Gujarat Plane Crash : ಅಹಮದಾಬಾದ್ನಲ್ಲಿ 242 ಜನರಿದ್ದ ಏರ್ ಇಂಡಿಯಾ ವಿಮಾನ ಪತನ! Gujarat Plane Crash: Air India plane carrying 242 people crashes in Ahmedabad!

Gujarat Plane Crash : ಅಹಮದಾಬಾದ್​ನಲ್ಲಿ 242 ಜನರಿದ್ದ ಏರ್ ಇಂಡಿಯಾ ವಿಮಾನ ಪತನ!

ಅಹಮದಬಾದ್ (ಗುಜರಾತ್), ಜೂ. 12: ಗುಜರಾತ್ ರಾಜ್ಯದ ಅಹ್ಮದಾಬಾದ್ ನಲ್ಲಿ ಜೂ. 12 ರ ಮಧ್ಯಾಹ್ನ 242 ಜನರಿದ್ದ ಏರ್ ಇಂಡಿಯಾ ಸಂಸ್ಥೆಗೆ ಸೇರಿದ ವಿಮಾನವೊಂದು ಪತನಗೊಂಡ ಘಟನೆ ನಡೆದಿದೆ!

ಅಹ್ಮದಾಬಾದ್ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ಮಧ್ಯಾಹ್ನ 1. 17 ಗಂಟೆಗೆ ಲಂಡನ್ ಗೆ ತೆರಳುತ್ತಿದ್ದ, ಏರ್ ಇಂಡಿಯಾ ಸಂಸ್ಥೆಗೆ ಸೇರಿದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಪತನಗೊಂಡಿದ್ದಾಗಿದೆ.

ವಿಮಾನ ಟೇಕಾಫ್ ಆಗಿದ್ದ ಕೆಲವೇ ನಿಮಿಷಗಳಲ್ಲಿ, ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಅಹ್ಮದಾಬಾದ್ ನ ಮೇಘಾನಿ ನಗರ್ ನಲ್ಲಿ ಪತನವಾಗಿದೆ. ಆಕಾಶದಲ್ಲಿ ಸಾಗುತ್ತಿರುವಾಗಲೇ ಹಂತಹಂತವಾಗಿ ಕೆಳಕ್ಕೆ ಆಗಮಿಸಿದ ವಿಮಾನವು ಕಟ್ಟಡವೊಂದಕ್ಕೆ ಅಪ್ಪಳಿಸಿ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ.

ಸದರಿ ವಿಮಾನದಲ್ಲಿ 230 ಪ್ರಯಾಣಿಕರು ಹಾಗೂ 12 ವಿಮಾನ ಸಿಬ್ಬಂದಿಗಳಿದ್ದರು. ಪ್ರಯಾಣಿಕರಲ್ಲಿ 169 ಭಾರತೀಯ, 53 ಬ್ರಿಟಿಷ್, 1 ಕೆನಡಾ ಹಾಗೂ 7 ಪೋರ್ಚಗೀಸ್ ದೇಶದ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.

ವಿಮಾನ ಪತನಗೊಳ್ಳುತ್ತಿರುವ ವೀಡಿಯೋವು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರಾಥಮಿಕ ಹಂತದ ಮಾಹಿತಿ ಅನುಸಾರ, ಭಾರೀ ದೊಡ್ಡ ಪ್ರಮಾಣದ ಸಾವುನೋವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿನ ಸಾವುನೋವುಗಳ ವಿವರ ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Ahmedabad (Gujarat), Jr. 12: Jr. in Ahmedabad, Gujarat state. On the afternoon of the 12th, an Air India plane carrying 242 people crashed. An Air India Boeing 787 Dreamliner aircraft, en route to London, crashed at 1.17 pm from Ahmedabad’s Sardar Vallabhbhai Patel International Airport.

The plane crashed in Meghani Nagar, Ahmedabad, a few minutes after takeoff, close to the airport. It is said that the plane, which was gradually descending while flying in the sky, crashed into a building and exploded.

Thirthahalli : Another shock for the 'Kantara Chapter 1' film team - a Kerala-based artist dies of a heart attack! ತೀರ್ಥಹಳ್ಳಿ : ‘ಕಾಂತಾರ ಚಾಪ್ಟರ್ 1’ ಸಿನಿಮಾ ತಂಡಕ್ಕೆ ಮತ್ತೊಂದು ಶಾಕ್ – ಮತ್ತೋರ್ವ ಕಲಾವಿದ ಸಾವು! Previous post shimoga | kantara film | ತೀರ್ಥಹಳ್ಳಿ  : ‘ಕಾಂತಾರ ಚಾಪ್ಟರ್ 1’ ಸಿನಿಮಾ ತಂಡಕ್ಕೆ ಮತ್ತೊಂದು ಶಾಕ್ – ಮತ್ತೋರ್ವ ಕಲಾವಿದ ಸಾವು!
Shimoga : Power outage at various places on July 17 ಶಿವಮೊಗ್ಗ : ಜುಲೈ 17 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ Next post shimoga | ಶಿವಮೊಗ್ಗ | 80 ಕ್ಕೂ ಅಧಿಕ ಪ್ರದೇಶಗಳಲ್ಲಿ ಜೂ. 15 ರಂದು ವಿದ್ಯುತ್ ವ್ಯತ್ಯಯ!