‘ಅಣ್ಣ – ತಮ್ಮನ ಹಣಾಹಣಿಗೆ, ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ವೇದಿಕೆ ಸಿದ್ಧವಾಗಿದೆ. ಸತತ ನಾಲ್ಕನೇ ಬಾರಿ, ಚುನಾವಣಾ ಅಖಾಡದಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ‘ಸಹೋದರರ ಸವಾಲ್’ ನಿಂದ ಸೊರಬ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ!

ಅಣ್ಣ – ತಮ್ಮನ ಜಂಗೀ ಕುಸ್ತಿಗೆ ಸಿದ್ದವಾದ ಸೊರಬ ಕ್ಷೇತ್ರ!

*ಸತತ ನಾಲ್ಕನೇ ಬಾರಿ ಸಹೋದರರ ಸವಾಲ್..!!

-ಬಿ.ರೇಣುಕೇಶ್-

ಸೊರಬ, ಎ. 18: ‘ಅಣ್ಣ – ತಮ್ಮನ ಹಣಾಹಣಿಗೆ, ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ವೇದಿಕೆ ಸಿದ್ಧವಾಗಿದೆ. ಸತತ ನಾಲ್ಕನೇ ಬಾರಿ, ಚುನಾವಣಾ ಅಖಾಡದಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ‘ಸಹೋದರರ ಸವಾಲ್’ ನಿಂದ ಸೊರಬ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ!

ಹೌದು. ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ಪುತ್ರರಾದ ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ, ಪ್ರಸ್ತುತ ವಿಧಾನಸಭೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇಬ್ಬರ ನಡುವೆ ಆರೋಪ-ಪ್ರತ್ಯಾರೋಪಗಳು ತಾರಕ್ಕೇರಿದೆ. ಶತಾಯಗತಾಯ ಜಯ ಸಾಧಿಸಲೇಬೇಕೆಂಬ ಜಿದ್ದಿಗೆ ಬಿದ್ದಿದ್ದಾರೆ.

ಮುಖಾಮುಖಿ : 2004 ರಲ್ಲಿ ಎಸ್. ಬಂಗಾರಪ್ಪ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ ಅಂದು ಸೊರಬ ಕ್ಷೇತ್ರದ ಶಾಸಕರಾಗಿದ್ದ ಕುಮಾರ್ ಬಂಗಾರಪ್ಪ ತಂದೆ ಜೊತೆ ಹೆಜ್ಜೆ ಹಾಕಿರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದುಕೊಂಡಿದ್ದರು.

2004 ರ ವಿಧಾನಸಭೆ ಚುನಾವಣೆಯಲ್ಲಿ, ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಕುಮಾರ್ ಎದುರು ಬಿಜೆಪಿಯಿಂದ ಮಧುರನ್ನು ಬಂಗಾರಪ್ಪ ಅಖಾಡಕ್ಕಿಳಿಸಿದ್ದರು. ಮೊದಲ ಬಾರಿಗೆ ಸಹೋದರರು ಚುನಾವಣೆಯಲ್ಲಿ ಎದುರಾಳಿಗಳಾಗಿದ್ದರು. ಈ ಚುನಾವಣೆಯಲ್ಲಿ ಕುಮಾರ್ 44,677 ಮತ ಪಡೆದು ಜಯಭೇರಿ ಬಾರಿಸಿದ್ದರು. 32,748 ಮತ ಪಡೆದ ಮಧು ಪರಾಭವಗೊಂಡಿದ್ದರು.

2008 ರ ಚುನಾವಣೆಯು ಸಹೋದರರಿಬ್ಬರಿಗೂ ಕಹಿಯಾಗಿತ್ತು. ಮೊದಲ ಬಾರಿಗೆ ಸೊರಬ ಕ್ಷೇತ್ರ ಎಸ್.ಬಂಗಾರಪ್ಪ ಕುಟುಂಬದಿಂದ ಕೈ ಜಾರಿತ್ತು. ಸಹೋದರರ ಕಲಹದಲ್ಲಿ ಹರತಾಳು ಹಾಲಪ್ಪ ಅವರು 53,553 ಮತ ಪಡೆದು ವಿಜಯ ನಗೆ ಬೀರಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಕುಮಾರ್ 32,499 ಮತ ಹಾಗೂ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮಧು 31,135 ಮತ ಪಡೆದು ಸೋಲನುಭವಿಸಿದ್ದರು.

2013 ರಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದ ಮಧು 58,541 ಮತ ಪಡೆದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಕುಮಾರ್ 33,176, ಕೆಜೆಪಿಯಿಂದ ಕಣಕ್ಕಿಳಿದ ಹರತಾಳು ಹಾಲಪ್ಪ 37,316 ಹಾಗೂ ಬಿಜೆಪಿ ಹುರಿಯಾಳು ನಾಗರಾಜಗೌಡರವರು 5226 ಮತ ಪಡೆದಿದ್ದರು.

2018 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಕಣಕ್ಕಿಳಿದ ಕುಮಾರ್ 72,091 ಮತ ಪಡೆದು ಜಯ ಸಾಧಿಸಿದ್ದರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಧು 58,081 ಮತ ಪಡೆದು ಪರಾಭವಗೊಂಡಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ರಾಜು ಎಂ. ತಲ್ಲೂರು 21,721 ಮತ ಗಳಿಸಿದ್ದರು.

2023 ರ ಚುನಾವಣೆಯಲ್ಲಿ ಮತ್ತೆ ಕುಮಾರ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಆದರೆ ಮಧು ಜೆಡಿಎಸ್ ತೊರೆದು ಕಾಂಗ್ರೆಸ್ ನಿಂದ ಅಖಾಡಕ್ಕೆ ಧುಮುಕಿದ್ದಾರೆ. ಸದ್ಯದ ಸೊರಬ ಕ್ಷೇತ್ರದ ಚಿತ್ರಣ ಗಮನಿಸಿದರೆ ಇಬ್ಬರ ನಡುವೆ ನೇರ ಹಣಾಹಣಿ ಕಂಡುಬರುತ್ತಿದೆ. ಯಾರಿಗೆ ಜಯ ದೊರಕಲಿದೆ ಎಂಬುವುದು ಕಾಲವೇ ಉತ್ತರಿಸಬೇಕಾಗಿದೆ.

ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದ ಎಸ್.ಬಂಗಾರಪ್ಪ

*** ಸೊರಬ ವಿಧಾನಸಭಾ ಕ್ಷೇತ್ರವು, ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ಅವರ ಸ್ಪರ್ಧೆ ಕಾರಣದಿಂದಲೇ ಪ್ರತಿ ಅಸೆಂಬ್ಲಿ ಚುನಾವಣೆ ವೇಳೆ ರಾಜ್ಯದ ಗಮನ ಸೆಳೆಯುತ್ತಿತು. ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಏಳು ಚುನಾವಣೆಗಳಲ್ಲಿ ವಿವಿಧ ಪಕ್ಷಗಳಿಂದ ಕಣಕ್ಕಿಳಿದಿದ್ದ ಎಸ್.ಬಂಗಾರಪ್ಪ ಅವರು, ನಿರಂತರವಾಗಿ ಜಯ ಸಂಪಾದಿಸುವ ಮೂಲಕ ಸೋಲಿಲ್ಲದ ಸರದಾರ ಎಂದೇ ಬಿರುದು ಸಂಪಾದಿಸಿದ್ದರು. 1967 ರಿಂದ 1994 ರವರೆಗೆ ಎಸ್.ಬಂಗಾರಪ್ಪ ಅವರು ಕ್ಷೇತ್ರ ಪ್ರತಿನಿಧಿಸಿಕೊಂಡು ಬಂದಿದ್ದರು. ಪಕ್ಷಾಂತರ ಹಾಗೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದ ಕಾರಣದಿಂದ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪುತ್ರ ಕುಮಾರ್ ಬಂಗಾರಪ್ಪ ಅವರನ್ನು 1996 ರಲ್ಲಿ ಸೊರಬ ವಿಧಾನಸಭೆಗೆ ನಡೆದ ಉಪ ಚುನಾವಣೆ ವೇಳೆ ಅಖಾಡಕ್ಕಿಳಿಸಿದ್ದರು.

ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷ, 10 ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟಿಸಿದೆ. ಆದರೆ ಟಿ -20 ಕ್ರಿಕೆಟ್ ಮ್ಯಾಚ್ ನಷ್ಟೆ ಕುತೂಹಲ ಕೆರಳಿಸಿರುವ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಘೋಷಣೆಯಾಗಿಲ್ಲ. ಇದರಿಂದ ಕುತೂಹಲ ಮುಂದುವರಿಯುವಂತಾಗಿದೆ! ಪ್ರಸ್ತುತ ಶಿವಮೊಗ್ಗ ನಗರ ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ, ಬಿಜೆಪಿ ಪಕ್ಷ ಅಭ್ಯರ್ಥಿಗಳ ಹೆಸರು ಘೋಷಣೆ ಬಾಕಿ ಉಳಿಸಿಕೊಂಡಿದೆ. ಉಳಿದ ಎಲ್ಲ ಕ್ಷೇತ್ರಗಳಿಗೆ ಕಣಕ್ಕಿಳಿಯುವ ಉಮೇದುವಾರರ ಹೆಸರು ಪ್ರಕಟಿಸಿದೆ. Previous post ಮೂರನೇ ಪಟ್ಟಿಯಲ್ಲಿಯೂ ಪ್ರಕಟವಾಗದ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಸರು!
ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಘೋಷಣೆ ನಂತರ, ಕಾಂಗ್ರೆಸ್ ನಲ್ಲಿ ಭುಗಿಲೆದ್ದಿರುವ ಭಿನ್ನಮತ ಸದ್ಯಕ್ಕೆ ಶಮನಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿಲ್ಲ. ದಿಢೀರ್ ವಿದ್ಯಮಾನವೊಂದರಲ್ಲಿ, ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಕಾಂಗ್ರೆಸ್ ತ್ಯಜಿಸಿ, ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರಲಾರಂಭಿಸಿದೆ! Next post ಶಿವಮೊಗ್ಗ ನಗರ ಕ್ಷೇತ್ರ ಕಾಂಗ್ರೆಸ್ ಭಿನ್ನಮತ : ಮಾಜಿ ಶಾಸಕರ ಬಂಡಾಯ – ಜೆಡಿಎಸ್ ನಿಂದ ಕಣಕ್ಕೆ?!