shimoga | Shivamogga: KTM bike stolen – Appropriate reward for information! shimoga | ಶಿವಮೊಗ್ಗ : ಕೆಟಿಎಂ ಬೈಕ್ ಕಳವು – ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ!

shimoga | ಶಿವಮೊಗ್ಗ : ಕೆಟಿಎಂ ಬೈಕ್ ಕಳವು – ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ!

ಶಿವಮೊಗ್ಗ (shivamogga), ಜೂ. 9: ಮನೆ ಮುಂಭಾಗ ನಿಲ್ಲಿಸಿದ್ದ ಕೆಟಿಎಂ ಬೈಕ್ ವೊಂದನ್ನು ಕಳ್ಳರು ಅಪಹರಿಸಿ ಪರಾರಿಯಾಗಿರುವ ಘಟನೆ ಜೂ. 9 ರ ಮಧ್ಯಾಹ್ನ ಕೆ ಹೆಚ್ ಬಿ ಪ್ರೆಸ್ ಕಾಲೋನಿಯ ಭಗತ್ ಸಿಂಗ್ ರಸ್ತೆಯಲ್ಲಿ ನಡೆದಿದೆ.

ಶಿವಕುಮಾರ್ ಎಂಬುವರಿಗೆ ಸೇರಿದ ಕೆ ಎ 14 ಇಎಂ 9290 ನೊಂದಣಿ ಸಂಖ್ಯೆಯ ಕೆಟಿಎಂ ಬೈಕ್ ಕಳುವಾದದ್ದೆಂದು ಗುರುತಿಸಲಾಗಿದೆ.

‘2016 ರಲ್ಲಿ ಸದರಿ ಕೆಟಿಎಂ ಬೈಕ್ ನ್ನು 2. 40 ಲಕ್ಷ ರೂ. ಕೊಟ್ಟು ಖರೀದಿಸಿದ್ದು, ಆರೆಂಜ್ ಹಾಗೂ ಬಿಳಿ ಬಣ್ಣದ್ದಾಗಿದೆ. ಎಂದಿನಂತೆ ಮನೆ ಮುಂಭಾಗ ಬೈಕ್ ನಿಲ್ಲಿಸಿದ್ದೆ. ಈ ವೇಳೆ ಕಳವು ಮಾಡಲಾಗಿದೆ. ಬೈಕ್ ಕಳುವಾಗಿರುವ ಕುರಿತಂತೆ ವಿನೋಬನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸದರಿ ಬೈಕ್ ಬಗ್ಗೆ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಮೊಬೈಲ್ ಸಂಖ್ಯೆ : 74116 – 37017 ಗೆ ಸಂಪರ್ಕಿಸಬಹುದಾಗಿದೆ’ ಎಂದು ಬೈಕ್ ಮಾಲೀಕ ಶಿವಕುಮಾರ್ ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಪೊಲೀಸರು ಗಮನಿಸಲಿ : ಇತ್ತೀಚೆಗೆ ಕೆ ಹೆಚ್ ಬಿ ಪ್ರೆಸ್ ಕಾಲೋನಿ ಸುತ್ತಮುತ್ತ ಕಳ್ಳಕಾಕರು, ಮದ್ಯ, ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗುತ್ತಿದೆ. ವಿನೋಬನಗರ ಠಾಣೆ ಪೊಲೀಸರು ಸೂಕ್ತ ಗಸ್ತು ವ್ಯವಸ್ಥೆ ಮಾಡಬೇಕು. ಕಿಡಿಗೇಡಿಗಳ ಉಪಟಳ ಕಡಿವಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

Shivamogga, Jun. 9: Thieves stole a KTM bike parked in front of a house and fled. The incident took place on the afternoon of June 9 on Bhagat Singh Road in KHB Press Colony. A KTM bike with registration number KA 14 EM 9290 belonging to Shivakumar has been identified as stolen.

Police should take note: Recently, the number of thieves, liquor and ganja addicts has been increasing around KHB Press Colony. Vinobanagar police should arrange proper patrols. Local residents have demanded that steps be taken to curb the mischief of the miscreants.

Shivamogga : Government school buildings in Abbalagere and Basavanagangur villages awaiting rejuvenation - will the Education Minister take note? ಶಿವಮೊಗ್ಗ : ಕಾಯಕಲ್ಪದ ನಿರೀಕ್ಷೆಯಲ್ಲಿ ಅಬ್ಬಲಗೆರೆ - ಬಸವನಗಂಗೂರು ಗ್ರಾಮಗಳ ಸರ್ಕಾರಿ ಶಾಲೆ ಕಟ್ಟಡಗಳು – ಗಮನಿಸುವರೆ ಶಿಕ್ಷಣ ಸಚಿವರು? Previous post shimoga | ಶಿವಮೊಗ್ಗ : ಕಾಯಕಲ್ಪದ ನಿರೀಕ್ಷೆಯಲ್ಲಿ ಅಬ್ಬಲಗೆರೆ, ಬಸವನಗಂಗೂರು ಗ್ರಾಮಗಳ ಸರ್ಕಾರಿ ಶಾಲಾ ಕಟ್ಟಡಗಳು – ಗಮನಿಸುವರೆ ಶಿಕ್ಷಣ ಸಚಿವರು?
khb site | After many years a new layout from KHB in Karehalli Bhadravati: Applications invited for sites! khb site | ಹಲವು ವರ್ಷಗಳ ನಂತರ ಭದ್ರಾವತಿಯ ಕಾರೇಹಳ್ಳಿಯಲ್ಲಿ KHB ಯಿಂದ ಹೊಸ ಬಡಾವಣೆ : ನಿವೇಶನಗಳಿಗೆ ಅರ್ಜಿ ಆಹ್ವಾನ! Next post ಹಲವು ವರ್ಷಗಳ ನಂತರ ಭದ್ರಾವತಿಯ ಕಾರೇಹಳ್ಳಿಯಲ್ಲಿ KHB ಯಿಂದ ಹೊಸ ಬಡಾವಣೆ : ನಿವೇಶನಗಳಿಗೆ ಅರ್ಜಿ ಆಹ್ವಾನ!