thirthahalli | Thirthahalli - Car overturns near Mandagadde: Woman di**es! thirthahalli | ತೀರ್ಥಹಳ್ಳಿ - ಮಂಡಗದ್ದೆ ಬಳಿ ಕಾರು ಪಲ್ಟಿ : ಮಹಿಳೆ ಸಾ**ವು!

thirthahalli | ತೀರ್ಥಹಳ್ಳಿ – ಮಂಡಗದ್ದೆ ಬಳಿ ಕಾರು ಪಲ್ಟಿ : ಮಹಿಳೆ ಸಾ**ವು!

ಶಿವಮೊಗ್ಗ (shimoga), ಜು. 2: ಮಳೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು, ರಸ್ತೆ ಬದಿ ಪಲ್ಟಿಯಾಗಿ ಬಿದ್ದ ಪರಿಣಾಮ ಮಹಿಳೆಯೋರ್ವರು ಮೃ**ತಪಟ್ಟ ಘಟನೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಂಡಗದ್ದೆ ಸಮೀಪ ಜೂನ್ 29 ರಂದು ನಡೆದಿದೆ.

ಕುಂದಾಪುರ ತಾಲೂಕಿನ 59 ವರ್ಷದ ಮಹಿಳೆ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಉಳಿದಂತೆ ಕಾರಿನಲ್ಲಿದ್ದ ಇತರೆ ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಸದರಿ ಕಾರು ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗ ನಗರದೆಡೆಗೆ ಆಗಮಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಕಾರು ಪಲ್ಟಿಯಾದ ನಂತರ ರಸ್ತೆ ಸಮೀಪದ ನದಿ ದಂಡೆಯ ನೀರಿಗೆ ಬಿದ್ದಿದೆ. ಒಂದು ವೇಳೆ ನದಿಗೆ ಬಿದ್ದಿದ್ದರೆ ನೀರಿನಲ್ಲಿ ಕಾರು ಕೊಚ್ಚಿ ಹೋಗುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.

ಅವಘಡದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ವಾಹನವೊಂದರಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ್ದಾರೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್’ಪೆಕ್ಟರ್ ಕುಮಾರ್ ರವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga, July 2: An incident occurred on June 29 near the 17th milestone of Mandagadde under Malur police station limits in Thirthahalli taluk of Shivamogga district when the driver lost control of a car during heavy rain and overturned on the side of the road.

shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 2 ರ ತರಕಾರಿ ಬೆಲೆಗಳ ವಿವರ
Shivamogga: Police catch man selling marijuana! ಶಿವಮೊಗ್ಗ : ಗಾಂಜಾ ಮಾರುತ್ತಿದ್ದವ ಪೊಲೀಸ್ ಬಲೆಗೆ! Next post shimoga crime news | ಶಿವಮೊಗ್ಗ : ಗಾಂಜಾ ಮಾರುತ್ತಿದ್ದವ ಪೊಲೀಸ್ ಬಲೆಗೆ!