
shimoga | ಶಿವಮೊಗ್ಗ | ಶಾಲಾ ವಾಹನಗಳ ದಿಢೀರ್ ತಪಾಸಣೆ – ಖಡಕ್ ವಾರ್ನಿಂಗ್!
ಶಿವಮೊಗ್ಗ (shivamogga), ಜೂ. 21: ಶಿವಮೊಗ್ಗ ನಗರದಲ್ಲಿ ಜೂ. 21 ರಂದು ಪೂರ್ವ ಹಾಗೂ ಪಶ್ಚಿಮ ಟ್ರಾಫಿಕ್ ಠಾಣೆಗಳ ಪೊಲೀಸರು, ಖಾಸಗಿ ಶಾಲಾ ವಾಹನಗಳ ದಿಢೀರ್ ತಪಾಸಣೆ ನಡೆಸಿ, ಸುರಕ್ಷತಾ ನಿಯಮಗಳ ಪಾಲನೆ ಕುರಿತಂತೆ ಚಾಲಕರಿಗೆ ಖಡಕ್ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದೆ. ‘ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಟ್ರಾಫಿಕ್ ಠಾಣೆಗಳ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು, ಶಿವಮೊಗ್ಗ ನಗರಾದ್ಯಂತ ಶಾಲಾ ವಾಹನಗಳ ದಿಢೀರ್ ತಪಾಸಣೆ ನಡೆಸಿದ್ದಾರೆ’ ಎಂದು ಮಾಹಿತಿ ನೀಡಿದೆ.
ಪ್ರಮುಖ ವೃತ್ತ, ರಸ್ತೆಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಗಿದೆ. ನಿಗದಿತ ವೇಗದಲ್ಲಿ ವಾಹನ ಚಲಾಯಿಸಬೇಕು. ಸಂಚಾರಿ ನಿಯಮಗಳ ಸಮರ್ಪಕ ಪಾಲನೆ ಮಾಡಬೇಕು. ಹೆಚ್ಚಿನ ಮಕ್ಕಳನ್ನು ವಾಹನಗಳಲ್ಲಿ ಕೊಂಡೊಯ್ಯಬಾರದು.
ವಾಹನಗಳಿಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಹೊಂದಿರಬೇಕು. ಇನ್ಸೂರೆನ್ಸ್, ಹೊಗೆ ತಪಾಸಣೆ, ಫಿಟ್ನೆಸ್ ಸರ್ಟಿಫಿಕೇಟ್ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ವಾಹನಗಳ ಚಾಲಕರಿಗೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Shimoga, Jr. 21: In Shimoga city on June 21, the police of east and west traffic stations conducted a surprise inspection of private school vehicles and warned the drivers about safety rules.
In this regard, the District Police Department has given information in a release. It has been informed that ‘in view of the safety of the school children, police officers and officials of the traffic stations have conducted a sudden inspection of the school vehicles across the city of Shimoga in view of the safety of the school children’.