Allowing alcohol consumption in front of the hotel and shop: File a case! ಹೋಟೆಲ್, ಅಂಗಡಿ ಮುಂಭಾಗ ಮದ್ಯ ಸೇವನೆಗೆ ಅವಕಾಶ : ಕೇಸ್ ದಾಖಲು!

shimoga | BREAKING NEWS |ಶಿವಮೊಗ್ಗ : ವ್ಯಕ್ತಿಯ ಭೀಕರ ಕೊ*ಲೆ – ಪರಿಚಯಸ್ಥರಿಂದಲೇ ಕೃತ್ಯ?

ಶಿವಮೊಗ್ಗ (shivamogga), ಜೂ. 30: ಮಚ್ಚಿನಿಂದ ಹೊಡೆದು ವ್ಯಕ್ತಿಯೋರ್ವನನ್ನು ಭೀಕರವಾಗಿ ಕೊ*ಲೆ ಮಾಡಿದ ಘಟನೆ, ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಚಿಕ್ಕಮರಸ ಗ್ರಾಮದಲ್ಲಿ ಜೂ. 29 ರ ರಾತ್ರಿ 9 ರಿಂದ 10 ಗಂಟೆ ನಡುವೆ ನಡೆದಿದೆ.

ಕುಂಸಿ ಗ್ರಾಮದ ನಿವಾಸಿಯಾದ ವಸಂತ್ (34) ಕೊ*ಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ವಿವಾಹಿತನಾಗಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಘಟನಾ ಸ್ಥಳಕ್ಕೆ ಇನ್ಸ್’ಪೆಕ್ಟರ್ ದೀಪಕ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ವಸಂತ್ ಕೊಲೆಗೆ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ. ಆದರೆ ಕುಂಸಿ ಗ್ರಾಮದ ಇಬ್ಬರು ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.

ಘಟನೆಯ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ಧಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Shivamogga, June 30: A man was brutally murdered by being beaten with a machete in Chikkamarasa village near Kusi in Shivamogga taluk on June 29 between 9 and 10 pm.

The world-famous Jog Falls are overflowing with monsoon rains. ಜೋಗ ಜಲಪಾತಕ್ಕೆ ಮುಂದುವರಿದ ಜನಸಾಗರ..! Previous post malnad rain | jogfalls | ಜೋಗ ಜಲಪಾತಕ್ಕೆ ಮುಂದುವರಿದ ಜನಸಾಗರ..!
shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 30 ರ ತರಕಾರಿ ಬೆಲೆಗಳ ವಿವರ