: ಶಿವಮೊಗ್ಗ ಜಿಲ್ಲೆ ಕರ್ನಾಟಕ ರಾಜಕೀಯ ರಂಗದ ಶಕ್ತಿ ಕೇಂದ್ರಗಳಲ್ಲೊಂದು. ಇಲ್ಲಿನ ಹಲವು ನಾಯಕರು, ರಾಜ್ಯ ರಾಜಕೀಯ ಇತಿಹಾಸದಲ್ಲಿ ಹೆಸರುವಾಸಿಯಾಗಿದ್ದಾರೆ. ಆದರೆ ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ, ಬಿಜೆಪಿ ಹಾಗೂ ಕಾಂಗ್ರೆಸ್ ನ ಪ್ರಮುಖ ನಾಯಕರು ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದಾರೆ. ಇವರ ಹಲವು ದಶಕಗಳ ‘ಎಲೆಕ್ಷನ್ ಹೋರಾಟ’ಕ್ಕೆ ಪೂರ್ಣ ವಿರಾಮ ಬೀಳುವಂತಾಗಿದೆ! ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಕ್ರಿಯವಾಗಿದ್ದ ಬಿಜೆಪಿ ಪಕ್ಷದ ನಾಯಕರಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹಾಗೂ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪರವರು ಪ್ರಸ್ತುತ ಚುನಾವಣಾ ಕಣದಿಂದ ದೂರ ಉಳಿದಿದ್ದಾರೆ.

ಚುನಾವಣೆಗಳಿಂದ ನೇಪಥ್ಯಕ್ಕೆ ಸರಿದ ಯಡಿಯೂರಪ್ಪ – ಈಶ್ವರಪ್ಪ – ಕಾಗೋಡು ತಿಮ್ಮಪ್ಪ!

ಸದ್ದಿಲ್ಲದೆ ರಾಜಕಾರಣದಿಂದಲೇ ದೂರ ಉಳಿದ ಡಿ.ಹೆಚ್.ಶಂಕರಮೂರ್ತಿ..!!

-ಬಿ.ರೇಣುಕೇಶ್-

ಶಿವಮೊಗ್ಗ ಜಿಲ್ಲೆ ಕರ್ನಾಟಕ ರಾಜಕೀಯ ರಂಗದ ಶಕ್ತಿ ಕೇಂದ್ರಗಳಲ್ಲೊಂದು. ಇಲ್ಲಿನ ಹಲವು ನಾಯಕರು, ರಾಜ್ಯ ರಾಜಕಾರಣದಲ್ಲಿ ಹೆಸರುವಾಸಿಯಾಗಿದ್ದಾರೆ. ಆದರೆ ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ, ಬಿಜೆಪಿ ಹಾಗೂ ಕಾಂಗ್ರೆಸ್ ನ ಪ್ರಮುಖ ನಾಯಕರು ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದಾರೆ. ಇವರ ಹಲವು ದಶಕಗಳ  ‘ಎಲೆಕ್ಷನ್ ಹೋರಾಟ’ಕ್ಕೆ ಪೂರ್ಣ ವಿರಾಮ ಬೀಳುವಂತಾಗಿದೆ!

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕಿಳಿದಿದ್ದ ಬಿಜೆಪಿ ಪಕ್ಷದ ನಾಯಕರಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹಾಗೂ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರಸ್ತುತ ಚುನಾವಣಾ ಕಣದಿಂದ ದೂರ ಉಳಿದಿದ್ದಾರೆ.

ಯಡಿಯೂರಪ್ಪ ಮಾತ್ರ ತಾವು ಪ್ರತಿನಿಧಿಸಿಕೊಂಡು ಬರುತ್ತಿದ್ದ ಶಿಕಾರಿಪುರ ಕ್ಷೇತ್ರದಲ್ಲಿ, ಪುತ್ರ ಬಿ.ವೈ.ವಿಜಯೇಂದ್ರಗೆ ಅವಕಾಶ ಕಲ್ಪಿಸುವಲ್ಲಿ ಯಶವಾಗಿದ್ದಾರೆ. ಆದರೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಪುತ್ರ ಕೆ.ಇ.ಕಾಂತೇಶ್’ಗೆ ಅವಕಾಶ ಕಲ್ಪಿಸುವ ಈಶ್ವರಪ್ಪ ಯತ್ನ ಹಾಗೂ ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಪುತ್ರಿ ರಾಜನಂದಿನಿ ಕಣಕ್ಕಿಳಿಸುವ ಕಾಗೋಡು ಕಸರತ್ತಿಗೆ ಫಲ ದೊರಕಿಲ್ಲ!

ಈ ಮೂವರು ನಾಯಕರು ಚುನಾವಣೆ ಸ್ಪರ್ಧೆಯಿಂದ ದೂರವಿದ್ದರೂ, ರಾಜಕೀಯ ನಂಟಿನಿಂದ ಮಾತ್ರ ದೂರ ಉಳಿದಿಲ್ಲ. ಪ್ರಸ್ತುತ ಚುನಾವಣೆಯಲ್ಲಿಯೂ ಜಿಲ್ಲೆಯಲ್ಲಿ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯ ಮುನ್ನಲೆಯಲ್ಲಿರುವುದು ವಿಶೇಷ.

ಸದ್ದುಗದ್ದಲವಿಲ್ಲದೆ ಸಕ್ರಿಯ ರಾಜಕಾರಣದಿಂದಲೇ ದೂರವಾದ ಡಿ.ಹೆಚ್.ಶಂಕರಮೂರ್ತಿ

ಬಿಜೆಪಿ ಪಕ್ಷದ ಹಿರಿಯ ನಾಯಕ ಹಾಗೂ ಸಜ್ಜನ ರಾಜಕಾರಣಿ ಎಂದೇ ಕರೆಯಿಸಿಕೊಳ್ಳುತ್ತಿದ್ದ, ಡಿ.ಹೆಚ್.ಶಂಕರಮೂರ್ತಿ ಅವರು ಯಾವುದೇ ಸದ್ದುಗದ್ದಲವಿಲ್ಲದೆ ಕಳೆದ ಹಲವು ವರ್ಷಗಳ ಹಿಂದೆಯೇ ಸಕ್ರಿಯ ರಾಜಕಾರಣದಿಂದಲೇ ದೂರ ಸರಿದಿದ್ದಾರೆ. ನೈರುತ್ಯ ಪದವೀಧರ ವಿಧಾನ ಪರಿಷತ್ ಕ್ಷೇತ್ರದಿಂದ 1988 ರಿಂದ 2012 ರವರೆಗೆ ಸತತ 5 ಚುನಾವಣೆಗಳಲ್ಲಿ ಡಿ.ಹೆಚ್.ಎಸ್. ಸ್ಪರ್ಧಿಸಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದರು.

ಬಿಜೆಪಿ ಪಕ್ಷದ ಹಿರಿಯ ನಾಯಕ ಹಾಗೂ ಸಜ್ಜನ ರಾಜಕಾರಣಿ ಎಂದೇ ಕರೆಯಿಸಿಕೊಳ್ಳುತ್ತಿದ್ದ, ಡಿ.ಹೆಚ್.ಶಂಕರಮೂರ್ತಿ ಅವರು ಯಾವುದೇ ಸದ್ದುಗದ್ದಲವಿಲ್ಲದೆ ಕಳೆದ ಹಲವು ವರ್ಷಗಳ ಹಿಂದೆಯೇ ಸಕ್ರಿಯ ರಾಜಕಾರಣದಿಂದಲೇ ದೂರ ಸರಿದಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದಿಂದ 1988 ರಿಂದ 2012 ರವರೆಗೆ ಸತತ 5 ಚುನಾವಣೆಗಳಲ್ಲಿ ಡಿ.ಹೆಚ್.ಎಸ್. ಸ್ಪರ್ಧಿಸಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದರು.

ಆದರೆ 70-80 ರ ದಶಕದಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಸಚಿವರಾಗಿ, ವಿಧಾನ ಪರಿಷತ್ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಬಿಜೆಪಿ ಪಕ್ಷದ ಹಲವು ಹುದ್ದೆಗಳನ್ನು ನಿಭಾಯಿಸಿದ್ದರು. 2017 ರಲ್ಲಿ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಪುತ್ರ ಡಿ.ಎಸ್.ಅರುಣ್ ರನ್ನು ಕಣಕ್ಕಿಳಿಸುವ ಇರಾದೆ ಡಿ.ಹೆಚ್.ಎಸ್. ಅವರದ್ದಾಗಿತ್ತು. ಆದರೆ ಬಿಜೆಪಿ ವರಿಷ್ಠರು ಆಯನೂರು ಮಂಜುನಾಥ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಡಿ.ಎಸ್.ಅರುಣ್ ಅವರಿಗೆ ವಿಧಾನ ಪರಿಷತ್ ನ ಸ್ಥಳೀಯ ಸಂಸ್ಥೆಗಳ ಶಿವಮೊಗ್ಗ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಅವಕಾಶ ಮಾಡಿಕೊಟ್ಟಿತ್ತು.

8 ಸ್ಪರ್ಧೆ : 7 ಗೆಲುವು – 1 ಸೋಲು!

*** ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರದಿಂದ ಒಟ್ಟಾರೆ 8 ಬಾರಿ ವಿಧಾನಸಭೆ ಚುನಾವಣಾ ಕಣಕ್ಕಿಳಿದಿದ್ದಾರೆ. 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಒಮ್ಮೆ ಸೋಲನುಭವಿಸಿದ್ದರು. 1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ, ಮೊದಲ ಯತ್ನದಲ್ಲಿಯೇ ಜಯಗಳಿಸಿ ವಿಧಾನಸಭೆ ಪ್ರವೇಶಿಸಿದ್ದರು. 1999 ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದರು. ನಂತರದ ಚುನಾವಣೆಗಳಲ್ಲಿ ಅವರು ನಿರಂತರವಾಗಿ ಜಯ ಸಾಧಿಸಿಕೊಂಡು ಬಂದಿದ್ದರು

*** ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರದಿಂದ ಒಟ್ಟಾರೆ 8 ಬಾರಿ ವಿಧಾನಸಭೆ ಚುನಾವಣಾ ಕಣಕ್ಕಿಳಿದಿದ್ದಾರೆ. 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಒಮ್ಮೆ ಸೋಲನುಭವಿಸಿದ್ದರು. 1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ, ಮೊದಲ ಯತ್ನದಲ್ಲಿಯೇ ಜಯಗಳಿಸಿ ವಿಧಾನಸಭೆ ಪ್ರವೇಶಿಸಿದ್ದರು. 1999 ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದರು. ನಂತರದ ಚುನಾವಣೆಗಳಲ್ಲಿ ಅವರು ನಿರಂತರವಾಗಿ ಜಯ ಸಾಧಿಸಿಕೊಂಡು ಬಂದಿದ್ದರು

7 ಸ್ಪರ್ಧೆ : 5 ಗೆಲುವು – 2 ಸೋಲು..!

*** ಕೆ.ಎಸ್.ಈಶ್ವರಪ್ಪ ಅವರು ಒಟ್ಟಾರೆ 7 ಬಾರಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದರಲ್ಲಿ 5 ಬಾರಿ ಜಯಶೀಲರಾಗಿದ್ದರೆ, ಎರಡು ಬಾರಿ ಸೋತಿದ್ದಾರೆ. 1989 ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಜಯ ಸಾಧಿಸಿದ್ದರು. 1999 ಹಾಗೂ 2013 ರಲ್ಲಿ ಕಾಂಗ್ರೆಸ್ ಅವರು ಪರಾಭವಗೊಂಡಿದ್ದರು.

*** ಕೆ.ಎಸ್.ಈಶ್ವರಪ್ಪ ಅವರು ಒಟ್ಟಾರೆ 7 ಬಾರಿ ಶಿವಮೊಗ್ಗ ನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದರಲ್ಲಿ 5 ಬಾರಿ ಜಯಶೀಲರಾಗಿದ್ದರೆ, ಎರಡು ಬಾರಿ ಸೋತಿದ್ದಾರೆ. 1989 ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಜಯ ಸಾಧಿಸಿದ್ದರು. 1999 ಹಾಗೂ 2013 ರಲ್ಲಿ ಅವರು ಪರಾಭವಗೊಂಡಿದ್ದರು.

12 ಸ್ಪರ್ಧೆ – 5 ಗೆಲುವು, 7 ಸೋಲು

ಕಾಗೋಡು ತಿಮ್ಮಪ್ಪ ಅವರು ಒಟ್ಟಾರೆ 12 ಬಾರಿ ವಿಧಾನಸಭೆ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಇದರಲ್ಲಿ 5 ಬಾರಿ ಜಯ ಸಾಧಿಸಿದ್ದಾರೆ. 7 ಬಾರಿ ಪರಾಭವಗೊಂಡಿದ್ದಾರೆ. ಒಮ್ಮೆ ಅವರು ಸೊರಬದಿಂದ ಕಣಕ್ಕಿಳಿದಿದ್ದು ಹೊರತುಪಡಿಸಿದರೆ, ಉಳಿದ ಅವರ ಎಲ್ಲ ಸ್ಪರ್ಧೆಯು ಸಾಗರ ಕ್ಷೇತ್ರವಾಗಿತ್ತು. 1962 ರಲ್ಲಿ ಮೊದಲ ಬಾರಿಗೆ ಕಾಗೋಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಮೊದಲ ಯತ್ನದಲ್ಲಿಯೇ ಪರಾಭವಗೊಂಡಿದ್ದರು. 1983 ರಲ್ಲಿ ಸೊರಬದಿಂದ ಅವರು ಕಣಕ್ಕಿಳಿದು ಪರಾಭವಗೊಂಡಿದ್ದರು. 1985 ರಲ್ಲಿ ಅವರು ಅಸೆಂಬ್ಲಿ ಎಲೆಕ್ಷನ್ ಗೆ ಸ್ಪರ್ಧಿಸಿರಲಿಲ್ಲ. ತದನಂತರ 1989 ರಿಂದ 2018 ರವರೆಗೆ ಅವರು ಸಾಗರದಿಂದ ಸತತವಾಗಿ ಕಣಕ್ಕಿಳಿದಿದ್ದರು.

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ರಾಜಕಾರಣ ಕಾವೇರಲಾರಂಭಿಸಿದೆ. ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಗುರುವಾರ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದಾರೆ. Previous post ಕಾವೇರಿದ ಶಿವಮೊಗ್ಗ ನಗರ ಕ್ಷೇತ್ರದ ರಾಜಕಾರಣ! : ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಹುರಿಯಾಳುಗಳಿಂದ ನಾಮಪತ್ರ ಸಲ್ಲಿಕೆ
ಜೆಡಿಎಸ್ ಗೆ ಜೈ ಎಂದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್! ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಬೆಂಗಳೂರು/ಶಿವಮೊಗ್ಗ, ಎ. 21: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು, ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ. Next post ಕಾಂಗ್ರೆಸ್’ಗೆ ಗುಡ್ ಬೈ ; ಜೆಡಿಎಸ್ ಗೆ ಜೈ ಎಂದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್!