Thirthahalli : Another shock for the 'Kantara Chapter 1' film team - a Kerala-based artist dies of a heart attack! ತೀರ್ಥಹಳ್ಳಿ : ‘ಕಾಂತಾರ ಚಾಪ್ಟರ್ 1’ ಸಿನಿಮಾ ತಂಡಕ್ಕೆ ಮತ್ತೊಂದು ಶಾಕ್ – ಮತ್ತೋರ್ವ ಕಲಾವಿದ ಸಾವು!

shimoga | kantara film | ತೀರ್ಥಹಳ್ಳಿ  : ‘ಕಾಂತಾರ ಚಾಪ್ಟರ್ 1’ ಸಿನಿಮಾ ತಂಡಕ್ಕೆ ಮತ್ತೊಂದು ಶಾಕ್ – ಮತ್ತೋರ್ವ ಕಲಾವಿದ ಸಾವು!

ಶಿವಮೊಗ್ಗ (shivamogga), ಜೂ. 11: ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಚಿತ್ರ ನಾನಾ ಕಾರಣಗಳಿಂದ ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೆ ಸದರಿ ಚಿತ್ರದಲ್ಲಿ ನಟಿಸುತ್ತಿದ್ದ  ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಮತ್ತೋರ್ವ ಕಲಾವಿದ, ತೀರ್ಥಹಳ್ಳಿಯ ಆಗುಂಬೆ ಸಮೀಪದ ರೆಸಾರ್ಟ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ!

ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ವಿಜು ವಿ ಕೆ ಮೃತಪಟ್ಟ ಕಲಾವಿದ ಎಂದು ಗುರುತಿಸಲಾಗಿದೆ. ಮೃತದೇಹವನ್ನು ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ. ಕೇರಳದಲ್ಲಿರುವ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ರವಾನಿಸಲಾಗಿದ್ದು, ಅವರು ತೀರ್ಥಹಳ್ಳಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.  

ಚಿತ್ರೀಕರಣ : ತೀರ್ಥಹಳ್ಳಿ ತಾಲೂಕಿನ ಸುತ್ತಮುತ್ತ ಕಾಂತಾರ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ. ಈ ಕಾರಣದಿಂದ ಆಗುಂಬೆ ಸಮೀಪದ ಯಡೂರಿನ ಹೋಂ ಸ್ಟೇವೊಂದರಲ್ಲಿ ಇತ್ತೀಚೆಗೆ ಸಿನಿಮಾ ತಂಡ ತಂಗಿತ್ತು.

ಹೋಂ ಸ್ಟೇಯಲ್ಲಿ ತಂಗಿದ್ದ ವಿಜು ವಿ ಕೆ ಅವರಿಗೆ ಬುಧವಾರ ರಾತ್ರಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ತೀರ್ಥಹಳ್ಳಿಯ ಆಸ್ಪತ್ರೆಗ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.

ದುರಂತ : ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಚಿತ್ರೀಕರಣ ಆರಂಭಗೊಂಡ ನಂತರ, ಒಂದಲ್ಲ ಒಂದು ದುರಂತ ಸಂಭವಿಸುತ್ತಿದೆ. ಈ ಹಿಂದೆ ಕಾಂತಾರ ಸಿನಿಮಾ ತಂಡ ಸಾಗುತ್ತಿದ್ದ ಬಸ್ ಕೊಲ್ಲೂರಿನ ಬಳಿ ಅಪಘಾತಕ್ಕೀಡಾಗಿತ್ತು. ಈ ವೇಳೆ ಜ್ಯೂನಿಯರ್ ಕಲಾವಿದರು ಗಾಯಗೊಂಡಿದ್ದರು.

ಕೆಲ ತಿಂಗಳ ಹಿಂದೆ ಜ್ಯೂನಿಯರ್ ಕಲಾವಿದ ಕಪಿಲ್ ಎಂಬುವರು, ಕೊಲ್ಲೂರು ಬಳಿಯ ಸೌಪರ್ಣಿಕ ನದಿಯಲ್ಲಿ ಈಜಲು ತೆರಳಿದ್ದು, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಅಸುನೀಗಿದ್ದರು.

ಸದರಿ ಸಿನಿಮಾದಲ್ಲಿ ನಟಿಸುತ್ತಿದ್ದ ‘ಕಾಮಿಡಿ ಕಿಲಾಡಿಗಳು ಸೀಸನ್-3’ ವಿನ್ನರ್ ರಾಕೇಶ್ ಶೆಟ್ಟಿರವರು, ಮೇ 12 ರ ಮಧ್ಯರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರಿಗೆ 34 ವರ್ಷವಾಗಿತ್ತು. ಇದೀಗ ಕೇರಳದ ಕಲಾವಿದ ವಿಜು ವಿ ಕೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

‘ಕಾಂತಾರ ಚಾಪ್ಟರ್ 1’ ಸಿನಿಮಾ ಚಿತ್ರೀಕರಣ ಆರಂಭಗೊಂಡ ನಂತರ, ಒಂದಲ್ಲ ಒಂದು ರೀತಿಯ ದುರಂತಗಳು ಸಂಭವಿಸುತ್ತಿವೆ. ಇದು ಸಾರ್ವಜನಿಕ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

The film ‘Kantara Chapter 1’ is in the news for various reasons. Recently, comedian Rakesh Poojary, who was acting in the film, died of a heart attack. Following this, another artist died of a heart attack at a resort near Agumbe in Thirthahalli!

Since the shooting of Rishab Shetty’s directorial ‘Kantara Chapter 1’ began, one tragedy after another has occurred. So far, three co-stars have died.

Special foot patrols by police in sensitive areas of Shivamogga district! ಶಿವಮೊಗ್ಗ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರಿಂದ ಕಾಲ್ನಡಿಗೆ ವಿಶೇಷ ಗಸ್ತು! Previous post shimoga | ಶಿವಮೊಗ್ಗ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರಿಂದ ಕಾಲ್ನಡಿಗೆ ವಿಶೇಷ ಗಸ್ತು!
Gujarat Plane Crash : ಅಹಮದಾಬಾದ್ನಲ್ಲಿ 242 ಜನರಿದ್ದ ಏರ್ ಇಂಡಿಯಾ ವಿಮಾನ ಪತನ! Gujarat Plane Crash: Air India plane carrying 242 people crashes in Ahmedabad! Next post Gujarat Plane Crash : ಅಹಮದಾಬಾದ್​ನಲ್ಲಿ 242 ಜನರಿದ್ದ ಏರ್ ಇಂಡಿಯಾ ವಿಮಾನ ಪತನ!