shimoga | Shivamogga: Car overturned – Life-threatening escape! ಶಿವಮೊಗ್ಗ : ಪಲ್ಟಿಯಾದ ಕಾರು – ಪ್ರಾಣಾಪಾಯದಿಂದ ಪಾರು!

shimoga | ಶಿವಮೊಗ್ಗ : ಪಲ್ಟಿಯಾದ ಕಾರು – ಪ್ರಾಣಾಪಾಯದಿಂದ ಪಾರು!

ಶಿವಮೊಗ್ಗ (shivamogga), ಜು. 5: ಮಳೆಯ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು, ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದ ಘಟನೆ, ಶಿವಮೊಗ್ಗ ನಗರದ ಹೊರವಲಯ ಗೋಂಧಿಚಟ್ನಳ್ಳಿ ಗ್ರಾಮದ ರಾಜ್ಯ ಹೆದ್ಧಾರಿಯಲ್ಲಿ ತಡರಾತ್ರಿ ನಡೆದಿದೆ.

ಕಾರಿನಲ್ಲಿ ತಂದೆ ಹಾಗೂ ಮಗ ಪ್ರಯಾಣಿಸುತ್ತಿದ್ದರು. ಇಬ್ಬರಿಗೂ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ಧಾರೆ. ಇವರು ಶಿವಮೊಗ್ಗದ ವಿನೋಬನಗರ ಬಡಾವಣೆ ನಿವಾಸಿಗಳಾಗಿದ್ಧಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸದರಿ ಕಾರು ಶಿವಮೊಗ್ಗದಿಂದ ಹೊನ್ನಾಳ್ಳಿ ಕಡೆಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಮೊದಲು ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದು, ನಂತರ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ ಎಂದು ಹೇಳಲಾಗಿದೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಐಸಿಎಎಫ್ಎಸ್ಟಿಓ ಹುಸೇನ್, ಎಎಫ್ಎಸ್ಟಿಓ ವಿಲ್ ಫ್ರೇಡ್, ಎಲ್ ಎಫ್ ಲೋಹಿತ್ ಕುಮಾರ್, ಎಫ್ ಡಿ ಶರತ್ ಕುಮಾರ್, ಎಫ್ ಎಂ ಎರ್ರಿಸ್ವಾಮಿ, ಕಿರಣ್ ಕುಮಾರ್ ದೌಡಾಯಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ.

Shivamogga, July 5: A car, which the driver lost control of during the rain, crashed into an electric pole on the side of the road and overturned, took place late last night on the state highway in Gondhichatnalli village on the outskirts of Shivamogga city.

Shivamogga: Hydrarama of a young man in the police station premises - Police are shocked! ಶಿವಮೊಗ್ಗ : ಠಾಣೆ ಆವರಣದ ಅರಳಿ ಮರವೇರಿ ಯುವಕನ ಹೈಡ್ರಾಮಾ - ಕಕ್ಕಾಬಿಕ್ಕಿಯಾದ ಪೊಲೀಸರು! Previous post shimoga BREAKING NEWS | ಶಿವಮೊಗ್ಗ : ಠಾಣೆ ಆವರಣದ ಅರಳಿ ಮರವೇರಿ ಯುವಕನ ಹೈಡ್ರಾಮಾ – ಕಕ್ಕಾಬಿಕ್ಕಿಯಾದ ಪೊಲೀಸರು!
Mysterious disappearance of a fishmonger in Shiralakoppa Shikaripura taluk! ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಮೀನು ವ್ಯಾಪಾರಿಯ ನಿಗೂಢ ಕಣ್ಮರೆ! Next post shiralkoppa news | ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಮೀನು ವ್ಯಾಪಾರಿಯ ನಿಗೂಢ ಕಣ್ಮರೆ!