಂದ್ರ (26) ಕೊಲೆಗೀಡಾದ ಅಳಿಯ. ಉಮೇಶ್ (46) ಆರೋಪಿತ ಮಾವನಾಗಿದ್ದಾನೆ. ಈತನನ್ನು ಆನವಟ್ಟಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪ್ರಕರಣದ ಹಿನ್ನೆಲೆ : ಜೂ. 5 ರ ಗುರುವಾರ ಸಂಜೆ ಮಾವ ಹಾಗೂ ಅಳಿಯ ಇಬ್ಬರು ಜೊತೆಯಾಗಿ, ಮದ್ಯದ ಅಂಗಡಿಯಲ್ಲಿ ಮದ್ಯಪಾನ ಮಾಡಿದ್ದಾರೆ. ನಂತರ ಸಮೀಪದ ಹೋಟೆಲ್ ನಲ್ಲಿ ಊಟಕ್ಕೆ ತೆರಳಿದ್ದಾರೆ.

ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಇದು ವಿಕೋಪಕ್ಕೆ ತಿರುಗಿದ್ದು, ಹೋಟೆಲ್ ನಲ್ಲಿದ್ದ ಕತ್ತರಿ ತೆಗೆದುಕೊಂಡ ಆರೋಪಿ ಮಾವನು, ಅಳಿಯನ ಎದೆಗೆ ಇರಿದು ಪರಾರಿಯಾಗಿದ್ದ.

ಗಂಭೀರವಾಗಿ ಗಾಯಗೊಂಡಿದ್ದ ರವೀಂದ್ರನನ್ನು ಸೊರಬ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಜೂ. 6 ರಂದು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.

Soraba (Anavatti), June 7: A quarrel between a father-in-law and his son-in-law under the influence of alcohol ended in tragedy near Anavatti in Soraba taluk.

Jail sentence for the man who sexually assaulted him for giving him a government job! ಸರ್ಕಾರಿ ಕೆಲಸ ಕೊಡಿಸುವುದಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದವನಿಗೆ ಜೈಲು ಶಿಕ್ಷೆ! Previous post bhadravati | ಭದ್ರಾವತಿ : ಹೊಳೆಹೊನ್ನೂರು ಭದ್ರಾಪುರದಲ್ಲಿ ಕೊಲೆ ಪ್ರಕರಣ – 7 ಜನರಿಗೆ ಜೀವಾವಧಿ ಶಿಕ್ಷೆ!
shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Next post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 8 ರ ತರಕಾರಿ ಬೆಲೆಗಳ ವಿವರ