Mini bus overturns at AA roundabout in Shimoga city! ಶಿವಮೊಗ್ಗ ನಗರದ ಎಎ ವೃತ್ತದಲ್ಲಿ ಪಲ್ಟಿಯಾದ ಮಿನಿ ಬಸ್!

shimoga accident news | ಶಿವಮೊಗ್ಗ ನಗರದ ಎಎ ವೃತ್ತದಲ್ಲಿ ಪಲ್ಟಿಯಾದ ಮಿನಿ ಬಸ್!

ಶಿವಮೊಗ್ಗ (shivamogga), ಜು. 6: ಜನ – ವಾಹನ ದಟ್ಟಣೆಯಿರುವ ಅಮೀರ್ ಅಹಮದ್ (ಎ ಎ ಸರ್ಕಲ್) ವೃತ್ತದಲ್ಲಿ, ಜು. 7 ರ ಬೆಳಿಗ್ಗೆ 8 ಗಂಟೆ ಸರಿಸುಮಾರಿಗೆ ಮಿನಿ ಬಸ್ ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದೆ.

ಘಟನೆಯಲ್ಲಿ ಬಸ್ ನಲ್ಲಿ ಕೇವಲ ಚಾಲಕ ಮಾತ್ರವಿದ್ದ. ಆತನ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎ ಎ ವೃತ್ತದಿಂದ ಗಾಂಧಿಬಜಾರ್ ಕಡೆ ಹೋಗುವ ಪುಟ್ ಪಾತ್ ಮೇಲೆ ಬಸ್ ಪಲ್ಟಿಯಾಗಿ ಬಿದ್ದಿದೆ. ಇದರಿಂದ ಫುಟ್ ಪಾತ್ ರೈಲಿಂಗ್ಸ್ ಗಳು ಕಿತ್ತು ಹೋಗಿವೆ. ಹಾಗೆಯೇ ಬಸ್ ನ ಒಂದು ಬದಿಯ ಕಿಟಕಿ ಗಾಜುಗಳು ಹಾನಿಯಾಗಿವೆ.

ವಿಷಯ ತಿಳಿಯುತ್ತಿದ್ದಂತೆ ಪಶ್ಚಿಮ ಟ್ರಾಫಿಕ್ ಠಾಣೆ ಸಬ್ ಇನ್ಸ್’ಪೆಕ್ಟರ್ ಭಾರತಿ ಮತ್ತವರ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿಯಿತ್ತು ಪರಿಶೀಲಿಸಿದರು. ಕ್ರೇನ್ ಮೂಲಕ ಬಸ್ ತೆರವುಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಆಟೋವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಟ್ರಾಫಿಕ್ ಪೊಲೀಸರು ಸರ್ಕಲ್ ನಲ್ಲಿರುವ ಸಿಸಿ ಕ್ಯಾಮರಾ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿದ್ದು, ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.

Shivamogga, Jul. 6: An incident occurred at around 8 am on Jul 7 when a minibus overturned at the busy Amir Ahmed (AA Circle) circle. West Traffic Station Sub-Inspector Bharathi and his staff visited the spot and inspected it. The bus was removed using a crane and smooth vehicular traffic was allowed.

shimoga APMC vegetable prices | Details of vegetable prices for July 8 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 7 ರ ತರಕಾರಿ ಬೆಲೆಗಳ ವಿವರ
Only 16 feet left to fill Bhadra reservoir! ಭದ್ರಾ ಜಲಾಶಯ ಭರ್ತಿಗೆ ಕೇವಲ 16 ಅಡಿ ಬಾಕಿ Next post shimoga | bhadra dam | ಭದ್ರಾ ಜಲಾಶಯ ಭರ್ತಿಗೆ ಕೇವಲ 16 ಅಡಿ ಬಾಕಿ!