Shivamogga: School bus safety – Warning to private educational institutions! shimoga | ಶಿವಮೊಗ್ಗ : ಶಾಲಾ ಬಸ್ ಗಳ ಸುರಕ್ಷತೆ – ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಾರ್ನಿಂಗ್!

shimoga | ಶಿವಮೊಗ್ಗ : ಶಾಲಾ ಬಸ್ ಗಳ ಸುರಕ್ಷತೆ – ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಾರ್ನಿಂಗ್!

ಶಿವಮೊಗ್ಗ (shivamogga), ಜೂ. 25: ಶಿವಮೊಗ್ಗ ನಗರದ ಪೂರ್ವ ಹಾಗೂ ಪಶ್ಚಿಮ ಟ್ರಾಫಿಕ್ ಠಾಣೆಗಳ ಪೊಲೀಸರು, ಇತ್ತೀಚೆಗೆ ಶಾಲಾ ವಾಹನಗಳ ದಿಢೀರ್ ತಪಾಸಣೆ ನಡೆಸುವ ಮೂಲಕ, ಹಲವು ಲೋಪದೋಷಗಳನ್ನು ಪತ್ತೆ ಹಚ್ಚಿದ್ದರು. ಸಾಲುಸಾಲು ಕೇಸ್ ದಾಖಲಿಸಿದ್ದರು.

ಇದರ ಬೆನ್ನಲ್ಲೇ, ಜೂ. 24 ರಂದು ಟ್ರಾಫಿಕ್ ಸರ್ಕಲ್ ಇನ್ಸ್’ಪೆಕ್ಟರ್ ಕಚೇರಿಯಲ್ಲಿ ಶಾಲಾ ಬಸ್ ಗಳನ್ನು ಹೊಂದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಚಾಲಕರ ಸಭೆಯನ್ನು ಪೊಲೀಸರು ನಡೆಸಿದ್ದಾರೆ. ಸುರಕ್ಷತಾ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ ನೀಡಿದ್ದಾರೆ.

ಸೂಚನೆಗಳೇನು? : ಶಾಲಾ ವಾಹನಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕಡ್ಡಾಯವಾಗಿ ಸ್ವೀಡ್ ಗರ್ವನರ್ ಅಳವಡಿಸಬೇಕು.

ಶಾಲಾ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು. ವಾಹನದಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ಯಬಾರದು.

ಶಾಲಾ ವಾಹನಗಳಿಗೆ ಕನಿಷ್ಠ 4 ವರ್ಷದ ಅನುಭವವುಳ್ಳ, ಚಾಲನಾ ಪರವಾನಿಗೆ ಹೊಂದಿರುವ ಚಾಲಕರನ್ನು ನೇಮಕ ಮಾಡಿಕೊಳ್ಳಬೇಕು. ಶಾಲಾ ಆಡಳಿತ ಮುಖ್ಯಸ್ಥರು ಮತ್ತು ಸಂಚಾರ ಪೊಲೀಸ್ ರ ವಾಟಪ್ಸ್ ಗ್ರೂಪ್ ರಚನೆ ಮಾಡುವ ಬಗ್ಗೆ ಮತ್ತು ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವುದರ ಬಗ್ಗೆ ಸಭೆಯಲ್ಲಿ ಸಲಹೆ ನೀಡಲಾಗಿದೆ.

ಸಭೆಯಲ್ಲಿ ಡಿವೈಎಸ್ಪಿ ಸಂಜೀವ್ ಕುಮಾರ್, ಟ್ರಾಫಿಕ್ ಠಾಣೆ ಇನ್ಸ್’ಪೆಕ್ಟರ್ ದೇವರಾಜ್, ಪಿಎಸ್ಐಗಳಾದ ತಿರುಮಲೇಶ್, ನವೀನ್ ಕುಮಾರ್ ಮಠಪತಿ, ಶಿವಣ್ಣನವರ್ ಉಪಸ್ಥಿತರಿದ್ದರು.

Shivamogga, June 25: The police of the East and West Traffic Stations of Shivamogga city recently conducted a surprise inspection of school vehicles and found several lapses. A series of cases were registered.

Following this, on June 24, the police held a meeting with the heads of private educational institutions that own school buses at the Traffic Circle Inspector’s office. They were instructed to strictly follow safety rules. DySP Sanjeev Kumar, Traffic Station Inspector Devaraj, PSIs Tirumalesh, Naveen Kumar Mathapathy, and Shivannanavar were present in the meeting.

Shimoga : Power outage at various places on July 17 ಶಿವಮೊಗ್ಗ : ಜುಲೈ 17 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ Previous post shimoga | power cut news | ಶಿವಮೊಗ್ಗ ನಗರ, ತಾಲೂಕಿನ ವಿವಿಧೆಡೆ ಜೂ. 26, 27 ರಂದು ವಿದ್ಯುತ್ ವ್ಯತ್ಯಯ
shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 26 ರ ತರಕಾರಿ ಬೆಲೆಗಳ ವಿವರ