ಶಿವಮೊಗ್ಗ, ಎ. 25: ಶಿವಮೊಗ್ಗ ನಗರದ ಹೊರವಲಯ ಗಾಡಿಕೊಪ್ಪದಲ್ಲಿ ಎರಡು ದಿನಗಳ ಕಾಲ ನಡೆದ, ಮುದ್ದು ಬಸವೇಶ್ವರ ಹಾಗೂ ಕೆಂಡದೇಶ್ವರಿ ಜಾತ್ರಾ ಮಹೋತ್ಸವ ಮತ್ತು ಗುಗ್ಗಳ ಕೆಂಡಾರ್ಚನೆಯು ಮಂಗಳವಾರ ಸಂಪನ್ನಗೊಂಡಿತು.

ಶಿವಮೊಗ್ಗ : ಗಾಡಿಕೊಪ್ಪದಲ್ಲಿ ಯಶಸ್ವಿಯಾಗಿ ನಡೆದ ಜಾತ್ರಾ ಮಹೋತ್ಸವ

ಶಿವಮೊಗ್ಗ, ಎ. 25: ಶಿವಮೊಗ್ಗ ನಗರದ ಹೊರವಲಯ ಗಾಡಿಕೊಪ್ಪದಲ್ಲಿ ಎರಡು ದಿನಗಳ ಕಾಲ ನಡೆದ, ಮುದ್ದು ಬಸವೇಶ್ವರ ಹಾಗೂ ಕೆಂಡದೇಶ್ವರಿ ಜಾತ್ರಾ ಮಹೋತ್ಸವ ಮತ್ತು ಗುಗ್ಗಳ ಕೆಂಡಾರ್ಚನೆಯು ಮಂಗಳವಾರ ಸಂಪನ್ನಗೊಂಡಿತು.

ಸೋಮವಾರ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಮುಖ್ಯ ರಸ್ತೆಗಳಲ್ಲಿ ಅಡ್ಡಪಲ್ಲಕ್ಕಿ ಮೆರವಣಿಗೆ ಸಾಗಿತು. ನಂತರ ಶ್ರೀಗಳ ಆಶೀರ್ವಚನ ನಡೆಯಿತು.

ಮಂಗಳವಾರ ಮುದ್ದು ಬಸವೇಶ್ವರ ಹಾಗೂ ಕೆಂಡದೇಶ್ವರಿ ಜಾತ್ರಾ ಮಹೋತ್ಸವ ಮತ್ತು ಗುಗ್ಗಳ ಕೆಂಡಾರ್ಚನೆ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಮುಖ್ಯ ರಸ್ತೆಗಳಲ್ಲಿ ದೇವರ ಮೂರ್ತಿಗಳ ಮೆರವಣಿಗೆ ನಡೆಯಿತು. ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.

ಜಾತ್ರಾ ಮಹೋತ್ಸವದಲ್ಲಿ ಸ್ಥಳೀಯರು ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತಾಧಿಗಳು ಭಾಗವಹಿಸಿದ್ದರು. ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.

ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿಸಿಲ ಬೇಗೆಯಿಂದ ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗುತ್ತಿದ್ದು, ತಕ್ಷಣವೇ ತುಂಗಾಭದ್ರಾ ನದಿಯಿಂದ ಕೆರೆಗಳಿಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಮಂಗಳವಾರ ಶಿವಮೊಗ್ಗ ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರಿಗೆ ಕೊಮ್ಮನಾಳು, ಸೋಮಿನಕೊಪ್ಪ, ಆಲದಹಳ್ಳಿ, ಹರಮಘಟ್ಟ, ಸುತ್ತುಕೋಟೆ, ಬನ್ನಿಕೆರೆ, ಬೂದಿಗೆರೆ ಕಾಲೋನಿ, ಬಿಕೊನಹಳ್ಳಿ, ಕಿಟ್ಟತಾಳು ಗ್ರಾಮಸ್ಥರು ಮನವಿ ಪತ್ರ ಅರ್ಪಿಸಿದ್ದಾರೆ. ಹಾಹಾಕಾರ: ಹರಮಘಟ್ಟದ ಗೌಡನ ಕೆರೆ, ಹರಮಘಟ್ಟದ ಸಿಗೇಕೆರೆ, ಬೂದಿಗೆರೆ ಕೆರೆ, ಸುತ್ತುಕೋಟೆ, ಅಯ್ಯನಕೆರೆ ಸೇರಿದಂತೆ ಹಲವು ಕೆರೆಗಳು ಬತ್ತಲಾರಂಭಿಸಿದೆ. ಬೋರ್’ವೆಲ್, ಬಾವಿ ಮತ್ತೀತರ ಜಲಮೂಲಗಳ ಅಂತರ್ಜಲದ ಪ್ರಮಾಣ ಕೂಡ ಕುಸಿಯುತ್ತಿದೆ. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಾರಂಭಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. Previous post ಬಿಸಿಲ ಬೇಗೆಗೆ ಬತ್ತಿದ ಕೆರೆಗಳು : ತುಂಗಾಭದ್ರಾ ನದಿಯಿಂದ ನೀರು ಹರಿಸಲು ಆಗ್ರಹಿಸಿ ಮನವಿ
ಕಳೆದ ಸರಿಸುಮಾರು ನಾಲ್ಕು ದಶಕಗಳಿಂದ ಬಿ.ಎಸ್.ಯಡಿಯೂರಪ್ಪ ಸ್ಪರ್ಧೆಯಿಂದ ಗಮನ ಸೆಳೆಯುತ್ತಿದ್ದ ಶಿಕಾರಿಪುರ ವಿಧಾನಸಭಾ ಕ್ಷೇತ್ರ, ಪ್ರಸ್ತುತ ಅವರ ಪುತ್ರ ಬಿ.ವೈ.ವಿಜಯೇಂದ್ರ ಅಖಾಡದಿಂದ ಕುತೂಹಲ ಕೆರಳಿಸಿದೆ. ಹಾಗೆಯೇ ಬದಲಾದ ರಾಜಕೀಯ ವಾತಾವರಣ, ಕೆಲ ಘಟನೆಗಳ ಹಿನ್ನೆಲೆಯಲ್ಲಿ ಪ್ರಸ್ತುತ ಚುನಾವಣಾ ಕಣ ಕಾವೇರುವಂತೆ ಮಾಡಿದೆ! ಇದೇ ಮೊದಲ ಬಾರಿಗೆ ಅಖಾಡಕ್ಕಿಳಿದಿರುವ ಬಿ.ವೈ.ವಿಜಯೇಂದ್ರಗೆ, ಪ್ರಥಮ ಚುನಾವಣೆಯೇ ಅಕ್ಷರಶಃ ಅಗ್ನಿ ಪರೀಕ್ಷೆಯಾಗಿದೆ. ಪ್ರತಿಷ್ಠೆಯ ಪ್ರಶ್ನೆಯಾಗಿದೆ. ರಾಜಕೀಯ ಭವಿಷ್ಯದ ದೃಷ್ಟಿಯಿಂದ ಗೆಲ್ಲಲೇಬೇಕಾದ ಅನಿವಾರ್ಯ ಒತ್ತಡ ಅವರ ಮೇಲಿದೆ. Next post ಶಿಕಾರಿಪುರ ವಿಧಾನಸಭಾ ಕ್ಷೇತ್ರ : ಯಾರಾಗಲಿದ್ದಾರೆ ಶಿಕಾರಿ..?!