Shivamogga | Joining BJP: What did K.S. Eshwarappa say? shimoga | ಶಿವಮೊಗ್ಗ | ಬಿಜೆಪಿ ಸೇರ್ಪಡೆ : ಕೆ.ಎಸ್ ಈಶ್ವರಪ್ಪ ಹೇಳಿದ್ದೇನು?

shimoga | ಶಿವಮೊಗ್ಗ | ಬಿಜೆಪಿ ಮರು ಸೇರ್ಪಡೆ ಚರ್ಚೆಯ ಕುರಿತಂತೆ ಕೆ ಎಸ್ ಈಶ್ವರಪ್ಪ ಹೇಳಿದ್ದೇನು?

ಶಿವಮೊಗ್ಗ (shivamogga), ಜೂ. 18: ‘ಯಾವಾ ವಿಚಾರ, ಸಿದ್ದಾಂತವಿಟ್ಟುಕೊಂಡು ರಾಷ್ಟ್ರಭಕ್ತರ ಬಳಗ ಸ್ಥಾಪಿಸಲಾಗಿದೆಯೋ ಆ ವಿಚಾರಗಳ ಬಗ್ಗೆ ಚರ್ಚೆಯಾಗಬೇಕು. ಅದು ಬಗೆಹರಿಯಬೇಕು. ಅಲ್ಲಿಯವರೆಗೂ ಬಿಜೆಪಿ ಪಕ್ಷ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ’ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಸ್ಪಷ್ಟಪಡಿಸಿದ್ಧಾರೆ.

ಜೂ. 18 ರಂದು ಶಿವಮೊಗ್ಗದ ತಮ್ಮ ನಿವಾಸ ಆವರಣದಲ್ಲಿ ಆಯೋಜಿತವಾಗಿದ್ದ ರಾಷ್ಟ್ರ ಭಕ್ತರ ಬಳಗಕ್ಕೆ ವಿವಿಧ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಮೊಮ್ಮಗನ ವಿವಾಹ ಆರತಕ್ಷತೆ ಸಮಾರಂಭದಲ್ಲಿ ತಾವು ಭಾಗಿಯಾದ ನಂತರ, ಬಿಜೆಪಿ ಮರು ಸೇರ್ಪಡೆಯಾಗುವ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ ಎಂದು ಹೇಳಿದರು.

ನನ್ನ ಯಡಿಯೂರಪ್ಪರ ಸಂಬಂಧ ಅಣ್ಣ ತಮ್ಮಂದಿರ ಸಂಬಂಧವಿದ್ದಂತೆ. ಡಿ ಹೆಚ್ ಶಂಕರಮೂರ್ತಿ, ಆನಂದರಾಯರು, ಯಡಿಯೂರಪ್ಪರ ನೇತೃತ್ವದಲ್ಲಿ ಜಿಲ್ಲೆಯಲ್ಲಿ  ಆ ಪಕ್ಷ (ಬಿಜೆಪಿ) ಕಟ್ಟಿಕೊಂಡು ಬಂದಿದ್ದೆವು. ಒಂದು ರೀತಿಯಲ್ಲಿ ನನಗೆ ಯಡಿಯೂರಪ್ಪ ಹಿರಿಯಣ್ಣರಿದ್ದಂತೆ.

ಇತ್ತೀಚೆಗೆ ತಾವು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಯಡಿಯೂರಪ್ಪರು ತಮಗೆ ಪೋನ್ ಮಾಡಿ ಆರೋಗ್ಯ ವಿಚಾರಿಸಿದ್ದರು. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ವೇಳೆ ಹಲವು ಮುಖಂಡರು ಪತ್ರಿಕೆಗಳ ಮೂಲಕ ಶುಭಾಶಯ ಕೋರಿದ್ದರು. ಇದನ್ನು ರಾಜಕೀಯವಾಗಿ ವಿಶ್ಲೇಷಿಸುವುದು ದಡ್ಡತನ.

ಸ್ನೇಹ ಬೇರೆ, ವಿಶ್ವಾಸ ಬೇರೆ, ರಾಜಕಾರಣವೇ ಬೇರೆಯಾಗಿದೆ. ಹಿಂದುತ್ವ, ಕುಟುಂಬ ರಾಜಕಾರಣದ ಬಗ್ಗೆ ಚರ್ಚೆಯಾದ ನಂತರವಷ್ಟೆ ಬಿಜೆಪಿಗೆ ಹೋಗುತ್ತೆನೆ. ಬಿಜೆಪಿಯನ್ನು ಅನೇಕ ನಾಯಕರು ಕಟ್ಟಿದ್ದಾರೆ. ಪಕ್ಷ ಶುದ್ಧೀಕರಣವಾಗಬೇಕು. ಆಗುತ್ತದೆ. ಶುದ್ಧೀಕರಣ ಆಗುವವರೆಗೂ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ರಾಷ್ಟ್ರಭಕ್ತರ ಬಳಗದ ಮೂವರು ಸದಸ್ಯರನ್ನು ಸೇರಿಸಿಕೊಂಡು ಸಂಘಟನೆಯನ್ನೇ ಮುಗಿಸಿ ಬಿಡುವ ಹುನ್ನಾರ ನಡೆದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಮುಖರು ಬಳಗಕ್ಕೆ ಆಗಮಿಸಲಿದ್ದಾರೆ ಎಂದು ಇದೇ ವೇಳೆ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

Shivamogga, Jun. 18: ‘The issues and principles on which the Rashtravaktar Balaga was established should be discussed. That should be resolved. Until then, there is no question of joining the BJP party,’ former DCM K S Eshwarappa has clarified. He spoke at the induction program of various leaders into the Rashtra Bhakta Balaga organized at his residence in Shivamogga on June 18. He said that after he recently attended the wedding reception of former CM B.S. Yediyurappa’s grandson, there was discussion in the media about his rejoining the BJP.

shimoga | power cut | Power outage in various places in Shimoga city on June 29 shimoga | power cut | ಶಿವಮೊಗ್ಗ ನಗರದ ವಿವಿಧೆಡೆ ಜೂ. 29 ರಂದು ವಿದ್ಯುತ್ ವ್ಯತ್ಯಯ Previous post shimoga | power cut news | ಶಿವಮೊಗ್ಗ : ಜೂ. 20 ರಂದು ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ!
shimoga APMC vegetable prices | Details of vegetable prices for July 8 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 19 ರ ತರಕಾರಿ ಬೆಲೆಗಳ ವಿವರ