
ಡಿಸಿ – ಎಸ್ಪಿ ಖಡಕ್ ಸೂಚನೆ : ಮರಳು, ಜಲ್ಲಿ ಕಲ್ಲು ಸಾಗಾಣೆ ಲಾರಿಗಳು ವಶ!
ತೀರ್ಥಹಳ್ಳಿ, ಎ. 15: ಕಾನೂನುಬಾಹಿರವಾಗಿ ನಡೆಯುತ್ತಿರುವ ಮರಳು ಹಾಗೂ ಜಲ್ಲಿ ಕಲ್ಲು ಸಾಗಣೆಗೆ ಕಡಿವಾಣ ಹಾಕುವಂತೆ ಡಿಸಿ ಡಾ.ಆರ್.ಸೆಲ್ವಮಣಿ ಹಾಗೂ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಖಡಕ್ ಸೂಚನೆ ರವಾನಿಸಿದ ಬೆನ್ನಲ್ಲೇ, ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಕಾನೂನುಬಾಹಿರ ಮರಳು – ಜಲ್ಲಿಕಲ್ಲು ಸಾಗಾಣೆ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.
ತೀರ್ಥಹಳ್ಳಿ ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಒಟ್ಟಾರೆ 11 ಮರಳು ಲಾರಿ ಹಾಗೂ 2 ಜಲ್ಲಿಕಲ್ಲು ಸಾಗಣೆ ಮಾಡುತ್ತಿದ್ದ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.
ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತರ, ತಹಶೀಲ್ದಾರ್ ಅಮೃತ್ ಅತ್ರೇಶ್ ಮಾರ್ಗದರ್ಶನದಲ್ಲಿ ಅಧಿಕಾರಿ ಸಿಬ್ಬಂದಿಗಳ ಮೂರು ಪ್ರತ್ಯೇಕ ತಂಡಗಳು ತೀರ್ಥಹಳ್ಳಿ ತಾಲೂಕಿನ ವಿವಿಧಡೆ ಕಾರ್ಯಾಚರಣೆ ನಡೆಸಿವೆ.
ಅರೇಹಳ್ಳಿ, ಮಳಲೂರು, ಬಗ್ಗೋಡಿಗೆ, ಆಗುಂಬೆ, ಮುಡುಬಾ, ಬುಕ್ಲಾಪುರಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ವಶಕ್ಕೆ ಪಡೆದ ಲಾರಿಗಳನ್ನು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
More Stories
ಶಿವಮೊಗ್ಗದಲ್ಲಿ ಮ್ಯಾರಥಾನ್ ಓಟ ಆಯೋಜನೆ
ಶಿವಮೊಗ್ಗ, ಆ. 14: ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಗರದ ನೆಹರೂ ಕ್ರೀಡಾಂಗಣದಿಂದ ಇಂದು ಮ್ಯಾರಥಾನ್ ಓಟ ಏರ್ಪಡಿಸಲಾಗಿತ್ತು. ಯುವಸಬಲೀಕರಣ...