ಶಿವಮೊಗ್ಗ ಗ್ರಾಮಾಂತರ (ಪರಿಶಿಷ್ಟ ಜಾತಿ ಮೀಸಲು) ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ, ಸುಡು ಬಿಸಿಲಿನಷ್ಟೆ ಕಾವೇರಿದೆ! ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ ಮೂರು ಚುನಾವಣೆಗಳು ನಡೆದಿವೆ. ಎರಡು ಬಾರಿ ಬಿಜೆಪಿ, ಒಂದು ಬಾರಿ ಜೆಡಿಎಸ್ ಜಯ ಸಾಧಿಸಿದೆ. ಆದರೆ ಒಮ್ಮೆ ಜಯ ಸಾಧಿಸಿದವರು ಮತ್ತೊಮ್ಮೆ ಆಯ್ಕೆಯಾಗಿಲ್ಲ! ಕಳೆದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಿಂದ ಕಣಕ್ಕಿಳಿದ ಅಭ್ಯರ್ಥಿಗಳೇ ಈ ಬಾರಿಯೂ ಎದುರಾಳಿಗಳಾಗಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಕೆ.ಬಿ.ಅಶೋಕನಾಯ್ಕ್, ಜೆಡಿಎಸ್ ನಿಂದ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಹಾಗೂ ಕಾಂಗ್ರೆಸ್ ನಿಂದ ಡಾ.ಶ್ರೀನಿವಾಸ್ ಕರಿಯಣ್ಣ ಸ್ಪರ್ಧಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ : ಕಾವೇರಿದ ಚುನಾವಣಾ ಕಣ!

-ಬಿ.ರೇಣುಕೇಶ್-

ಶಿವಮೊಗ್ಗ ಗ್ರಾಮಾಂತರ (ಪರಿಶಿಷ್ಟ ಜಾತಿ ಮೀಸಲು) ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ, ಸುಡು ಬಿಸಿಲಿನಷ್ಟೆ ಕಾವೇರಿದೆ! ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ ಮೂರು ಚುನಾವಣೆಗಳು ನಡೆದಿವೆ. ಎರಡು ಬಾರಿ ಬಿಜೆಪಿ, ಒಂದು ಬಾರಿ ಜೆಡಿಎಸ್ ಜಯ ಸಾಧಿಸಿದೆ. ಆದರೆ ಒಮ್ಮೆ ಜಯ ಸಾಧಿಸಿದವರು ಮತ್ತೊಮ್ಮೆ ಆಯ್ಕೆಯಾಗಿಲ್ಲ!

ಕಳೆದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಿಂದ ಕಣಕ್ಕಿಳಿದ ಅಭ್ಯರ್ಥಿಗಳೇ ಈ ಬಾರಿಯೂ ಎದುರಾಳಿಗಳಾಗಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಕೆ.ಬಿ.ಅಶೋಕನಾಯ್ಕ್, ಜೆಡಿಎಸ್ ನಿಂದ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಹಾಗೂ ಕಾಂಗ್ರೆಸ್ ನಿಂದ ಡಾ.ಶ್ರೀನಿವಾಸ್ ಕರಿಯಣ್ಣ ಸ್ಪರ್ಧಿಸಿದ್ದಾರೆ.

ಶಾರದಾ ಪೂರ್ಯನಾಯ್ಕ್ ಹಾಗೂ ಕೆ.ಬಿ.ಅಶೋಕನಾಯ್ಕ್ ಶಾಸಕರಾಗಿ ಆಯ್ಕೆಯಾಗುವುದಕ್ಕೂ ಮುನ್ನ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಕಾರ್ಯನಿರ್ವಹಣೆ ಮಾಡಿದ್ದ ಅನುಭವ ಹೊಂದಿದ್ದರು. ಆದರೆ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು ಶ್ರೀನಿವಾಸ ಕರಿಯಣ್ಣ, ವೈದ್ಯ ವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದ್ದರು.

ಅವರ ತಂದೆ ದಿವಂಗತ ಕರಿಯಣ್ಣ ಅವರು, 2008 ಹಾಗೂ 2013 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಅಸ್ತಿತ್ವಕ್ಕೆ ಬರುವುದಕ್ಕೂ ಮುನ್ನವಿದ್ದ ಹೊಳೆಹೊನ್ನೂರು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಚುನಾವಣಾ ಹಿನ್ನೆಲೆ: ಶಾರದಾ ಪೂರ್ಯನಾಯ್ಕ್ ಅವರಿಗೆ ಇದು ಮೂರನೇ ಚುನಾವಣೆಯಾಗಿದೆ. 2008 ರಲ್ಲಿ ಅವರು ಕಣಕ್ಕಿಳಿದ ಮೊದಲ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. 2013 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ 2018 ರಲ್ಲಿ ಪರಾಭವಗೊಂಡಿದ್ದರು.  

ಉಳಿದಂತೆ 2018 ರಲ್ಲಿ ಮೊದಲ ಬಾರಿಗೆ ಕಣಕ್ಕಿಳಿದ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ್, ಮೊದಲ ಯತ್ನದಲ್ಲಿಯೇ ಜಯ ಸಾಧಿಸಿ ವಿಧಾನಸಭೆ ಪರವೇಶಿಸಿದ್ದರು. ಅದೇ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ನಿಂದ ಅಖಾಡಕ್ಕಿಳಿದಿದ್ದ ಡಾ.ಶ್ರೀನಿವಾಸ್ ಕರಿಯಣ್ಣ ಸೋಲನುಭವಿಸಿದ್ದರು.

ಪ್ರಚಾರದ ಅಬ್ಬರ: ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಪ್ರಚಾರದ ಅಬ್ಬರ ಜೋರಾಗಿದೆ. ಕಳೆದ ಕೆಲ ತಿಂಗಳುಗಳಿಂದಲೇ, ಎರಡು ಪಕ್ಷಗಳ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಕ್ಷೇತ್ರ ಸುತ್ತು ಹಾಕುತ್ತಿದ್ದಾರೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಕೂಡ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಅದರಲ್ಲಿಯೂ ಹಾಲಿ ಶಾಸಕ ಕೆ.ಬಿ.ಅಶೋಕನಾಯ್ಕ್ – ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಕಳೆದ ಬಾರಿಯೂ ಇವರಿಬ್ಬರ ನಡುವೆಯೇ ಭಾರೀ ಪೈಪೋಟಿ ಏರ್ಪಟ್ಟಿದ್ದು ಕಂಡುಬಂದಿತ್ತು.

ಕೆ.ಬಿ.ಅಶೋಕನಾಯ್ಕ್ ಅವರು 3,777 ಮತಗಳ ಅಂತರದಲ್ಲಿ ಶಾರದಾ ಪೂರ್ಯನಾಯ್ಕ್ ಎದುರು ಜಯ ಸಾಧಿಸಿದ್ದರು. ಉಳಿದಂತೆ ಕಾಂಗ್ರೆಸ್ ಪಕ್ಷವು ಕಳೆದ ಮೂರು ಚುನಾವಣೆಗಳಿಂದಲೂ, 30 ರಿಂದ 35 ಸಾವಿರ ಅಸುಪಾಸಿನಲ್ಲಿಯೇ ಮತಗಳಿಕೆ ಮಾಡುತ್ತಿದೆ.  

ಈ ಬಾರಿಯ ಎಲೆಕ್ಷನ್ ನೇರ ಹಣಾಹಣಿಯಾ? ಅಥವಾ ತ್ರಿಕೋನಾ ಹೋರಾಟವಾ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ. ಒಟ್ಟಾರೆ ಫಲಿತಾಂಶ ಏನಾಗಲಿದೆ ಎಂಬುವುದು ನಿಗೂಢವಾಗಿದ್ದು, ಮತದಾರರ ಚಿತ್ತ ಯಾರತ್ತ ಎಂಬುವುದು ಕಾದು ನೋಡಬೇಕಾಗಿದೆ.

2008 ರ ವಿಧಾನಸಭೆ ಎಲೆಕ್ಷನ್ ಮತದಾನದ ವಿವರ

ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ 2008 ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ, ಬಿಜೆಪಿಯಿಂದ ಕಣಕ್ಕಿಳಿದಿದ್ದ ಕೆ.ಜಿ.ಕುಮಾರಸ್ವಾಮಿ ಅವರು 56,979 ಮತ ಪಡೆದು ಆಯ್ಕೆಯಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಕರಿಯಣ್ಣ ಅವರು 32,714 ಹಾಗೂ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಶಾರದಾ ಪೂರ್ಯನಾಯ್ಕ್ ಅವರು 26,644 ಮತ ಪಡೆದಿದ್ದರು.

ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ 2008 ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ, ಬಿಜೆಪಿಯಿಂದ ಕಣಕ್ಕಿಳಿದಿದ್ದ ಕೆ.ಜಿ.ಕುಮಾರಸ್ವಾಮಿ ಅವರು 56,979 ಮತ ಪಡೆದು ಆಯ್ಕೆಯಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಕರಿಯಣ್ಣ ಅವರು 32,714 ಹಾಗೂ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಶಾರದಾ ಪೂರ್ಯನಾಯ್ಕ್ ಅವರು 26,644 ಮತ ಪಡೆದಿದ್ದರು.

2013 ರ ವಿಧಾನಸಭೆ ಚುನಾವಣೆ ಮತದಾನದ ವಿವರ

2013 ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ್ ಅವರು 48,639 ಮತ ಪಡೆದು ಆಯ್ಕೆಯಾಗಿದ್ದರು. ಕೆಜೆಪಿ ಅಭ್ಯರ್ಥಿ ಜಿ.ಬಸವಣ್ಯಪ್ಪ 38,530, ಕಾಂಗ್ರೆಸ್ ಅಭ್ಯರ್ಥಿ ಕರಿಯಣ್ಣರವರು 35,640, ಬಿಜೆಪಿ ಅಭ್ಯರ್ಥಿ ಕೆ.ಜಿ.ಕುಮಾರಸ್ವಾಮಿ ಅವರು 12,435 ಮತ ಪಡೆದಿದ್ದರು.

2013 ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ್ ಅವರು 48,639 ಮತ ಪಡೆದು ಆಯ್ಕೆಯಾಗಿದ್ದರು. ಕೆಜೆಪಿ ಅಭ್ಯರ್ಥಿ ಜಿ.ಬಸವಣ್ಯಪ್ಪ 38,530, ಕಾಂಗ್ರೆಸ್ ಅಭ್ಯರ್ಥಿ ಕರಿಯಣ್ಣರವರು 35,640, ಬಿಜೆಪಿ ಅಭ್ಯರ್ಥಿ ಕೆ.ಜಿ.ಕುಮಾರಸ್ವಾಮಿ ಅವರು 12,435 ಮತ ಪಡೆದಿದ್ದರು.

2018 ರ ವಿಧಾನಸಭೆ ಚುನಾವಣೆ ಮತದಾನದ ವಿವರ

2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ್ ರವರು 69,326 ಮತ ಪಡೆದು ಜಯ ಸಾಧಿಸಿದ್ದರು. ಉಳಿದಂತೆ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ್ ಅವರು 65,549, ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಡಾ.ಶ್ರೀನಿವಾಸ ಕರಿಯಣ್ಣ ಅವರು 33,493 ಮತ ಪಡೆದಿದ್ದರು.

2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ್ ರವರು 69,326 ಮತ ಪಡೆದು ಜಯ ಸಾಧಿಸಿದ್ದರು. ಉಳಿದಂತೆ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ್ ಅವರು 65,549, ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಡಾ.ಶ್ರೀನಿವಾಸ ಕರಿಯಣ್ಣ ಅವರು 33,493 ಮತ ಪಡೆದಿದ್ದರು.

ಚುನಾವಣಾ ಕಣದಲ್ಲಿದ್ದಾರೆ 11 ಅಭ್ಯರ್ಥಿಗಳು

ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೆ.ಬಿ.ವಿಜಯ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ನ ಶ್ರೀನಿವಾಸ್ ಎಸ್ ಕೆ, ಆಮ್‍ಆದ್ಮಿ ಪಾರ್ಟಿಯ ಮಂಜುನಾಥ ಎಸ್ ಎಸ್, ಭಾರತೀಯ ಜನತಾ ಪಾರ್ಟಿಯ ಕೆ.ಬಿ.ಅಶೋಕನಾಯ್ಕ, ಬಹುಜನ ಸಮಾಜ ಪಾರ್ಟಿಯ ಎ.ಡಿ.ಶಿವಪ್ಪ, ಕರ್ನಾಟಕ ರಾಷ್ಟ್ರ ಸಮಿತಿಯ ನಿರಂಜನ ಇ, ಜನತಾದಳ(ಎಸ್) ಶಾರದಾ ಪೂರ್ಯಾನಾಯ್ಕ, ಪಕ್ಷೇತರ ರಂಗಸ್ವಾಮಿ ಎಲ್, ಭೀಮಪ್ಪ ಬಿ.ಹೆಚ್, ತಿಪ್ಪೇರುದ್ರಸ್ವಾಮಿ.ಟಿ, ಪ್ರವೀಣ್ ನಾಯ್ಕ್  ಕಣದಲ್ಲಿ ಉಳಿದಿದ್ದಾರೆ.

ಶಿವಮೊಗ್ಗ ನಗರದ ಹೊರವಲಯ ಕೇಂದ್ರ ಕಾರಾಗೃಹಕ್ಕೆ ಸೋಮವಾರ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದ ಪೊಲೀಸ್ ತಂಡವು, ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ ಘಟನೆ ನಡೆಯಿತು. ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್, ಇನ್ಸ್’ಪೆಕ್ಟರ್ ಗಳಾದ ಮಂಜುನಾಥ್, ಅಂಜನ್ ಕುಮಾರ್, ಗಜೇಂದ್ರಪ್ಪ, ಜಯಶ್ರೀ ಮಾನೆ, ಸಂಜೀವ್ ಮಹಾಜನ್ ಹಾಗೂ 5 ಜನ ಸಬ್ ಇನ್ಸ್’ಪೆಕ್ಟರ್ ಸೇರಿದಂತೆ ಒಟ್ಟಾರೆ 50 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ತಪಾಸಣೆಯಲ್ಲಿ ಭಾಗಿಯಾಗಿದ್ದರು. Previous post ಶಿವಮೊಗ್ಗ ಸೆಂಟ್ರಲ್ ಜೈಲ್ ಮೇಲೆ ಪೊಲೀಸರ ರೈಡ್ : ತಪಾಸಣೆ!
ಶಿವಮೊಗ್ಗ, ಏ. 24: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಏ.24 ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿತ್ತು. ಒಟ್ಟಾರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ 74 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಕ್ಷೇತ್ರವಾರು ವಿವರ ಈ ಮುಂದಿನಂತಿದೆ. Next post ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ : ಅಖಾಡದಲ್ಲಿ 74 ಅಭ್ಯರ್ಥಿಗಳು