
soraba news | ಸೊರಬದಲ್ಲಿ ದಾರುಣ ಘಟನೆ : ವಿದ್ಯುತ್ ಶಾಕ್’ಗೆ ತುತ್ತಾದ ಪತ್ನಿ ರಕ್ಷಿಸಲು ತೆರಳಿದ ಪತಿಯೂ ಸಾ*ವು!
ಶಿವಮೊಗ್ಗ (shivamogga), ಜೂ. 25: ಮನೆಯಲ್ಲಿ ಬಟ್ಟೆ ಒಣಗಿಸಲು ಕಟ್ಟಿದ್ದ ತಂತಿಯಿಂದ, ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಶಾಕ್ ಗೆ ತುತ್ತಾದ ಪತ್ನಿ ರಕ್ಷಿಸಲು ತೆರಳಿದ್ದ ಪತಿಗೂ ವಿದ್ಯುತ್ ಶಾಕ್ ತಗುಲಿ, ದಂಪತಿ ಸ್ಥಳದಲ್ಲಿಯೇ ಮೃ*ತಪಟ್ಟ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ಜೂ. 26 ರ ರಾತ್ರಿ ನಡೆದಿದೆ.
ಪತಿ ಕೃಷ್ಣಪ್ಪ (50) ಹಾಗೂ ಅವರ ಪತ್ನಿ ವಿನೋದ (42) ಮೃ*ತಪಟ್ಟ ದಂಪತಿಗಳು ಎಂದು ಗುರುತಿಸಲಾಗಿದೆ. ಸಂಜೆ ಸರಿಸುಮಾರು 7 ಗಂಟೆ ವೇಳೆ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಮನೆಯಲ್ಲಿ ಬಟ್ಟೆ ಒಣಗಿಸಲು ಸ್ಟೀಲ್ ತಂತಿ ಕಟ್ಟಲಾಗಿತ್ತು. ಸದರಿ ತಂತಿಯ ಸಮೀಪದಿಂದಲೆ ಮನೆಯ ವಿದ್ಯುತ್ ಸಂಪರ್ಕದ ವೈಯರ್, ಇನ್ಸುಲೇಟರ್ ಹಾದು ಹೋಗಿವೆ.
ಬಟ್ಟೆ ಒಣಗಿಸಲು ಕಟ್ಟಿದ್ದ ತಂತಿಗೆ ಆಕಸ್ಮಿಕವಾಗಿ ಇನ್ಸುಲೇಟರ್ ಮೂಲಕ ವಿದ್ಯುತ್ ಪ್ರವಹಿಸಿದ್ದು, ಇದನ್ನು ಗಮನಿಸದ ವಿನೋದ ಅವರು ತಂತಿಗೆ ಬಟ್ಟೆ ಹಾಕಿದ್ದಾರೆ ಎನ್ನಲಾಗಿದೆ.
ಈ ವೇಳೆ ವಿದ್ಯುತ್ ಶಾಕ್ ಗೆ ತುತ್ತಾಗಿ ಒದ್ದಾಡಲಾರಂಭಿಸಿದ್ದಾರೆ. ತಕ್ಷಣವೇ ಅವರ ರಕ್ಷಣೆಗೆ ಮುಂದಾದ ಪತಿ ಕೃಷ್ಣಪ್ಪರಿಗೂ ಶಾಕ್ ತಗುಲಿದ್ದು, ಇಬ್ಬರೂ ಸ್ಥಳದಲ್ಲಿಯೇ ಬಿದ್ದು ಅ*ಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shivamogga, June 25: A horrific incident took place on the night of June 26 in Kappagalale village of Sorab taluk in Shivamogga district, where a wife was accidentally electrocuted by a wire hanging to dry clothes at home. The husband, who went to rescue her, also received an electric shock, resulting in the couple dying on the spot. A case has been registered at Soraba Police Station in this regard.