Shimoga Municipality | Shimoga Municipality area revision: DC Gurudatta Hegde takes important step! ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಡಿಸಿ ಗುರುದತ್ತ ಹೆಗಡೆ ಮಹತ್ವದ ಕ್ರಮ!

shimoga palike | ವಿಳಂಬವಾಗುತ್ತಿರುವ ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಗಮನಿಸುವರೆ ಡಿಸಿ?

ಶಿವಮೊಗ್ಗ (shivamogga), ಜೂ. 26: ಸರಿಸುಮಾರು 30 ವರ್ಷಗಳ ನಂತರ, ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಸದರಿ ಪ್ರಕ್ರಿಯೆ ಆರಂಭಗೊಂಡು ವರ್ಷವಾಗುತ್ತ ಬಂದಿದೆ. ಆದರೆ ಇಲ್ಲಿಯವರೆಗೂ ಪರಿಷ್ಕರಣೆ ಪ್ರಕ್ರಿಯೆ ತಾರ್ಕಿಕ ಅಂತ್ಯಗೊಂಡಿಲ್ಲ. ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ!

ಕಳೆದ ಹಲವು ವರ್ಷಗಳಿಂದ, ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಮಾಡಬೇಕೆಂದು ನಾಗರೀಕರು ಆಗ್ರಹಿಸಿಕೊಂಡು ಬಂದಿದ್ದರು. ನಗರದಂಚಿನಲ್ಲಿ ಬೆಳೆದು ನಿಂತಿರುವ ಗ್ರಾಮ ಪಂಚಾಯ್ತಿ ಅಧೀನದ ಬಡಾವಣೆಗಳನ್ನು, ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿಕೊಂಡು ಬಂದಿದ್ದರು. ಆದರೆ ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ದಿವ್ಯ ನಿರ್ಲಕ್ಷ್ಯವಹಿಸಿದ್ದರು. ಮತ್ತೊಂದೆಡೆ, ಪಾಲಿಕೆ ಆಡಳಿತ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿತ್ತು.  

ಈ ನಡುವೆ ನಾಗರೀಕರ ಒತ್ತಾಯದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಸದರಿ ಸೂಚನೆ ಮೇರೆಗೆ, ಸುಮಾರು 1 ವರ್ಷದ ಹಿಂದೆ ಮಹಾನಗರ ಪಾಲಿಕೆ ಆಡಳಿತ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿತ್ತು. ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸಿತ್ತು. ಇದಕ್ಕಾಗಿ 7 ಅಧಿಕಾರಿಗಳ ನೇತೃತ್ವದಲ್ಲಿ, ಪ್ರತ್ಯೇಕ ತಂಡ ರಚನೆ ಮಾಡಿತ್ತು.

ಸದರಿ ತಂಡವು ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಪಂ ಅಧೀನದ ಪ್ರದೇಶಗಳ ಸರ್ವೇ ನಡೆಸಿತ್ತು. ಈ ನಡುವೆ ಡ್ರೋಣ್ ಮೂಲಕವೂ ವಿವರ ಸಂಗ್ರಹಿಸುವ ಕಾರ್ಯ ನಡೆಸಲಾಗಿತ್ತು. ಆದರೆ ಪ್ರಾರಂಭದಲ್ಲಿ ವೇಗ ಪಡೆದುಕೊಂಡಿದ್ದ ಸರ್ವೆ ಕಾರ್ಯವು ನಂತರ, ಆಮೆ ವೇಗದಲ್ಲಿ ಸಾಗಲಾರಂಭಿಸಿತ್ತು.

ಅಂತೂ ಇಂತೂ ಪಾಲಿಕೆ ಆಡಳಿತ, ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬಹುದಾದ ಗ್ರಾಮಗಳ ಪಟ್ಟಿ ಒಳಗೊಂಡ ವರದಿ ಸಿದ್ದಪಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿತ್ತು. ಈ ನಡುವೆ ಸದರಿಯ ಬಗ್ಗೆ ಹೆಚ್ಚಿನ ವಿವರ ಕೋರಿ, ಡಿಸಿ ಕಚೇರಿಯಿಂದ ಮತ್ತೆ ಪಾಲಿಕೆಗೆ ವರದಿ ಹಿಂದಿರುಗಿಸಲಾಗಿತ್ತು.

ಪಾಲಿಕೆ ಆಡಳಿತ ಅಗತ್ಯ ಮಾಹಿತಿಗಳೊಂದಿಗೆ ಮತ್ತೆ ಡಿಸಿ ಕಚೇರಿಗೆ ವರದಿ ರವಾನಿಸಿತ್ತು. 9 ಗ್ರಾಮ ಪಂಚಾಯ್ತಿಯ 19 ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿ ಸೇರ್ಪಡೆ ಮಾಡಿಕೊಳ್ಳುವ ವರದಿ ಸಿದ್ದಪಡಿಸಲಾಗಿತ್ತು. ಈ ಕುರಿತಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮೇ ತಿಂಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದರು.

ಪಾಲಿಕೆ ವ್ಯಾಪ್ತಿ ಸೇರ್ಪಡೆಗೆ ನಿರ್ಧರಿಸಿರುವ ಪ್ರದೇಶಗಳ ಕುರಿತಂತೆ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆದು 15 ದಿವಸದೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಸಂಬಂಧ ಈಗಾಗಲೇ ಹಲವು ಗ್ರಾಮ ಪಂಚಾಯ್ತಿ ಆಡಳಿತಗಳು ವಿಶೇಷ ಸಭೆ ಆಯೋಜಿಸಿ, ಜನಪ್ರತಿನಿಧಿಗಳು ಹಾಗೂ ನಾಗರೀಕರ ಅಭಿಪ್ರಾಯ ಸಂಗ್ರಹಿಸಿದ್ದವು.

ಈ ನಡುವೆ ಕೆಲ ಬಡಾವಣೆಗಳ ನಾಗರೀಕರು, ತಮ್ಮ ಪ್ರದೇಶಗಳನ್ನು ಕೂಡ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದರು. ಆಡಳಿತಾತ್ಮಕ ಕಾರಣಗಳಿಂದ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿ ಸೇರ್ಪಡೆ ಮಾಡಿಕೊಳ್ಳದಿರುವ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.

ವಿಳಂಬ : ಈ ಎಲ್ಲ ಬೆಳವಣಿಗೆಗಳ ನಡುವೆಯೇ, ನಾಗರೀಕರ ಬೇಡಿಕೆಗಳ ಕುರಿತಂತೆ ಪರಿಶೀಲಿಸಿ ವರದಿ ಸಲ್ಲಿಸಲು ಡಿಸಿ ಕಚೇರಿಯು ಪಾಲಿಕೆ ಆಡಳಿತಕ್ಕೆ ಪತ್ರ ಬರೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಇನ್ನಷ್ಟೆ ಪಾಲಿಕೆ ಆಡಳಿತ ತನ್ನ ವರದಿ ಸಲ್ಲಿಸಬೇಕಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ನಿಗದಿತ ವೇಗದಲ್ಲಿ ಸಾಗುತ್ತಿಲ್ಲ. ಸಾಕಷ್ಟು ವಿಳಂಬವಾಗುತ್ತಿರುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರಲಾರಂಭಿಸಿದೆ. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ. ಕಾಲಮಿತಿಯೊಳಗೆ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಗೆ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ಗ್ರಾಪಂ ಅಧೀನದ ಬಡಾವಣೆಗಳ ನಾಗರೀಕರಿದ್ದಾಗಿದೆ.

*** ಜನಸಂಖ್ಯೆ ಕೊರತೆ, ಕೃಷಿ ಭೂಮಿ ಹೆಚ್ಚಳ ಮತ್ತೀತರ ಕಾರಣಗಳ ಕಾರಣಗಳ ಹಿನ್ನೆಲೆಯಲ್ಲಿ ನಗರಕ್ಕೆ ಹೊಂದಿಕೊಂಡಂತಿರುವ ಕೆಲ ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿ ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ.ಇದರಿಂದ ಸದರಿ ಗ್ರಾಮಗಳ ಅಡಿಯಲ್ಲಿ ಸರಿಸುಮಾರು 10 ರಿಂದ 15 ವರ್ಷಗಳ ಹಿಂದೆ ಅಭಿವೃದ್ದಿ ಹೊಂದಿರುವ, ಜನವಸತಿ ಬಡಾವಣೆಗಳ ಮೇಲೆ ಪರಿಣಾಮ ಬೀರುವಂತಾಗಿದೆ. ಗ್ರಾಪಂ ಆಡಳಿತಗಳಿಂದ ಪರಿಣಾಮಕಾರಿಯಾಗಿ ಬಡಾವಣೆಗಳ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿವಾಸಿಗಳು ತೀವ್ರ ತೊಂದರೆ ಎದುರಿಸುವಂತಾಗಿದೆ. ಈ ಕಾರಣದಿಂದ ಜನವಸತಿ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಸೂಕ್ತ ಗಮನಹರಿಸಬೇಕು. ಇಡೀ ಗ್ರಾಮ ಸೇರ್ಪಡೆ ಮಾಡಿಕೊಳ್ಳುವ ಬದಲಾಗಿ, ಸದರಿ ಗ್ರಾಮದಲ್ಲಿ ಅಭಿವೃದ್ದಿ ಹೊಂದಿರುವ ಜನವಸತಿ ಬಡಾವಣೆಗಳನ್ನು ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಸರ್ಕಾರಕ್ಕೆ ವರದಿ ಕಳುಹಿಸಬೇಕಾಗಿದೆ ಎಂದು ನಿವಾಸಿಗಳು ಆಗ್ರಹಿಸುತ್ತಾರೆ.

Shivamogga (shivamogga), Jun. 26: After almost 30 years, the Shivamogga Municipal Administration area revision process is underway. But it has been a year since the said process began. But till now the revision process has not reached its logical conclusion. No proposal has been submitted to the state government!

For the past several years, citizens have been demanding a revision of the Shivamogga Municipal Corporation’s jurisdiction. They have been demanding that the settlements under the Gram Panchayat, which have grown up on the outskirts of the city, be included in the corporation’s jurisdiction.

Allowing alcohol consumption in front of the hotel and shop: File a case! ಹೋಟೆಲ್, ಅಂಗಡಿ ಮುಂಭಾಗ ಮದ್ಯ ಸೇವನೆಗೆ ಅವಕಾಶ : ಕೇಸ್ ದಾಖಲು! Previous post shimoga | ಶಿವಮೊಗ್ಗ: ರೌಡಿ ಶೀಟರ್ ಕೊ*ಲೆ ಪ್ರಕರಣ – ಐವರು ಆರೋಪಿಗಳ ಬಂಧನ!
shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 27 ರ ತರಕಾರಿ ಬೆಲೆಗಳ ವಿವರ