Mysterious disappearance of a fishmonger in Shiralakoppa Shikaripura taluk! ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಮೀನು ವ್ಯಾಪಾರಿಯ ನಿಗೂಢ ಕಣ್ಮರೆ!

shiralkoppa news | ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಮೀನು ವ್ಯಾಪಾರಿಯ ನಿಗೂಢ ಕಣ್ಮರೆ!

ಶಿಕಾರಿಪುರ (shikaripura), ಜು.5: ಮೀನು ಮಾರಾಟಕ್ಕೆಂದು ತೆರಳಿದ ವ್ಯಾಪಾರಿಯೋರ್ವರು, ಮನೆಗೆ ಹಿಂದಿರುಗದೆ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ, ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ನಡೆದಿದೆ.

ಶಿರಾಳಕೊಪ್ಪ ಪಟ್ಟಣದ ಪಂಪ್ ಹೌಸ್ ಕೇರಿಯ 2 ನೇ ಕ್ರಾಸ್ ನಿವಾಸಿ, ಅಬ್ದುಲ್ ಮುನಾಫ್ (56) ನಾಪತ್ತೆಯಾದ ವ್ಯಾಪಾರಿಯೆಂದು ಗುರುತಿಸಲಾಗಿದೆ.

ಇವರು ಕಳೆದ ತಿಂಗಳು ಜೂನ್ 08 ರಂದು ಎಂದಿನಂತೆ ಶಿರಾಳಕೊಪ್ಪ ಪಟ್ಟಣದ ಮೀನು ಮಾರುಕಟ್ಟೆಗೆ ವ್ಯಾಪಾರಕ್ಕೆಂದು ಹೋದವರು ಮನೆಗೆ ಹಿಂದಿರುಗದೆ ಕಣ್ಮರೆಯಾಗಿದ್ದಾರೆ.

ಕಾಣೆಯಾದ ಅಬ್ದುಲ್ ಮುನಾಫ್ ಅವರು ಸುಮಾರು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಬಿಳಿ ಗಡ್ಡ ಮತ್ತು ತಲೆಯಲ್ಲಿ ಬಿಳಿ ಕೂದಲು ಇದ್ದು ಕಾಣೆಯಾದ ವೇಳೆ ಬಿಳಿ ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಕನ್ನಡ, ಹಿಂದಿ ಮತ್ತು ಉರ್ದು ಭಾಷೆಯನ್ನು ಮಾತನಾಡುತ್ತಾರೆ. ಯಾರಿಗಾದರೂ ಸದರಿ ವ್ಯಕ್ತಿಯ ಸುಳಿವು ಪತ್ತೆಯಾದಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆ ಸಂಖ್ಯೆ 8722983310, ಮೊ.ಸಂ: 9480803367 ನ್ನು ಸಂಪರ್ಕಿಸಬಹುದೆಂದು ಪೊಲೀಸ್ ಇಲಾಖೆ ಬಿಡಗುಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shivamogga, July 5: A trader who had gone to sell fish mysteriously disappeared without returning home. The incident took place in Shiralakoppa town of Shikaripura taluk.

shimoga | Shivamogga: Car overturned – Life-threatening escape! ಶಿವಮೊಗ್ಗ : ಪಲ್ಟಿಯಾದ ಕಾರು – ಪ್ರಾಣಾಪಾಯದಿಂದ ಪಾರು! Previous post shimoga | ಶಿವಮೊಗ್ಗ : ಪಲ್ಟಿಯಾದ ಕಾರು – ಪ್ರಾಣಾಪಾಯದಿಂದ ಪಾರು!
shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 6 ರ ತರಕಾರಿ ಬೆಲೆಗಳ ವಿವರ