
shimoga | kantara film | ಅಪಾಯದಿಂದ ಪಾರಾದ ‘ಕಾಂತಾರ’ ಸಿನಿಮಾ ತಂಡ : ಡ್ಯಾಂ ಹಿನ್ನೀರಿಗೆ ದೋಣಿಯಿಂದ ಬಿದ್ದ ನಟ ರಿಷಬ್ ಶೆಟ್ಟಿ!
ಶಿವಮೊಗ್ಗ (shivamogga), ಜೂ. 15: ‘ಕಾಂತಾರ ಚಾಪ್ಟರ್ – 1’ ಸಿನಿಮಾ ಚಿತ್ರೀಕರಣದ ವೇಳೆ ನಡೆಯುತ್ತಿರುವ ಅವಘಡಗಳ ಸರಣಿ ಮುಂದುವರಿದಿದೆ. ಈ ನಡುವೆ ಜೂ. 14 ರಂದು ಮಾಣಿ ಜಲಾಶಯದ ಹಿನ್ನೀರಿನಲ್ಲಿ ಸಿನಿಮಾ ಚಿತ್ರೀಕರಣದ ವೇಳೆ, ದೋಣಿ ಮಗುಚಿ ಬಿದ್ದ ಘಟನೆ ನಡೆದಿದೆ!
ಕಳೆದ ಹಲವು ದಿನಗಳಿಂದ ತೀರ್ಥಹಳ್ಳಿ ತಾಲೂಕಿನ ಸುತ್ತಮುತ್ತ ಸಿನಿಮಾದ ಚಿತ್ರೀಕರಣ ನಡೆಸಲಾಗುತ್ತಿದೆ. ಶನಿವಾರ ಯಡೂರು ಸಮೀಪದ ಮಾಣಿ ಜಲಾಶಯದ ಹಿನ್ನೀರಿನ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿತ್ತು.
ಸಂಜೆ ಚಿತ್ರೀಕರಣ ಮುಗಿಸಿ ದೋಣಿಯಲ್ಲಿ ಹಿಂದಿರುಗುತ್ತಿದ್ದಾಗ ಕ್ಯಾಮರಾವೊಂದು ದೋಣಿಯಿಂದ ನೀರಿಗೆ ಜಾರಿ ಬಿದ್ದಿದೆ ಎನ್ನಲಾಗಿದೆ. ಕ್ಯಾಮರಾ ರಕ್ಷಣೆ ಮಾಡುವ ಭರದಲ್ಲಿ ಆಯತಪ್ಪಿದ ದೋಣಿ ಮಗುಚಿಕೊಂಡಿದೆ. ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ದೋಣಿಯಲ್ಲಿದ್ದ ಐದು ಜನರು ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ದೋಣಿಯು ದಡದ ಸಮೀಪವಿದ್ದಿದ್ದರಿಂದ ರಿಷಬ್ ಶೆಟ್ಟಿ ಸೇರಿದಂತೆ ನೀರಿಗೆ ಬಿದ್ದವರು ಸುರಕ್ಷಿತವಾಗಿ ದಡಕ್ಕೆ ಆಗಮಿಸಿದ್ದಾರೆ. ಸದರಿ ಘಟನೆಯು ಕೆಲ ಸಮಯ ಸ್ಥಳದಲ್ಲಿ ಆತಂಕ, ಗೊಂದಲದ ವಾತಾವರಣ ಮೂಡಿಸಿತ್ತು ಎಂದು ಹೇಳಲಾಗಿದೆ.
ಒಂದಿಲ್ಲೊಂದು ಅವಘಡ : ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಚಿತ್ರೀಕರಣ ಆರಂಭಗೊಂಡ ನಂತರ, ಒಂದಲ್ಲ ಒಂದು ದುರಂತ ಸಂಭವಿಸುತ್ತಿದೆ. ಈ ಹಿಂದೆ ಕಾಂತಾರ ಸಿನಿಮಾ ತಂಡ ಸಾಗುತ್ತಿದ್ದ ಬಸ್ ಕೊಲ್ಲೂರಿನ ಬಳಿ ಅಪಘಾತಕ್ಕೀಡಾಗಿತ್ತು. ಈ ವೇಳೆ ಜ್ಯೂನಿಯರ್ ಕಲಾವಿದರು ಗಾಯಗೊಂಡಿದ್ದರು.
ಕೆಲ ತಿಂಗಳ ಹಿಂದೆ ಜ್ಯೂನಿಯರ್ ಆರ್ಟಿಸ್ಟ್ ಕಪಿಲ್ ಎಂಬುವರು, ಕೊಲ್ಲೂರು ಬಳಿಯ ಸೌಪರ್ಣಿಕ ನದಿಯಲ್ಲಿ ಈಜಲು ತೆರಳಿದ್ದು, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಅಸುನೀಗಿದ್ದರು.
ಸದರಿ ಸಿನಿಮಾದಲ್ಲಿ ನಟಿಸುತ್ತಿದ್ದ ‘ಕಾಮಿಡಿ ಕಿಲಾಡಿಗಳು ಸೀಸನ್-3’ ವಿನ್ನರ್ ರಾಕೇಶ್ ಶೆಟ್ಟಿರವರು, ಮೇ 12 ರ ಮಧ್ಯರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರಿಗೆ 34 ವರ್ಷವಾಗಿತ್ತು.
ಜೂನ್ 10 ರ ರಾತ್ರಿ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿಯ ರೆಸಾರ್ಟ್ ನಲ್ಲಿ ತಂಗಿದ್ದ, ಸದರಿ ಚಿತ್ರದಲ್ಲಿ ನಟಿಸುತ್ತಿದ್ದ ಕೇರಳದ ಮಿಮಿಕ್ರಿ ಕಲಾವಿದ ವಿಜು ವಿ ಕೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು.
ಈ ಎಲ್ಲ ಕಹಿ ಘಟನೆಗಳ ಬೆನ್ನಲ್ಲೇ, ನಟ – ನಿರ್ದೇಶಕ ರಿಷಬ್ ಶೆಟ್ಟಿ ಮತ್ತೀತರರಿದ್ದ ದೋಣಿ ಮಾಣಿ ಜಲಾಶಯದ ಹಿನ್ನೀರಿನಲ್ಲಿ ಮಗುಚಿ ಬಿದ್ದಿದೆ.
‘ಕಾಂತಾರ ಚಾಪ್ಟರ್ 1’ ಸಿನಿಮಾ ಚಿತ್ರೀಕರಣ ಆರಂಭಗೊಂಡ ನಂತರ, ಒಂದಲ್ಲ ಒಂದು ರೀತಿಯ ದುರಂತಗಳು ಸಂಭವಿಸುತ್ತಿವೆ. ಇದು ಸಾರ್ವಜನಿಕ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
Shivamogga, Jun. 15: The series of accidents during the shooting of the movie ‘Kantara Chapter – 1’ continues. Meanwhile, on Jun. 14, an incident took place in which a boat capsized while shooting for the movie in the backwaters of Mani Reservoir!
The film has been shooting around Thirthahalli taluk for the past several days. On Saturday, the shooting was done around the backwaters of Mani Reservoir near Yadur. While returning by boat after finishing the evening shoot, a camera fell from the boat into the water. The boat capsized while trying to save the camera. Five people on the boat, including the film’s actor and director Rishab Shetty, are said to have fallen into the water.
In#kantara, #kantara chapter 1, #kantarafilm, #kantarafilmnewsupdate, #shimoganews, #shimoganewsupdate, #Shivamogga, #shivamogganews, #shivamogganews #shimogalocalnews, #shivamogganews #shimoganews,