Shivamogga: 5 baby cobras rescued from backyard! ಶಿವಮೊಗ್ಗ : ಮನೆ ಹಿತ್ತಲಿನಲ್ಲಿ 5 ನಾಗರಹಾವಿನ ಮರಿಗಳ ಸಂರಕ್ಷಣೆ!

shimoga news | ಶಿವಮೊಗ್ಗ : ಮನೆ ಹಿತ್ತಲಿನಲ್ಲಿ 5 ನಾಗರಹಾವಿನ ಮರಿಗಳ ಸಂರಕ್ಷಣೆ!

ಶಿವಮೊಗ್ಗ (shivamogga), ಜೂ. 29: ಮನೆಯೊಂದರ ಹಿತ್ತಲಿನಲ್ಲಿ ಕಾಣಿಸಿಕೊಂಡ 5 ನಾಗರಹಾವಿನ ಮರಿಗಳನ್ನು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ರಕ್ಷಣೆ ಮಾಡಿದ ಘಟನೆ, ಶಿವಮೊಗ್ಗ ನಗರದ ಹೊರವಲಯ ತೆವರೆಚಟ್ನಳ್ಳಿ ಗ್ರಾಮದಲ್ಲಿ ಜೂ. 29 ರಂದು ನಡೆದಿದೆ.

ಶರಣ್ ಎಂಬುವರ ಮನೆಯ ಹಿಂಭಾಗದ ಖಾಲಿ ಜಾಗದಲ್ಲಿ ಹಾವಿನ ಮರಿಗಳು ಕಾಣಿಸಿಕೊಂಡಿದ್ದವು. ತಕ್ಷಣವೇ ಅವರು ಸ್ನೇಕ್ ಕಿರಣ್ ಅವರಿಗೆ ಮಾಹಿತಿ ರವಾನಿಸಿದ್ದರು.

ಸ್ಥಳಕ್ಕಾಗಮಿಸಿದ ಕಿರಣ್ ಅವರು ಪ್ಲಾಸ್ಟಿಕ್ ಟಾರ್ಪಲ್ ಕೆಳಭಾಗ, ಪೊದೆಗಳಲ್ಲಿ ಅಡಗಿದ್ದ 5 ನಾಗರಹಾವಿನ ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಕೆಲ ನಾಗರಹಾವಿನ ಮರಿಗಳು ತಪ್ಪಿಸಿಕೊಂಡಿವೆ.

‘ಸುರಕ್ಷಿತವಾಗಿ ಹಾವಿನ ಮರಿಗಳನ್ನು ರಕ್ಷಿಸಲಾಗಿದೆ. ರಕ್ಷಣೆ ಮಾಡುವ ವೇಳೆ, ಕೆಲ ಹಾವಿನ ಮರಿಗಳು ಪೊದೆಗಳಲ್ಲಿ ತಪ್ಪಿಸಿಕೊಂಡಿವೆ. ಅವುಗಳು ಕಂಡ ವೇಳೆ ತಮಗೆ ಮಾಹಿತಿ ನೀಡುವಂತೆ ಕುಟುಂಬದವರಿಗೆ ತಿಳಿಸಲಾಗಿದೆ’ ಎಂದು ಸ್ನೇಕ್ ಕಿರಣ್ ಅವರು ಮಾಹಿತಿ ನೀಡಿದ್ದಾರೆ.

Shivamogga, June 29: An incident occurred on June 29 in Tyavarechatnalli village on the outskirts of Shivamogga city when reptile conservationist Snake Kiran rescued 5 baby cobras that were found in the backyard of a house.

shimoga APMC vegetable prices | Details of vegetable prices for July 8 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 29 ರ ತರಕಾರಿ ಬೆಲೆಗಳ ವಿವರ
The world-famous Jog Falls are overflowing with monsoon rains. ಜೋಗ ಜಲಪಾತಕ್ಕೆ ಮುಂದುವರಿದ ಜನಸಾಗರ..! Next post malnad rain | jogfalls | ಜೋಗ ಜಲಪಾತಕ್ಕೆ ಮುಂದುವರಿದ ಜನಸಾಗರ..!