
ಹಲವು ವರ್ಷಗಳ ನಂತರ ಭದ್ರಾವತಿಯ ಕಾರೇಹಳ್ಳಿಯಲ್ಲಿ KHB ಯಿಂದ ಹೊಸ ಬಡಾವಣೆ : ನಿವೇಶನಗಳಿಗೆ ಅರ್ಜಿ ಆಹ್ವಾನ!
ಶಿವಮೊಗ್ಗ (shivamogga), ಜೂ. 9: ಹಲವು ವರ್ಷಗಳ ನಂತರ, ಭದ್ರಾವತಿಯಲ್ಲಿ ಕರ್ನಾಟಕ ಗೃಹ ಮಂಡಳಿ (KHB ) ವಸತಿ ಬಡಾವಣೆ ಅಭಿವೃದ್ದಿ ಪಡಿಸುತ್ತಿದೆ. ನಗರದ ಹೊರವಲಯ ಕಾರೇಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಲೇಔಟ್ ನಿರ್ಮಿಸುತ್ತಿದೆ. ಈ ಸಂಬಂಧ ಸಾರ್ವಜನಿಕರಿಂದ ಬೇಡಿಕೆ ಸಮೀಕ್ಷೆಯ ಅರ್ಜಿ ಕೂಡ ಆಹ್ವಾನಿಸಿದೆ.
ಈ ಕುರಿತಂತೆ ಕೆ ಹೆಚ್ ಬಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಸಂಸ್ಥೆಯ ಶಿವಮೊಗ್ಗ ಜಿಲ್ಲೆಯ ಸಹಾಯಕ ಕಾರ್ಯಪಾಲಕ ಅಭಿಯಂತರ (AEE ) ಹರೀಶ್ ಕೆ ಅವರು ಮಾತನಾಡಿ, ಕಾರೇಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ಧಾರಿಗೆ ಹೊಂದಿಕೊಂಡಂತೆ 150 ಎಕರೆ ಪ್ರದೇಶದಲ್ಲಿ ಸಕಲ ಮೂಲಸೌಕರ್ಯ ಒಳಗೊಂಡ ವಸತಿ ಬಡಾವಣೆ ಅಭಿವೃದ್ದಿಪಡಿಸಲು ಉದ್ದೇಶಿಸಲಾಗಿದೆ. ಆಸಕ್ತ ಸಾರ್ವಜನಿಕರಿಂದ ಆನ್’ಲೈನ್ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
5-6-2025 ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 8-7-2025 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಇಡಬ್ಲ್ಯೂಸ್, ಎಲ್ಐಜಿ, ಎಂಐಜಿ ಹಾಗೂ ಹೆಚ್ಐಜಿ ಅಳತೆಯ ನಿವೇಶನಗಳನ್ನು ಅಭಿವೃದ್ದಿಪಡಿಸಲು ಯೋಜಿಸಲಾಗಿದೆ.
ಅರ್ಜಿ ನೋಂದಣಿ ಮತ್ತು ಆರಂಭಿಕ ಠೇವಣಿ ಹಣವನ್ನು ಇ ಪೇಮೆಂಟ್ ಮೂಲಕ ಪಾವತಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಮಂಡಳಿಯ ವೆಬ್’ಸೈಟ್ ‘ https://www.khb.karnataka.gov.in ‘ ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಮೊಬೈಲ್ ಸಂಖ್ಯೆ : 97437 – 33696, ಅಧೀಕ್ಷಕರು – 99641 – 32200, ಪ್ರಥಮ ದರ್ಜೆ ಸಹಾಯಕರು – 77600 – 62595 ನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಗಮನ ಸೆಳೆಯುತ್ತಿರುವ ಜನಪರ ಐಎಎಸ್ ಅಧಿಕಾರಿ ಕೆ ಎ ದಯಾನಂದ್!
*** ಐಎಎಸ್ ಅಧಿಕಾರಿ ಕೆ ಎ ದಯಾನಂದ್ ಅವರು ಇತ್ತೀಚೆಗಷ್ಟೆ ಕರ್ನಾಟಕ ಗೃಹ ಮಂಡಳಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರವಹಿಸಿಕೊಂಡ ಸೀಮಿತಾವಧಿಯಲ್ಲಿಯೇ, ಮಂಡಳಿಯಲ್ಲಿ ಹಲವು ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕ್ರಮಕೈಗೊಂಡಿದ್ದಾರೆ. ರಾಜ್ಯದ ವಿವಿಧೆಡೆ ಕೆ ಹೆಚ್ ಬಿ ಸಂಸ್ಥೆಯಿಂದ ನಾಗರೀಕರಿಗೆ ವಸತಿ ಬಡಾವಣೆ ಹಾಗೂ ಮನೆಗಳ ನಿರ್ಮಾಣಕ್ಕೆ ವೇಗ ನೀಡಲಾರಂಭಿಸಿದ್ದಾರೆ. ಈ ಹಿಂದೆ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಕೆ ದಯಾನಂದ್ ಅವರು ತಮ್ಮ ಜನಪರ ಕಾರ್ಯನಿರ್ವಹಣೆ ಮೂಲಕ, ಸೀಮಿತಾವಧಿಯಲ್ಲಿಯೇ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದ ಗಮನ ಸೆಳೆದಿದ್ದರು.
ಮಧ್ಯವರ್ತಿಗಳು, ವಂಚಕರಿಂದ ಮೋಸ ಹೋಗದಂತೆ ಎಚ್ಚರಿಕೆ!
*** ‘ಅತ್ಯಂತ ಪಾರದರ್ಶಕವಾಗಿ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಆನ್’ಲೈನ್ ಮೂಲಕವೇ ಅರ್ಜಿ ಸಲ್ಲಿಕೆ ಹಾಗೂ ಹಣ ಪಾವತಿ ಮಾಡಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳು ಹಾಗೂ ವಂಚಕರ ಮಾತು ನಂಬಿ ಮೋಸ ಹೋಗಬಾರದು. ನಿವೇಶನ ಕೊಡಿಸುವುದಾಗಿ ಆಮಿಷವೊಡ್ಡುವವರ ಬಗ್ಗೆ ಸಂಸ್ಥೆಗೆ ಮಾಹಿತಿ ನೀಡಬೇಕು. ಏನೇ ಗೊಂದಲಗಳಿದ್ದರೂ ಶಿವಮೊಗ್ಗದ ಕೆ ಹೆಚ್ ಬಿ ಕಚೇರಿ ಸಂಪರ್ಕಿಸಬಹುದಾಗಿದೆ ಅಥವಾ ಪ್ರಕಟಣೆಯಲ್ಲಿ ನೀಡಲಾಗಿರುವ ಮೊಬೈಲ್ ಪೋನ್ ನಂಬರ್ ಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ’ ಎಂದು ಸಂಸ್ಥೆಯ ಶಿವಮೊಗ್ಗ ಜಿಲ್ಲೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ( ) ಹರೀಶ್ ಕೆ ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
Shivamogga (shivamogga), Jun. 9: After many years, the Karnataka Housing Board (KHB) is developing a housing estate in Bhadravati. The layout is being constructed in Karehalli village on the outskirts of the city, adjacent to the national highway. In this regard, a demand survey application has also been invited from the public.
KHB has issued a public notice in this regard. Harish K, AEE of the organization’s Shivamogga district, said that it is proposed to develop a residential area with all the infrastructure in an area of 150 acres in Karehalli village, adjacent to the national highway.