Three missing in Shivamogga-Bhadravati: Police appeal for help in finding them shimoga | bhadravati | ಶಿವಮೊಗ್ಗ – ಭದ್ರಾವತಿಯಲ್ಲಿ ಮೂವರು ಕಣ್ಮರೆ : ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ

shimoga | bhadravati | ಶಿವಮೊಗ್ಗ – ಭದ್ರಾವತಿಯಲ್ಲಿ ಮೂವರು ಕಣ್ಮರೆ : ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ

ಶಿವಮೊಗ್ಗ / ಭದ್ರಾವತಿ , ಜು. 1: ಪ್ರತ್ಯೇಕ ಘಟನೆಗಳಲ್ಲಿ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಮೂವರು ಪುರುಷರು ಕಣ್ಮರೆಯಾಗಿದ್ದು, ಇವರ ಪತ್ತೆಗೆ ಸಹಕರಿಸುವಂತೆ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಮನವಿ ಮಾಡಿದೆ. ನಾಪತ್ತೆಯಾದವರ ವಿವರ ಮುಂದಿನಂತಿದೆ.

ಪ್ರಕರಣ 1: ಭದ್ರಾವತಿ ಹೊಸಮನೆ ನಿವಾಸಿ ಪ್ರಶಾಂತ (41) ಎಂಬುವರು ಏಪ್ರಿಲ್ 07 ರಂದು, ಭದ್ರಾವತಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ಹಣ್ಣಿನ ಅಂಗಡಿಯಿಂದ ಕಣ್ಮರೆಯಾಗಿದ್ದಾರೆ.

ಕಾಣೆಯಾದ ವ್ಯಕ್ತಿಯು ಸುಮಾರು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು ಬಲಗಾಲಿನ ಪಾದದಿಂದ ಸ್ವಲ್ಪ ಮೇಲೆ ಆಪರೇಷನ್ ಗಾಯದ ಗುರುತು ಇರುತ್ತದೆ. ಕಾಣೆಯಾದ ವೇಳೆ ಹಳದಿ ಬಣ್ಣದ ಟೀ ಶರ್ಟ್, ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾರೆ.

ಕನ್ನಡ, ಉರ್ದು, ಮರಾಠಿ ಭಾಷೆ ಮಾತನಾಡುತ್ತಾರೆ. ಈತನ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಸಂಖ್ಯೆ : 08282-274313, 08282 266549, 08282 266252 ಅಥವಾ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಪ್ರಕರಣ 2: ಭದ್ರಾವತಿ ಜಿಂಕ್ ಲೈನ್ ಹೊಸ ಸಿದ್ದಾಪುರ ನಿವಾಸಿ ಆನಂದ ಕುಮಾರ್ (61) ಎಂಬುವರು  ಏಪ್ರಿಲ್ 6 ರಂದು ತಮ್ಮ ಮನೆಯಿಂದ ಕಾಣೆಯಾಗಿರುತ್ತಾರೆ. ಕಾಣೆಯಾದ ವ್ಯಕ್ತಿಯು ಸುಮಾರು 5.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು ಕಾಣೆಯಾದ ವೇಳೆ ಕೆಂಪು ಬಿಳಿ ಮಿಶ್ರ ಬಣ್ಣದ ಗೆರೆಗಳಿರುವ ಶರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಬಲ ಕೆನ್ನೆಯ ಮೇಲೆ ಒಂದು ಕಪ್ಪು ಬಣ್ಣದ ಮಚ್ಚೆ ಇದ್ದು, ಕನ್ನಡ, ತೆಲುಗು, ತಮಿಳು ಭಾಷೆ ಮಾತನಾಡುತ್ತಾರೆ. ಈತನ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಸಂಖ್ಯೆ : 08282-274313, 08282 266549, 08282 266252 ಅಥವಾ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಪ್ರಕರಣ 1: ಶಿವಮೊಗ್ಗ ತಾಲೂಕಿನ ಹಳೇ ಮಡಿಕೆ ಚೀಲೂರು ಗ್ರಾಮದ ಎ.ಕೆ.ಕಾಲೋನಿ ನಿವಾಸಿ ಅರುಣ್ ಕುಮಾರ್ (29) ಎಂಬ ಯುವಕ, ಮೇ 22 ರಂದು ಮನೆಯಿಂದ ಶಿವಮೊಗ್ಗ ನಗರಕ್ಕೆ ಹೋಗಿ ಬರುವುದಾಗಿ ಹೋದವರು ಇಲ್ಲಿಯವರೆಗೂ ಹಿಂದಿರುಗಿಲ್ಲ.

5.3 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಕಾಲು ಮತ್ತು ಎಡಕೈ ಬೆರಳು ಅಂಕವಿಕಲವಾಗಿದೆ. ನೆಲದ ಮೇಲೆ ಬಲಕೈ ಊರಿಕೊಂಡು ತೆವಳುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ತುಂಬುತೋಳಿನ ಶರ್ಟ್, ಕಪ್ಪು ಬಣ್ಣದ ಕಾಟನ್ ಪ್ಯಾಂಟ್ ಧರಿಸಿರುತ್ತಾರೆ.

ಈ ವ್ಯಕ್ತಿ ಬಗ್ಗೆ ಸುಳಿವು ದೊರೆತಲ್ಲಿ ಗ್ರಾಮಾಂತರ ವೃತ್ತ ಶಿವಮೊಗ್ಗ ಪೊಲೀಸ್ ಠಾಣೆ ದೂ.ಸಂ.: 08182-261418 /261400/ 9480803332/ 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Shivamogga / Bhadravati, July 1: Three men have gone missing in separate incidents in Shivamogga and Bhadravati, and the police department has appealed for help in locating them. The details of the missing persons are as follows.

‘Journalists should not try to favor with those in power!’: CM Siddaramaiah ‘ಪತ್ರಕರ್ತರು ಅಧಿಕಾರಸ್ಥರ ಓಲೈಕೆ ಮಾಡಬಾರದು!’ : ಸಿಎಂ ಸಿದ್ದರಾಮಯ್ಯ Previous post bengaluru | ಬೆಂಗಳೂರು | ‘ಪತ್ರಕರ್ತರು ಅಧಿಕಾರಸ್ಥರ ಓಲೈಕೆ ಮಾಡಬಾರದು!’ : ಸಿಎಂ ಸಿದ್ದರಾಮಯ್ಯ
Shimoga Municipality | Shimoga Municipality area revision: DC Gurudatta Hegde takes important step! ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಡಿಸಿ ಗುರುದತ್ತ ಹೆಗಡೆ ಮಹತ್ವದ ಕ್ರಮ! Next post shimoga palike | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಡಿಸಿ ಗುರುದತ್ತ ಹೆಗಡೆ ಮಹತ್ವದ ಕ್ರಮ!