Heavy rain: Holiday declared for schools and colleges in Hosanagar taluk on July 3rd! ಭಾರೀ ಮಳೆ : ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜು. 3 ರಂದು ರಜೆ ಘೋಷಣೆ!

hosanagara BREAKING NEWS | ಭಾರೀ ಮಳೆ : ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜುಲೈ 3 ರಂದು ರಜೆ ಘೋಷಣೆ!

ಹೊಸನಗರ (hosanagar), ಜು. 3: ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುಂದುವರಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜುಲೈ 3 ರ ಗುರುವಾರ ತಾಲೂಕು ಆಡಳಿತ ರಜೆ ಘೋಷಣೆ ಮಾಡಿದೆ.

ಈ ಕುರಿತಂತೆ ಹೊಸನಗರ ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ. ಹೊಸನಗರ ತಾಲೂಕಿನಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ, ಜು. 3 ರಂದು ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂಗಾರು ಚುರುಕು : ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಮತ್ತೆ ಮುಂಗಾರು ಮಳೆ ಚುರುಕುಗೊಂಡಿದೆ. ಆರಿದ್ರಾ ಮಳೆಯ ಅಬ್ಬರ ತೀವ್ರಗೊಂಡಿದ್ದು, ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. 

Hosanagar, Jul. 3: Heavy rains continue in the Malnad region. As a precautionary measure, the taluk administration has declared a holiday for schools and colleges in Hosanagar taluk on Thursday, July 3.

The Hosanagar Tehsildar has issued an order in this regard. they said that due to widespread rain in Hosanagar taluk, a holiday has been declared for Anganwadi, schools and colleges on July 3.

Shimoga: Brother of Kumsi village - their arrest! ಶಿವಮೊಗ್ಗ : ಕುಂಸಿ ಗ್ರಾಮದ ಅಣ್ಣ – ತಮ್ಮ ಅರೆಸ್ಟ್! Previous post shimoga crime news | ಶಿವಮೊಗ್ಗ : ಕುಂಸಿ ಗ್ರಾಮದ ಅಣ್ಣ – ತಮ್ಮ ಅರೆಸ್ಟ್!
Heavy rain: Holiday declared for schools and colleges in three taluks of Shivamogga district on July 4! ಭಾರೀ ಮಳೆ : ಶಿವಮೊಗ್ಗ ಜಿಲ್ಲೆಯ ಮೂರು ತಾಲೂಕಿನ ಶಾಲಾ – ಕಾಲೇಜುಗಳಿಗೆ ಜು. 4 ರಂದು ರಜೆ ಘೋಷಣೆ! Next post malnad rain | ಭಾರೀ ಮಳೆ : ಸಾಗರ, ತೀರ್ಥಹಳ್ಳಿ, ಹೊಸನಗರ ತಾಲೂಕುಗಳ ಶಾಲಾ – ಕಾಲೇಜುಗಳಿಗೆ ಜು. 3 ರಂದು ರಜೆ ಘೋಷಣೆ!