
shimoga | ವೈರಲ್ ಆದ ಸುದ್ದಿ : ಕಳವು ಮಾಡಿದ್ದ ಕೆಟಿಎಂ ಬೈಕ್ ಬಿಟ್ಟು ಪರಾರಿಯಾದ ಕಳ್ಳರು..!
ಶಿವಮೊಗ್ಗ (shivamogga), ಜೂ. 5: ‘ಕಳವು ಮಾಡಿದ ಕೆಟಿಎಂ ಬೈಕ್ ಬಗ್ಗೆ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡುವುದಾಗಿ…’ ಬೈಕ್ ಮಾಲೀಕನ ಹೇಳಿಕೆಯ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನಿರ್ಜನ ಪ್ರದೇಶದಲ್ಲಿ ಕಳ್ಳರು ಬೈಕ್ ಬಿಟ್ಟು ಪರಾರಿಯಾದ ಕುತೂಹಲಕಾರಿ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ!
ಏನೀದು ಪ್ರಕರಣ? : ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆಹೆಚ್’ಬಿ ಪ್ರೆಸ್ ಕಾಲೋನಿ ಭಗತ್ ಸಿಂಗ್ ರಸ್ತೆ ನಿವಾಸಿ ಶಿವಕುಮಾರ್ ಎಂಬುವರಿಗೆ ಸೇರಿದ, ಸುಮಾರು 2. 40 ಲಕ್ಷ ರೂ. ಮೌಲ್ಯದ ಕೆಟಿಎಂ ಬೈಕ್ ನ್ನು ಜೂ. 9 ರ ಮಧ್ಯಾಹ್ನ ಮನೆ ಮುಂಭಾಗದಿಂದ ಕಳ್ಳರು ಅಪಹರಿಸಿದ್ದರು.
ಬೈಕ್ ಕಳುವಾಗಿರುವ ಬಗ್ಗೆ ಶಿವಕುಮಾರ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಮೀಪದ ಕಟ್ಟಡಗಳ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ಸೇರಿದಂತೆ, ನಗರದ ವಿವಿಧೆಡೆ ಸುತ್ತಾಡಿದ್ದರು.
ಬೈಕ್ ಕಳುವಾಗಿರುವ ಬಗ್ಗೆ www.udayasaakshi.com ನ್ಯೂಸ್ ವೆಬ್’ಸೈಟ್ ಸಚಿತ್ರ ಸುದ್ದಿ ಬಿತ್ತರಿಸಿತ್ತು. ಬೈಕ್ ಬಗ್ಗೆ ಮಾಹಿತಿ ನೀಡುವ ನಾಗರೀಕರಿಗೆ ಸೂಕ್ತ ಬಹುಮಾನ ನೀಡುವುದಾಗಿ ಮಾಲೀಕ ಶಿವಕುಮಾರ್ ನೀಡಿದ್ದ ಹೇಳಿಕೆಯನ್ನು ಪ್ರಕಟಿಸಿತ್ತು. ಸದರಿ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಸುದ್ದಿ ಓದಿದ್ದೆ : ‘ ಉದಯ ಸಾಕ್ಷಿ’ ನ್ಯೂಸ್ ವೆಬ್’ಸೈಟ್ ನಲ್ಲಿ ಸಂಜೆ ಬೈಕ್ ಕಳುವಿನ ಸುದ್ದಿ ಓದಿದ್ದೆ. ರಾತ್ರಿ ಬೊಮ್ಮನಕಟ್ಟೆಯಿಂದ ಚಾನಲ್ ರಸ್ತೆಯಲ್ಲಿ ಬರುವಾಗ, ನಾಲೆ ಪಕ್ಕದಲ್ಲಿಯೇ ಕೆಟಿಎಂ ಬೈಕ್ ನಿಲ್ಲಿಸಿದ್ದು ಕಂಡುಬಂದಿತ್ತು. ಕಳುವಾಗಿರುವ ಬೈಕ್ ಎಂಬುವುದ ಖಾತ್ರಿಯಾಗಿತ್ತು.
ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದೆ. ಸ್ಥಳಕ್ಕಾಗಮಿಸಿದ 112 ಇಆರ್’ಎಸ್ಎಸ್ ವಾಹನದ ಪೊಲೀಸರು ಬೈಕ್ ಮಾಲೀಕನನ್ನು ಸ್ಥಳಕ್ಕೆ ಕರೆಯಿಸಿ, ಅವರ ಸುಪರ್ದಿಗೆ ಬೈಕ್ ಒಪ್ಪಿಸಿದರು’ ಎಂದು ಸೋಮಿನಕೊಪ್ಪದ ನಿವಾಸಿ ಶಾಬುದ್ದೀನ್ ಅವರು ಮಾಹಿತಿ ನೀಡಿದ್ದಾರೆ.
The news website www.udayasaakshi.com had published a pictorial news report about the bike being stolen. It had published a statement by the owner, Shivakumar, promising a suitable reward to citizens who provide information about the bike. The news went viral on social media.