Shivamogga: Police catch man selling marijuana! ಶಿವಮೊಗ್ಗ : ಗಾಂಜಾ ಮಾರುತ್ತಿದ್ದವ ಪೊಲೀಸ್ ಬಲೆಗೆ!

shimoga crime news | ಶಿವಮೊಗ್ಗ : ಗಾಂಜಾ ಮಾರುತ್ತಿದ್ದವ ಪೊಲೀಸ್ ಬಲೆಗೆ!

ಶಿವಮೊಗ್ಗ (shivamogga), ಜು. 2: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಓರ್ವನನ್ನು ಸಿಇಎನ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ ಘಟನೆ, ಶಿವಮೊಗ್ಗ ನಗರದ ಹೊರವಲಯ ತ್ಯಾವರೆಚಟ್ನಳ್ಳಿಯ ಹೊನ್ನಾಳ್ಳಿ ರಸ್ತೆಗೆ ಹೊಂದಿಕೊಂಡಂತಿರುವ ಲೇಕ್ ವ್ಯೂ ರೆಸಿಡೆನ್ಸಿ ಸಮೀಪ ನಡೆದಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ಪಟ್ಟಣದ ಟಿಪ್ಪುನಗರ 4 ನೇ ಕ್ರಾಸ್ ನಿವಾಸಿ, ಚಾಲಕ ವೃತ್ತಿ ಮಾಡುವ ಮೊಹಮ್ಮದ್ ಜಮೀರ್ ಅಹಮದ್ (33) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಖಚಿತ ವರ್ತಮಾನದ ಮೇರೆಗೆ ಜು. 1 ರಂದು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಯಿಂದ 25 ಸಾವಿರ ರೂ. ಮೌಲ್ಯದ ಒಣ ಗಾಂಜಾ ಹಾಗೂ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಇಎನ್ ಠಾಣೆ ಡಿವೈಎಸ್ಪಿ ಕೃಷ್ಣಮೂರ್ತಿ ಕೆ ನೇತೃತ್ವದಲ್ಲಿ ಎಎಸ್ಐ ಶೇಖರ್, ಹೆಚ್’ಸಿ ಗಳಾದ ಕರಿಬಸಪ್ಪ, ಧರ್ಮಾನಾಯ್ಕ್, ಅವಿನಾಶ್, ಚಂದ್ರಶೇಖರ್, ಗಿರೀಶ್ ಸ್ವಾಮಿ, ಪಿಸಿ ಗಳಾದ ಸತ್ಯನಾರಾಯಣ ಸ್ವಾಮಿ, ಫಿರ್ದೋಸ್ ಅಹಮದ್, ರವಿ, ಆಂಡ್ರ್ಯೂಸ್ ಜೋನ್ಸ್, ಪ್ರಮೋದ್ ರವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ಧಾರೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shivamogga, July 2: The CEN Crime Station police arrested a man on charges of selling ganja near Lake View Residency, which is adjacent to Honnalli Road in Tyavarechatnalli on the outskirts of Shivamogga city.

thirthahalli | Thirthahalli - Car overturns near Mandagadde: Woman di**es! thirthahalli | ತೀರ್ಥಹಳ್ಳಿ - ಮಂಡಗದ್ದೆ ಬಳಿ ಕಾರು ಪಲ್ಟಿ : ಮಹಿಳೆ ಸಾ**ವು! Previous post thirthahalli | ತೀರ್ಥಹಳ್ಳಿ – ಮಂಡಗದ್ದೆ ಬಳಿ ಕಾರು ಪಲ್ಟಿ : ಮಹಿಳೆ ಸಾ**ವು!
Shimoga: Brother of Kumsi village - their arrest! ಶಿವಮೊಗ್ಗ : ಕುಂಸಿ ಗ್ರಾಮದ ಅಣ್ಣ – ತಮ್ಮ ಅರೆಸ್ಟ್! Next post shimoga crime news | ಶಿವಮೊಗ್ಗ : ಕುಂಸಿ ಗ್ರಾಮದ ಅಣ್ಣ – ತಮ್ಮ ಅರೆಸ್ಟ್!