ಸಮಾಜವಾದಿಗಳ ತವರು, ಪ್ರಜ್ಞಾವಂತ, ಪ್ರಬುದ್ಧ ಮತದಾರರ ಕ್ಷೇತ್ರವೆಂದೇ ಕರೆಯಲಾಗುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ವಿಧಾನಸಭಾ ಚುನಾವಣಾ ಕಣ ಕಾವೇರಿದೆ. ಹಾಲಿ – ಮಾಜಿ ಸಚಿವರುಗಳ ನಡುವೆ ಜಿದ್ದಾಜಿದ್ದಿನ ಅಖಾಡಕ್ಕೆ ವೇದಿಕೆ ಸಿದ್ದವಾಗಿದೆ! ಹೌದು. 1989 ರಿಂದ 2018 ರವರೆಗೆ ನಡೆದ 5 ಚುನಾವಣೆಗಳಲ್ಲಿ ಪರಸ್ಪರ ಎದುರಾಳಿಗಳಾಗಿದ್ದ, ಹಾಲಿ ಗೃಹ ಸಚಿವರೂ ಆದ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವರೂ ಆದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಅವರು, 2023 ರ ಅಸೆಂಬ್ಲಿ ಚುನಾವಣೆಯಲ್ಲಿ 6 ನೇ ಬಾರಿ ಮುಖಾಮುಖಿಯಾಗುತ್ತಿದ್ದಾರೆ.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ : ಕುತೂಹಲ ಮೂಡಿಸಿದ ಹಾಲಿ – ಮಾಜಿ ಸಚಿವರ ಕೊನೆಯ ಚುನಾವಣೆ!

ಸತತ 6 ನೇ ಬಾರಿ ಮುಖಾಮುಖಿಯಾಗುತ್ತಿರುವ ಆರಗ ಜ್ಞಾನೇಂದ್ರ – ಕಿಮ್ಮನೆ ರತ್ನಾಕರ್

-ಬಿ.ರೇಣುಕೇಶ್-

ಸಮಾಜವಾದಿಗಳ ತವರು, ಪ್ರಜ್ಞಾವಂತ, ಪ್ರಬುದ್ಧ ಮತದಾರರ ಕ್ಷೇತ್ರವೆಂದೇ ಕರೆಯಲಾಗುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ವಿಧಾನಸಭಾ ಚುನಾವಣಾ ಕಣ ಕಾವೇರಿದೆ. ಹಾಲಿ – ಮಾಜಿ ಸಚಿವರುಗಳ ನಡುವೆ ಜಿದ್ದಾಜಿದ್ದಿನ ಅಖಾಡಕ್ಕೆ ವೇದಿಕೆ ಸಿದ್ದವಾಗಿದೆ!

1999 ರಿಂದ 2018 ರವರೆಗೆ ನಡೆದ 5 ಚುನಾವಣೆಗಳಲ್ಲಿ ಪರಸ್ಪರ ಎದುರಾಳಿಗಳಾಗಿದ್ದ, ಹಾಲಿ ಗೃಹ ಸಚಿವರೂ ಆದ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವರೂ ಆದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಅವರು, 2023 ರ ಅಸೆಂಬ್ಲಿ ಚುನಾವಣೆಯಲ್ಲಿ 6 ನೇ ಬಾರಿ ಮುಖಾಮುಖಿಯಾಗುತ್ತಿದ್ದಾರೆ.

ಕಳೆದ 5 ಚುನಾವಣೆಗಳಲ್ಲಿ ಆರಗ 3 ಬಾರಿ ಹಾಗೂ ಕಿಮ್ಮನೆ 2 ಬಾರಿ ಜಯ ಸಾಧಿಸಿದ್ದಾರೆ. ಈ ಬಾರಿ ಜಯ ಯಾರದ್ದಾಗಿರಲಿದೆ ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಈಗಾಗಲೇ ಈ ಇಬ್ಬರು ನಾಯಕರು, ‘ಇದೇ ಕೊನೆಯ ಚುನಾವಣೆ. ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ..’ ಎಂದು ಘೋಷಿಸಿಕೊಂಡಿದ್ದಾರೆ. ಈ ಕಾರಣದಿಂದಲೇ ಈ ಇಬ್ಬರು ನಾಯಕರಿಗೆ ಪ್ರಸ್ತುತ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಶತಾಯಗತಾಯ ಜಯ ಸಾಧಿಸಲೇಬೇಕೆಂಬ ಜಿದ್ದಿಗೆ ಬಿದ್ದಿದ್ದಾರೆ.

ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಕ್ಷೇತ್ರ ಸುತ್ತು ಹಾಕುತ್ತಿದ್ದಾರೆ. ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದಾರೆ. ಮತದಾರರ ಮನವೊಲಿಕೆಯ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಹಾಗೆಯೇ ಆರೋಪ – ಪ್ರತ್ಯಾರೋಪಗಳು ಬಿರುಸುಗೊಂಡಿವೆ.

ಸಂಕ್ಷಿಪ್ತ ನೋಟ: 1983 ರಲ್ಲಿ 30 ನೇ ವಯಸ್ಸಿನಲ್ಲಿ ಆರಗ ಮೊದಲ ಬಾರಿಗೆ ಅಸೆಂಬ್ಲಿ ಚುನಾವಣಾ ಕಣಕ್ಕಿಳಿದಿದ್ದರು. ಮೊದಲ ಚುನಾವಣೆಯಲ್ಲಿ ಸೋಲನುಭವಿಸಿದ್ದರು. 1999 ರಲ್ಲಿ 48 ನೇ ವಯೋಮಾನದಲ್ಲಿ ಕಿಮ್ಮನೆ ಪ್ರಥಮ ಬಾರಿಗೆ ಚುನಾವಣಾ ಅಖಾಡಕ್ಕಿಳಿದು ಪರಾಭವಗೊಂಡಿದ್ದರು.

ಆರಗ ಸತತ ಮೂರು (1983, 1985, 1989) ಸೋಲುಗಳ ನಂತರ 1994 ರಲ್ಲಿ ಕಣಕ್ಕಿಳಿದ ನಾಲ್ಕನೇ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರು. ಕಿಮ್ಮನೆ ಮೊದಲೆರೆಡು (1999, 2004) ಚುನಾವಣೆಗಳಲ್ಲಿ ಸೋಲನುಭವಿಸಿ, 2009 ರಲ್ಲಿ ಕಣಕ್ಕಿಳಿದ ಮೂರನೇ ಚುನಾವಣೆಯಲ್ಲಿ ಜಯದ ನಗೆ ಬೀರಿದ್ದರು.

ಆರಗ ಸತತ ಮೂರು ಚುನಾವಣೆಗಳಲ್ಲಿ ಸೋಲನುಭವಿಸಿದ ನಂತರ, ಮುಂದಿನ ಮೂರು ಚುನಾವಣೆ (1994, 1999, 2004) ರಲ್ಲಿ ಸತತ ಜಯ ಸಂಪಾದಿಸಿದ್ದು ವಿಶೇಷವಾಗಿದೆ. , ಶಾಂತವೇರಿ ಗೋಪಾಲಗೌಡ ನಂತರ, ತೀರ್ಥಹಳ್ಳಿ ಕ್ಷೇತ್ರದಲ್ಲಿ ಸತತ ಎರಡು ಬಾರಿ ಯಾರು ವಿಧಾನಸಭೆಗೆ ಆಯ್ಕೆಯಾಗಿರಲಿಲ್ಲ. ಆದರೆ, ಜ್ಞಾನೇಂದ್ರ ಅವರು ಸತತ 3 ಬಾರಿ ಗೆದ್ದು ದಾಖಲೆ ಮಾಡಿದ್ದರು.

ಕಡಿದಾಳ್ ಮಂಜಪ್ಪ ಅವರ ನಂತರ ಶಾಸಕರಾದವರು ಸಚಿವರಾಗಿರಲಿಲ್ಲ. ಆದರೆ ಐದೂವರೆ ದಶಕಗಳ ಬಳಿಕ ಕಿಮ್ಮನೆ ಸಚಿವರಾಗುವ ಮೂಲಕ ಕ್ಷೇತ್ರದ ರಾಜಕಾರಣ ಪುಸ್ತಕದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದರು.

9 ಸ್ಪರ್ಧೆ : 4 ಗೆಲುವು – 5 ಸೋಲು!

*** ಆರಗ ಜ್ಞಾನೇಂದ್ರ ಬಿಜೆಪಿಯಿಂದ ತೀರ್ಥಹಳ್ಳಿ ಕ್ಷೇತ್ರದಲ್ಲಿ, 1983 ರಿಂದ 2018 ರವರೆಗೆ ಒಟ್ಟಾರೆ 9 ಬಾರಿ ಚುನಾವಣಾ ಕಣಕ್ಕಿಳಿದಿದ್ದಾರೆ. ಇದರಲ್ಲಿ 4 ಬಾರಿ ಜಯ ಸಾಧಿಸಿದ್ದರೆ, 5 ಬಾರಿ ಪರಾಭವಗೊಂಡಿದ್ದಾರೆ. 1983 ಮೊದಲ ಚುನಾವಣೆಯಲ್ಲಿ 17,278 ಮತ ಪಡೆದು ಮೂರನೇ ಸ್ಥಾನ ಪಡೆದಿದ್ದರು. ಆದರೆ 1985 ರಲ್ಲಿ ಮತಗಳಿಕೆ ಪ್ರಮಾಣ 8625 ಕ್ಕೆ ಇಳಿಕೆಯಾಗಿತ್ತು. 1989 ರಲ್ಲಿ 18,142 ಮತ ಪಡೆದಿದ್ದರು. ಹಿಂದಿನ ಎರಡು ಚುನಾವಣೆಯಲ್ಲಿ 3 ನೇ ಸ್ಥಾನ ಪಡೆದಿದ್ದರು.

*** ಆರಗ ಜ್ಞಾನೇಂದ್ರ ಬಿಜೆಪಿಯಿಂದ ತೀರ್ಥಹಳ್ಳಿ ಕ್ಷೇತ್ರದಲ್ಲಿ, 1983 ರಿಂದ 2018 ರವರೆಗೆ ಒಟ್ಟಾರೆ 9 ಬಾರಿ ಚುನಾವಣಾ ಕಣಕ್ಕಿಳಿದಿದ್ದಾರೆ. ಇದರಲ್ಲಿ 4 ಬಾರಿ ಜಯ ಸಾಧಿಸಿದ್ದರೆ, 5 ಬಾರಿ ಪರಾಭವಗೊಂಡಿದ್ದಾರೆ. 1983 ಮೊದಲ ಚುನಾವಣೆಯಲ್ಲಿ 17,278 ಮತ ಪಡೆದು ಮೂರನೇ ಸ್ಥಾನ ಪಡೆದಿದ್ದರು. ಆದರೆ 1985 ರಲ್ಲಿ ಮತಗಳಿಕೆ ಪ್ರಮಾಣ 8625 ಕ್ಕೆ ಇಳಿಕೆಯಾಗಿತ್ತು. 1989 ರಲ್ಲಿ 18,142 ಮತ ಪಡೆದಿದ್ದರು. ಹಿಂದಿನ ಎರಡು ಚುನಾವಣೆಯಲ್ಲಿ 3 ನೇ ಸ್ಥಾನ ಪಡೆದಿದ್ದರು.

1994 ರಲ್ಲಿ 31,440 ಮತ ಪಡೆದು ಮೊದಲ ಜಯ ಸಂಪಾದಿಸಿದ್ದರು. ಅವರ ಸಮೀಪದ ಪ್ರತಿಸ್ಪರ್ಧಿ ಡಿ.ಬಿ.ಚಂದ್ರೇಗೌಡರವರು 28,448 ಮತ ಗಳಿಸಿದ್ದರು. 1999 ರಲ್ಲಿ 33,778 ಮತ, 2004 ರಲ್ಲಿ 47,843 ಮತ ಪಡೆದು ಜಯ ಸಾಧಿಸಿದ್ದರು. 2008 ಹಾಗೂ 2013 ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. 2018 ರಲ್ಲಿ ಮತ್ತೆ ಜಯಭೇರಿ ಬಾರಿಸಿದ್ದರು. ನಂತರ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

5 ಸ್ಪರ್ಧೆ : 2 ಗೆಲುವು – 3 ಸೋಲು

*** ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು 1999 ರಿಂದ 2018 ರವರೆಗೆ ಒಟ್ಟಾರೆ 5 ಬಾರಿ ವಿಧಾನಸಭೆ ಚುನಾವಣಾ ಕಣಕ್ಕಿಳಿದಿದ್ದಾರೆ. ಇದರಲ್ಲಿ 2 ಬಾರಿ ಜಯ ಸಾಧಿಸಿ, 3 ಬಾರಿ ಪರಾಭವಗೊಂಡಿದ್ದಾರೆ. ಈ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಅವರ ಎದುರಾಳಿಯಾಗಿದ್ದಾರೆ. 1999 ರ ಮೊದಲ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದ ಅವರು 29,676 ಮತ ಪಡೆದು ಎರಡನೇ ಸ್ಥಾನ ಪಡೆದಿದ್ದರು. 2004 ರಲ್ಲಿ ಕಾಂಗ್ರಸ್ ನಿಂದ ಕಣಕ್ಕಿಳಿದ ಅವರು 46,468 ಮತ ಪಡೆದು, ಕೇವಲ 1,375 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. 2008 ರಲ್ಲಿ 57,932 ಮತ ಪಡೆದು ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. 2013 ರಲ್ಲಿ 37,160 ಮತ ಪಡೆದು ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಕೆಜೆಪಿಯಿಂದ ಕಣಕ್ಕಿಳಿದ ಮಂಜುನಾಥ್ ಗೌಡರವರು 35,817, ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರರವರು  34,446 ಪಡೆದಿದ್ದರು. 2018 ರಲ್ಲಿ 45,572 ಮತ ಪಡೆದಿದ್ದ ಕಿಮ್ಮನೆ, 67,527 ಮತ ಪಡೆದ ಆರಗ ಎದುರು ಸೋಲನುಭವಿಸಿದ್ದರು.

*** ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು 1999 ರಿಂದ 2018 ರವರೆಗೆ ಒಟ್ಟಾರೆ 5 ಬಾರಿ ವಿಧಾನಸಭೆ ಚುನಾವಣಾ ಕಣಕ್ಕಿಳಿದಿದ್ದಾರೆ. ಇದರಲ್ಲಿ 2 ಬಾರಿ ಜಯ ಸಾಧಿಸಿ, 3 ಬಾರಿ ಪರಾಭವಗೊಂಡಿದ್ದಾರೆ. ಈ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಅವರ ಎದುರಾಳಿಯಾಗಿದ್ದಾರೆ. 1999 ರ ಮೊದಲ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದ ಅವರು 29,676 ಮತ ಪಡೆದು ಎರಡನೇ ಸ್ಥಾನ ಪಡೆದಿದ್ದರು. 2004 ರಲ್ಲಿ ಕಾಂಗ್ರಸ್ ನಿಂದ ಕಣಕ್ಕಿಳಿದ ಅವರು 46,468 ಮತ ಪಡೆದು, ಕೇವಲ 1,375 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು.

2008 ರಲ್ಲಿ 57,932 ಮತ ಪಡೆದು ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. 2013 ರಲ್ಲಿ 37,160 ಮತ ಪಡೆದು ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಕೆಜೆಪಿಯಿಂದ ಕಣಕ್ಕಿಳಿದ ಮಂಜುನಾಥ್ ಗೌಡರವರು 35,817, ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರರವರು  34,446 ಪಡೆದಿದ್ದರು. 2018 ರಲ್ಲಿ 45,572 ಮತ ಪಡೆದಿದ್ದ ಕಿಮ್ಮನೆ, 67,527 ಮತ ಪಡೆದ ಆರಗ ಎದುರು ಸೋಲನುಭವಿಸಿದ್ದರು.

ಶಿವಮೊಗ್ಗ, ಎ. 21: ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತೆರೆಯಲಾಗಿರುವ ಚೆಕ್ ಪೋಸ್ಟ್ ಗಳಲ್ಲಿ, ದಾಖಲೆಯಿಲ್ಲದೆ ವಾಹನಗಳಲ್ಲಿ ಸಾಗಾಣೆ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದ ಘಟನೆ ಎ.21 ರಂದು ನಡೆದಿದೆ. Previous post ಸೀರೆ, ಬಟ್ಟೆ, ಅಡಕೆ, ಹಾರ್ಡ್ ವೇರ್ ವಸ್ತುಗಳು ವಶ!
#ವಿಧಾನಸಭೆಚುನಾವಣೆಸಾರ್ವಜನಿಕ ಸಮಸ್ಯೆಗಳ ಕಡೆಗಣನೆ, ನೀತಿಸಂಹಿತೆ ನೆಪ - ಹೆಚ್ಚಾಗುತ್ತಿರುವ ನಾಗರೀಕರ ಪರಿತಾಪ! ಮತ ಬೇಟೆಯಲ್ಲಿ ಮುಳುಗಿದ ಜನಪ್ರತಿನಿಧಿಗಳು : ಆಲಿಸುವವರಿಲ್ಲ ನಾಗರೀಕರ ಗೋಳು!! Next post ವಿಧಾನಸಭೆ ಚುನಾವಣೆ : ಸಾರ್ವಜನಿಕ ಸಮಸ್ಯೆಗಳ ಕಡೆಗಣನೆ!