
shimoga | bhadra dam | ಭದ್ರಾ ಜಲಾಶಯದ ಬಳಿ ದಾವಣಗೆರೆ ಭಾಗದ ರೈತರ ಪ್ರತಿಭಟನೆ : ಬಿಗಿ ಪೊಲೀಸ್ ಪಹರೆ!
ಶಿವಮೊಗ್ಗ (shivamogga), ಜೂ. 23: ಭದ್ರಾ ಜಲಾಶಯದ ಬಲದಂಡೆ ನಾಲೆ ಒಡೆದು, ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನ ಮಾಡುವ ಕ್ರಮಕ್ಕೆ, ದಾವಣಗೆರೆ ಭಾಗದ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿದ್ದಾರೆ.
ಈ ಸಂಬಂಧ ಜೂ. 23 ರಂದು ಬಿಆರ್’ಪಿಯ ಭದ್ರಾ ಜಲಾಶಯದ ಬಳಿ, ಬಲದಂಡೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ರೈತರು ಮುತ್ತಿಗೆ ಹಾಕಲು ಯತ್ನಿಸಿದರು.
ಪ್ರತಿಭಟನಾಕಾರರು ಕಾಮಗಾರಿ ಸ್ಥಳಕ್ಕೆ ತೆರಳದಂತೆ, ಮಾರ್ಗಮಧ್ಯೆಯೇ ಪೊಲೀಸರು ಬ್ಯಾರಿಕೇಡ್ ಹಾಕಿ, ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಸಿಂಗನಮನೆ ಪ್ರದೇಶದ ಬಳಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಭದ್ರಾ ಜಲಾಶಯದ ಬಲದಂಡೆ ಕಾಮಗಾರಿ ನಡೆಯುತ್ತಿರುವ ಸ್ಥಳದಿಂದ 1 ಕಿ. ಮೀ. ವರೆಗೆ ಜೂ. 28 ರ ರಾತ್ರಿ 8 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ತರೀಕೆರೆ ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ.
ಆಕ್ಷೇಪವೇನು? : ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಹಾಗೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮತ್ತು ಕಡೂರು ತಾಲೂಕುಗಳ 1200 ಹಳ್ಳಿಗಳಿಗೆ ಭದ್ರಾ ಜಲಾಶಯದ ಬಲದಂಡೆ ನಾಲೆ ಮೂಲಕ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಇದರಿಂದ ಬಲದಂಡೆ ನಾಲೆಯಲ್ಲಿ ನೀರಿನ ಹರಿವು ಸಹಜವಾಗಿಯೇ ಕಡಿಮೆಯಾಗಲಿದೆ. ಇದರಿಂದ ನಾಲೆಯ ಕೊನೆಯ ಭಾಗದ ದಾವಣಗೆರೆ ಜಿಲ್ಲೆಯ ರೈತರಿಗೆ ಅನಾನುಕೂಲವಾಗುವ ಸಾಧ್ಯತೆಯಿದೆ ಎಂಬುವುದು ದಾವಣಗೆರೆ ಭಾಗದ ರೈತರ ಆರೋಪವಾಗಿದೆ.
Shivamogga, June 23: Farmers in Davangere area have expressed strong objection to the plan to break the right bank canal of Bhadra reservoir and supply drinking water to many villages. They have demanded that the work be stopped.
In this regard, on June 23, farmers led by former minister M. P. Renukacharya attempted to lay siege to the right bank of the Bhadra reservoir near BRP, where work was underway.