Registration of coaching centers is mandatory in Shivamogga district: Otherwise, a case will be filed! ಶಿವಮೊಗ್ಗ ಜಿಲ್ಲೆಯಲ್ಲಿ ಕೋಚಿಂಗ್ ಸೆಂಟರ್ಗಳ ನೋಂದಣಿ ಕಡ್ಡಾಯ : ಇಲ್ಲದಿದ್ದರೆ ಬೀಳುತ್ತೆ ಕೇಸ್!

shimoga | coaching center | ಶಿವಮೊಗ್ಗ ಜಿಲ್ಲೆಯಲ್ಲಿ ಕೋಚಿಂಗ್ ಸೆಂಟರ್‌ಗಳ ನೋಂದಣಿ ಕಡ್ಡಾಯ : ಇಲ್ಲದಿದ್ದರೆ ಬೀಳುತ್ತೆ ಕೇಸ್!

ಶಿವಮೊಗ್ಗ (shivamogga), ಜೂ. 28 : ಪದವಿ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದ ಕೋಚಿಂಗ್ ಸೆಂಟರ್ / ಸಂಸ್ಥೆಗಳ ನೊಂದಣಿ ಹಾಗೂ ನವೀಕರಣ ಕಡ್ಡಾಯವಾಗಿದೆ ಎಂದು ಶಿವಮೊಗ್ಗ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ಈ ಕುರಿತಂತೆ ಅವರು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಶಿಕ್ಷಣ ಕಾಯ್ದೆ 1983 ಅನುಚ್ಛೆದ 35 ರ ಪ್ರಕಾರ ಹಾಗೂ ಕರ್ನಾಟಕ ಟ್ಯುಟೋರಿಯಲ್ ಇನ್ಸ್ಟಿಟ್ಯೂಷನ್ಸ್ ನಿಯಮಗಳು – 2001 ನಿಯಮ ಪಾಲನೆ ನೀಡಬೇಕು ಎಂದು ಸೂಚಿಸಿದ್ದಾರೆ.

ಸದರಿ ನಿಯಮಗಳ ಅಡಿಯಲ್ಲಿ ಪದವಿ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದ ಕೋಚಿಂಗ್ ಸೆಂಟರ್ / ಸಂಸ್ಥೆ ಪ್ರಾರಂಭಿಸಲು ಹಾಗೂ ಈಗಾಗಲೇ ನಡೆಸುತ್ತಿರುವ ಕೋಚಿಂಗ್ ಸೆಂಟರ್ / ಸಂಸ್ಥೆಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು.

ಮತ್ತು ಪ್ರತಿ ವರ್ಷ ನವೀಕರಿಸಿಕೊಳ್ಳಬೇಕು. ಅನಧಿಕೃತವಾಗಿ ಕೋಚಿಂಗ್ ಸೆಂಟರ್ / ಸಂಸ್ಥೆಗಳನ್ನು ನಡೆಸುತ್ತಿರುವುದು ಕಂಡುಬಂದಲ್ಲಿ, ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ನಗರದ ಬಿ ಹೆಚ್ ರಸ್ತೆಯಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shivamogga, June 27: The Deputy Director of the Shivamogga Pre-University Education Department has stated that the registration and renewal of coaching centers/institutions related to pre-university education is mandatory.

shimoga | power cut | Power outage in various places in Shimoga city on June 29 shimoga | power cut | ಶಿವಮೊಗ್ಗ ನಗರದ ವಿವಿಧೆಡೆ ಜೂ. 29 ರಂದು ವಿದ್ಯುತ್ ವ್ಯತ್ಯಯ Previous post shimoga | power cut | ಶಿವಮೊಗ್ಗ ನಗರದ ವಿವಿಧೆಡೆ ಜೂ. 29 ರಂದು ವಿದ್ಯುತ್ ವ್ಯತ್ಯಯ
Only 16 feet left to fill Bhadra reservoir! ಭದ್ರಾ ಜಲಾಶಯ ಭರ್ತಿಗೆ ಕೇವಲ 16 ಅಡಿ ಬಾಕಿ Next post shimoga rain | ಭದ್ರಾ, ಲಿಂಗನಮಕ್ಕಿ ಡ್ಯಾಂಗಳ ನೀರಿನ ಸಂಗ್ರಹದಲ್ಲಿ ಗಣನೀಯ ಹೆಚ್ಚಳ!