
shimoga police | ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ವಿಶೇಷ ಕಾರ್ಯಪಡೆ ಪೊಲೀಸರ ಪಥ ಸಂಚಲನ!
ಶಿವಮೊಗ್ಗ (shivamogga), ಜೂ. 20: ಕೋಮು ಸಂಘರ್ಷ ನಿಗ್ರಹಕ್ಕೆ ರಾಜ್ಯ ಸರ್ಕಾರ ಇತ್ತೀಚೆಗೆ ಅಸ್ತಿತ್ವಕ್ಕೆ ತಂದಿರುವ, ವಿಶೇಷ ಕಾರ್ಯಪಡೆ ಪೊಲೀಸರು ಜೂ. 19 ರ ಸಂಜೆ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದ್ದಾರೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ‘ಕಾನೂನು – ಸುವ್ಯವಸ್ಥೆ ಕಾಪಾಡಲು ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ, ವಿಶೇಷ ಪಥ ಸಂಚಲನ ನಡೆಸಲಾಗಿದೆ ಎಂದು ತಿಳಿಸಿದೆ.
ಎಎ ವೃತ್ತದಿಂದ ಆರಂಭವಾದ ಪಥ ಸಂಚಲನವು ಎಂಕೆಕೆ ರಸ್ತೆ, ಸಿದ್ದಯ್ಯ ವೃತ್ತ, ಬಿ ಬಿ ರಸ್ತೆ, ಸೀಗೆಹಟ್ಟಿ, ಬೈಪಾಸ್ ರಸ್ತೆ, ನ್ಯೂ ಮಂಡ್ಲಿ, ಇಮಾಮ್ ಬಾಡ, ಇಲಿಯಾಸ್ ನಗರ,
ಆರ್.ಎಂ.ಎಲ್ ನಗರ, ಟೆಂಪೋ ಸ್ಟ್ಯಾಂಡ್, ಓ ಟಿ ರಸ್ತೆ ಮುಖಾಂತರ ಮತ್ತೆ ಎ ಎ ವೃತ್ತದಲ್ಲಿಯೇ ಅಂತ್ಯಗೊಂಡಿದೆ.
ಸದರಿ ಪಥ ಸಂಚಲನದಲ್ಲಿ ವಿಶೇಷ ಕಾರ್ಯಪಡೆಯ ಅಧಿಕಾರಿ – ಸಿಬ್ಬಂದಿಗಳು ಹಾಗೂ ಶಿವಮೊಗ್ಗ ನಗರದ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳು ಭಾಗಿಯಾಗಿದ್ದರು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏನೀದು ಪಡೆ? : ದೇಶದಲ್ಲಿಯೇ ಮೊದಲ ಬಾರಿಗೆ ಕೋಮು ಸಂಘರ್ಷ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕೋಮು ಸಂಘರ್ಷ ನಿಗ್ರಹ ಪಡೆ ರಚಿಸಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ನೂತನ ಪಡೆಯ ಕಚೇರಿ ಉದ್ಘಾಟನೆ ಮಾಡಲಾಗಿತ್ತು.
ಮಂಗಳೂರು, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮು ಸಂಘರ್ಷ ಮಟ್ಟ ಹಾಕುವ ಉದ್ದೇಶದಿಂದ ಸದರಿ ಪಡೆಯನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ. ಸದರಿ ಪಡೆಯಲ್ಲಿ 248 ಸಿಬ್ಬಂದಿಗಳಿದ್ದು, ಮೂರು ತುಕಡಿಗಳಲ್ಲಿ ಕಾರ್ಯ ನಿರ್ವಹಿಸಲಿದೆ.
ಸದರಿ ಪಡೆ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿ ಗಮನ ಸೆಳೆದಿದೆ.
Shivamogga, June 19: The Special Task Force police, recently established by the state government to curb communal conflicts, conducted a procession on the main roads of Shivamogga city on the evening of June 19.
The procession, which started from AA Circle, passed through MKK Road, Siddaiah Circle, BB Road, Seegehatti, Bypass Road, New Mandli, Imam Bada, Ilyas Nagar, RML Nagar, Tempo Stand, OT Road and ended at AA Circle.
What is the force?: For the first time in the country, the state government has formed a Communal Conflict Suppression Force to control communal conflicts. The new force’s office was recently inaugurated in Mangalore.
The state government has formed the force with the aim of curbing communal conflicts in Mangaluru, Udupi and Shivamogga districts. The force has 248 personnel and will operate in three platoons.