Shivamogga : Government school buildings in Abbalagere and Basavanagangur villages awaiting rejuvenation - will the Education Minister take note? ಶಿವಮೊಗ್ಗ : ಕಾಯಕಲ್ಪದ ನಿರೀಕ್ಷೆಯಲ್ಲಿ ಅಬ್ಬಲಗೆರೆ - ಬಸವನಗಂಗೂರು ಗ್ರಾಮಗಳ ಸರ್ಕಾರಿ ಶಾಲೆ ಕಟ್ಟಡಗಳು – ಗಮನಿಸುವರೆ ಶಿಕ್ಷಣ ಸಚಿವರು?

shimoga | ಶಿವಮೊಗ್ಗ : ಕಾಯಕಲ್ಪದ ನಿರೀಕ್ಷೆಯಲ್ಲಿ ಅಬ್ಬಲಗೆರೆ, ಬಸವನಗಂಗೂರು ಗ್ರಾಮಗಳ ಸರ್ಕಾರಿ ಶಾಲಾ ಕಟ್ಟಡಗಳು – ಗಮನಿಸುವರೆ ಶಿಕ್ಷಣ ಸಚಿವರು?

ಶಿವಮೊಗ್ಗ (shivamogga), ಜೂ. 7: ಒಂದೆಡೆ ಸರ್ಕಾರಿ ಶಾಲೆಗಳ ಶ್ರೇಯೋಭಿವೃದ್ದಿಗೆಂದೆ ರಾಜ್ಯ ಸರ್ಕಾರ, ನೂರಾರು ಕೋಟಿ ರೂ. ವ್ಯಯಿಸುತ್ತಿದೆ. ಆದರೆ ಇಂದಿಗೂ ಅದೆಷ್ಟೋ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಕಾಯಕಲ್ಪದ ನಿರೀಕ್ಷೆಯಲ್ಲಿವೆ.

ಅದೇ ರೀತಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿಯೂ, ಹಲವು ಸರ್ಕಾರಿ ಶಾಲಾ ಕಟ್ಟಡಗಳು ಕಾಯಕಲ್ಪದ ನಿರೀಕ್ಷೆಯಲ್ಲಿವೆ. ಇದಕ್ಕೆ ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ, ಬಸವನಗಂಗೂರು ಹಾಗೂ ಅಬ್ಬಲಗೆರೆ ಗ್ರಾಮಗಳಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಗಳು ಸಾಕ್ಷಿಯಾಗಿವೆ.

ಅಬ್ಬಲಗೆರೆ : ‘ಅಬ್ಬಲಗೆರೆ ಗ್ರಾಮದಲ್ಲಿರುವ ಸರ್ಕಾರಿ ಶಾಲಾ ಕಟ್ಟಡವನ್ನು 1947 ರಲ್ಲಿ ನಿರ್ಮಿಸಲಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಅದೇ ಕಟ್ಟಡದಲ್ಲಿ ಮಕ್ಕಳಿಗೆ ಪಾಠ – ಪ್ರವಚನ ನಡೆಸಲಾಗುತ್ತಿದೆ. ಪ್ರಸ್ತುತ ಕೆಂಪು ಹಂಚಿನ ಮರದ ಮೇಲ್ಛಾವಣಿಯು ಗೆದ್ದಲು ಹಿಡಿಯುತ್ತಿದೆ. ಕೆಲವೆಡೆ ಮೇಲ್ಛಾವಣಿ ಕಳಚಿ ಬಿದ್ದಿದೆ. ಗೋಡೆಗಳು ಬಿರುಕು ಬಿಡುತ್ತಿವೆ.

ಹೊಸ ಕಟ್ಟಡ ನಿರ್ಮಾಣ ಮಾಡಬೇಕಾದ ಅನಿವಾರ್ಯತೆಯಿದೆ. ಬಿಸಿಯೂಟ ಕೊಠಡಿಯು ಹಾಳಾಗಿದ್ದು, ಬೇರೆ ಕೊಠಡಿಯಲ್ಲಿ ಅಡುಗೆ ತಯಾರಿ ಮಾಡಲಾಗುತ್ತಿದೆ. ಆಂಗ್ಲ ಮಾಧ್ಯಮ ಆರಂಭವಾಗಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಿಂದ ಮಕ್ಕಳು ಶಾಲೆಗೆ ಸೇರ್ಪಡೆಯಾಗುತ್ತಿದ್ದಾರೆ. ಈ ಕಾರಣದಿಂದ ಸುಸಜ್ಜಿತ ಹಾಗೂ ಸಕಲ ಸೌಲಭ್ಯ ಒಳಗೊಂಡ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ತುರ್ತು ಕ್ರಮಕೈಗೊಳ್ಳಬೇಕಾಗಿದೆ’ ಎಂದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರೂ ಆದ ಅಬ್ಬಲಗೆರೆ ಗ್ರಾಮದ ಮುಖಂಡ ಗೋಪಿ ಅವರು ಮನವಿ ಮಾಡುತ್ತಾರೆ.

ಬಸವನಗಂಗೂರು : ‘ಕೆಂಪು ಹಂಚಿನ ಮೇಲ್ಛಾವಣಿ ಹೊಂದಿರುವ ಬಸವನಗಂಗೂರು ಶಾಲಾ ಕಟ್ಟಡವನ್ನು ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಸದ್ಯ ಕಟ್ಟಡದ ಮೇಲ್ಛಾವಣಿ ಹಾಗೂ ಗೋಡೆಗಳು ಬಿರುಕು ಬಿಡುತ್ತಿವೆ. ಜೋರಾಗಿ ಮಳೆ ಬಂದರೆ ಕೆಲ ಕೊಠಡಿಗಳು ಸೋರುತ್ತವೆ. ಈ ಕಾರಣದಿಂದ ಹೊಸ ಕಟ್ಟಡ ನಿರ್ಮಾಣದ ತುರ್ತು ಅಗತ್ಯವಿದೆ’ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.

ಗಮನಹರಿಸಲಿ : ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಜಿಲ್ಲೆಯವರೆ ಆಗಿದ್ದಾರೆ. ಬಸವನಗಂಗೂರು ಹಾಗೂ ಅಬ್ಬಲಗೆರೆ ಗ್ರಾಮಗಳಲ್ಲಿ ಸಕಲ ಸೌಲಭ್ಯ ಒಳಗೊಂಡ, ಸುಸಜ್ಜಿತ ಸರ್ಕಾರಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಕಾಲಮಿತಿಯೊಳಗೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ.

ಹಾಗೆಯೇ ಅವರ ಅವಧಿಯಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳ ಕಟ್ಟಡ ಹಾಗೂ ಸೌಲಭ್ಯಗಳಿಗೆ ಹೆಚ್ಚಿನ ಆದ್ಯ ಗಮನಹರಿಸಬೇಕಾಗಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯ ಸಹಾಯಹಸ್ತ ಕಲ್ಪಿಸಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಸಲಹೆಯಾಗಿದೆ.

Shivamogga, June 7: On the one hand, the state government is spending hundreds of crores of rupees for the development of government schools. But even today, many government school buildings are in a dilapidated state. They are waiting for rejuvenation.

Similarly, in Shivamogga, the home district of Education Minister Madhu Bangarappa, many government school buildings are awaiting renovation. This is evident in the government higher primary school buildings in Basavanagangur and Abbalagere villages, which are adjacent to Shivamogga city.

shimoga APMC vegetable prices | Details of vegetable prices for July 8 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 8 ರ ತರಕಾರಿ ಬೆಲೆಗಳ ವಿವರ
shimoga | Shivamogga: KTM bike stolen – Appropriate reward for information! shimoga | ಶಿವಮೊಗ್ಗ : ಕೆಟಿಎಂ ಬೈಕ್ ಕಳವು – ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ! Next post shimoga | ಶಿವಮೊಗ್ಗ : ಕೆಟಿಎಂ ಬೈಕ್ ಕಳವು – ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ!