ಕಳೆದ ಸರಿಸುಮಾರು ನಾಲ್ಕು ದಶಕಗಳಿಂದ ಬಿ.ಎಸ್.ಯಡಿಯೂರಪ್ಪ ಸ್ಪರ್ಧೆಯಿಂದ ಗಮನ ಸೆಳೆಯುತ್ತಿದ್ದ ಶಿಕಾರಿಪುರ ವಿಧಾನಸಭಾ ಕ್ಷೇತ್ರ, ಪ್ರಸ್ತುತ ಅವರ ಪುತ್ರ ಬಿ.ವೈ.ವಿಜಯೇಂದ್ರ ಅಖಾಡದಿಂದ ಕುತೂಹಲ ಕೆರಳಿಸಿದೆ. ಹಾಗೆಯೇ ಬದಲಾದ ರಾಜಕೀಯ ವಾತಾವರಣ, ಕೆಲ ಘಟನೆಗಳ ಹಿನ್ನೆಲೆಯಲ್ಲಿ ಪ್ರಸ್ತುತ ಚುನಾವಣಾ ಕಣ ಕಾವೇರುವಂತೆ ಮಾಡಿದೆ! ಇದೇ ಮೊದಲ ಬಾರಿಗೆ ಅಖಾಡಕ್ಕಿಳಿದಿರುವ ಬಿ.ವೈ.ವಿಜಯೇಂದ್ರಗೆ, ಪ್ರಥಮ ಚುನಾವಣೆಯೇ ಅಕ್ಷರಶಃ ಅಗ್ನಿ ಪರೀಕ್ಷೆಯಾಗಿದೆ. ಪ್ರತಿಷ್ಠೆಯ ಪ್ರಶ್ನೆಯಾಗಿದೆ. ರಾಜಕೀಯ ಭವಿಷ್ಯದ ದೃಷ್ಟಿಯಿಂದ ಗೆಲ್ಲಲೇಬೇಕಾದ ಅನಿವಾರ್ಯ ಒತ್ತಡ ಅವರ ಮೇಲಿದೆ.

ಶಿಕಾರಿಪುರ ವಿಧಾನಸಭಾ ಕ್ಷೇತ್ರ : ಯಾರಾಗಲಿದ್ದಾರೆ ಶಿಕಾರಿ..?!

-ಬಿ.ರೇಣುಕೇಶ್-

ಕಳೆದ ಸರಿಸುಮಾರು ನಾಲ್ಕು ದಶಕಗಳಿಂದ ಬಿ.ಎಸ್.ಯಡಿಯೂರಪ್ಪ ಸ್ಪರ್ಧೆಯಿಂದ ಗಮನ ಸೆಳೆಯುತ್ತಿದ್ದ ಶಿಕಾರಿಪುರ ವಿಧಾನಸಭಾ ಕ್ಷೇತ್ರ, ಪ್ರಸ್ತುತ ಅವರ ಪುತ್ರ ಬಿ.ವೈ.ವಿಜಯೇಂದ್ರ ಅಖಾಡದಿಂದ ಕುತೂಹಲ ಕೆರಳಿಸಿದೆ. ಹಾಗೆಯೇ ಬದಲಾದ ರಾಜಕೀಯ ವಾತಾವರಣ, ಕೆಲ ಘಟನೆಗಳ ಹಿನ್ನೆಲೆಯಲ್ಲಿ ಪ್ರಸ್ತುತ ಚುನಾವಣಾ ಕಣ ಕಾವೇರುವಂತೆ ಮಾಡಿದೆ!

ಇದೇ ಮೊದಲ ಬಾರಿಗೆ ಅಖಾಡಕ್ಕಿಳಿದಿರುವ ಬಿ.ವೈ.ವಿಜಯೇಂದ್ರಗೆ, ಪ್ರಥಮ ಚುನಾವಣೆಯೇ ಅಕ್ಷರಶಃ ಅಗ್ನಿ ಪರೀಕ್ಷೆಯಾಗಿದೆ. ಪ್ರತಿಷ್ಠೆಯ ಪ್ರಶ್ನೆಯಾಗಿದೆ. ರಾಜಕೀಯ ಭವಿಷ್ಯದ ದೃಷ್ಟಿಯಿಂದ ಗೆಲ್ಲಲೇಬೇಕಾದ ಅನಿವಾರ್ಯ ಒತ್ತಡ ಅವರ ಮೇಲಿದೆ.

ಲೆಕ್ಕಾಚಾರಗಳೇನು?: ಬಿಜೆಪಿಯ ಭದ್ರ ಕೋಟೆಯೆಂದೇ ಕರೆಯಲಾಗುತ್ತಿದ್ದ ಶಿಕಾರಿಪುರ ಕ್ಷೇತ್ರದಲ್ಲಿ, ಯಡಿಯೂರಪ್ಪಗೆ ಸಿಗುತ್ತಿದ್ದ ಬೆಂಬಲ ಪುತ್ರನಿಗೂ ಸಿಗಲಿದೆಯೇ? ಎಂದಿನಂತೆ ಸಾಂಪ್ರದಾಯಿಕ ಮತದಾರರು ವಿಜಯೇಂದ್ರಗೆ ಕೈ ಹಿಡಿಯಲಿದ್ದಾರಾ? ಎಂಬುವುದು ಸದ್ಯ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಯಾಗಿದೆ.

ಕಳೆದ ತಿಂಗಳು ಒಳ ಮೀಸಲಾತಿ ವಿವಾದದಕ್ಕೆ ಸಂಬಂಧಿಸಿದಂತೆ ಶಿಕಾರಿಪುರ ಪಟ್ಟಣದಲ್ಲಿ ನಡೆದ ಭಾರೀ ಪ್ರತಿಭಟನೆ, ಜಾತಿ ಲೆಕ್ಕಾಚಾರ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಾಗರಾಜಗೌಡ ಸ್ಪರ್ಧೆಯು ಶಿಕಾರಿಪುರ ಕ್ಷೇತ್ರದ ಮತಗಳಿಕೆ ಲೆಕ್ಕಾಚಾರ ಬದಲಾಗುವಂತೆ ಮಾಡಿದೆ ಎಂಬುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಕಾಂಗ್ರೆಸ್-ಬಂಡಾಯ ಲೆಕ್ಕಾಚಾರ: ಕಾಂಗ್ರೆಸ್ ನಿಂದ ಕಳೆದ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಗೋಣಿ ಮಾಲತೇಶ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನೊಂದೆಡೆ, ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಆ ಪಕ್ಷದ ಮುಖಂಡ ನಾಗರಾಜಗೌಡ ಅವರು ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಿದ್ದಾರೆ.

ಮೊದಲಿನಿಂದಲೂ ಕುತೂಹಲ ಕೆರಳಿಸಿರುವ ನಾಗರಾಜಗೌಡ ಅವರು, ನಾಮಪತ್ರ ಸಲ್ಲಿಕೆ ವೇಳೆ ಸೇರಿಸಿದ್ದ ಜನಸ್ತೋಮ ಹಾಗೂ ಪ್ರಸ್ತುತ ಕ್ಷೇತ್ರದಲ್ಲಿ ನಡೆಸುತ್ತಿರುವ ಬಿರುಸಿನ ಪ್ರಚಾರ ಸಹಜವಾಗಿಯೇ ಕ್ಷೇತ್ರದಲ್ಲಿ ರೋಚಕ ಹಣಾಹಣಿಗೆ ವೇದಿಕೆಯಾಗುವ ಲಕ್ಷಣಗಳು ಗೋಚರವಾಗುವಂತೆ ಮಾಡಿಸಿದೆ.

ಆದರೆ ಕಾಂಗ್ರೆಸ್ ನಲ್ಲಿ ತಲೆದೋರಿರುವ ಬಂಡಾಯದ ಲಾಭದಲ್ಲಿ ಬಿಜೆಪಿ ಪಕ್ಷವಿದೆ. ಕ್ಷೇತ್ರದಲ್ಲಿ ತನ್ನ ಪ್ರಭಾವ ಮುಂದುವರಿಯುವ ಲೆಕ್ಕಾಚಾರದಲ್ಲಿದೆ. ಒಟ್ಟಾರೆ  ಶಿಕಾರಿಪುರ ಕ್ಷೇತ್ರದಲ್ಲಿ ಶಿಕಾರಿ ಆಗುವವರು ಯಾರು? ಯಾರ ಕೊರಳಿಗೆ ಬೀಳಲಿದೆ ವಿಜಯದ ಮಾಲೆ? ನಿರೀಕ್ಷಿತ ಫಲಿತಾಂಶವಾ? ಅಥವಾ ಅನಿರೀಕ್ಷಿತ-ಅಚ್ಚರಿ ಫಲಿತಾಂಶನಾ? ಎಂಬುವುದು ಮಾತ್ರ ಮೇ 13 ರವರೆಗೆ ಕಾಯಬೇಕಾಗಿದೆ.

ಇಬ್ಬರು ಅಭ್ಯರ್ಥಿಗಳಿಗೆ ಇದೇ ಮೊದಲ ಎಲೆಕ್ಷನ್!

*** ಬಿಜೆಪಿಯಿಂದ ಕಣಕ್ಕಿಳಿದಿರುವ ಬಿ.ವೈ.ವಿಜಯೇಂದ್ರ ಹಾಗೂ ಪಕ್ಷೇತರವಾಗಿ ಕಣಕ್ಕಿಳಿದಿರುವ ನಾಗರಾಜ ಗೌಡ ಅವರು ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣಾ ಕಣಕ್ಕಿಳಿದಿದ್ದಾರೆ.

*** ಬಿಜೆಪಿಯಿಂದ ಕಣಕ್ಕಿಳಿದಿರುವ ಬಿ.ವೈ.ವಿಜಯೇಂದ್ರ ಹಾಗೂ ಪಕ್ಷೇತರವಾಗಿ ಕಣಕ್ಕಿಳಿದಿರುವ ನಾಗರಾಜ ಗೌಡ ಅವರು ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣಾ ಕಣಕ್ಕಿಳಿದಿದ್ದಾರೆ.

ಆದರೆ ನಾನಾ ಕಾರಣಗಳಿಂದ ಈ ಇಬ್ಬರು ಅಭ್ಯರ್ಥಿಗಳು ಎಲ್ಲರ ಕೇಂದ್ರಬಿಂಧುವಾಗಿದ್ದಾರೆ. ಸಾಕಷ್ಟು ಕುತೂಹಲ ಕೆರಳಿಸಿದ್ದಾರೆ.

ಎರಡನೇ ಬಾರಿ ಅಖಾಡಕ್ಕಿಳಿಯುತ್ತಿರುವ ಕಾಂಗ್ರೆಸ್ ಅಭ್ಯರ್ಥಿ

*** ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್ ಅವರಿಗೆ ಇದು ಎರಡನೇ ಚುನಾವಣೆಯಾಗಿದೆ. ಕಳೆದ 2018 ರಲ್ಲಿ ಮೊದಲ ಬಾರಿಗೆ ಅವರು ಅಖಾಡಕ್ಕಿಳಿದಿದ್ದರು. ಇವರ ಎದುರಾಳಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು 86,983 ಮತ ಪಡೆದು ಜಯ ಸಾಧಿಸಿದ್ದರು.

*** ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್ ಅವರಿಗೆ ಇದು ಎರಡನೇ ಚುನಾವಣೆಯಾಗಿದೆ. ಕಳೆದ 2018 ರಲ್ಲಿ ಮೊದಲ ಬಾರಿಗೆ ಅವರು ಅಖಾಡಕ್ಕಿಳಿದಿದ್ದರು. ಇವರ ಎದುರಾಳಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು 86,983 ಮತ ಪಡೆದು ಜಯ ಸಾಧಿಸಿದ್ದರು.

51,586 ಮತ ಪಡೆದಿದ್ದ ಗೋಣಿ ಮಾಲತೇಶ್ ಅವರು 35,397 ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು.  2023 ರ ಚುನಾವಣೆಯಲ್ಲಿ ಮತ್ತೊಮ್ಮೆ ಅಖಾಡಕ್ಕಿಳಿದಿರುವ ಗೋಣಿ ಮಾಲತೇಶ್ ಗೆ, ಯಡಿಯೂರಪ್ಪ ಪುತ್ರ ವಿ.ವೈ.ವಿಜಯೇಂದ್ರ ಎದುರಾಳಿಯಾಗಿದ್ದಾರೆ.

ಯಡಿಯೂರಪ್ಪ ಪ್ರಾಬಲ್ಯ..!

1962 ರಲ್ಲಿ ಅಸ್ತಿತ್ವಕ್ಕೆ ಬಂದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ, 1983 ರಿಂದ ಬಿ.ಎಸ್.ಯಡಿಯೂರಪ್ಪ ಕಣಕ್ಕಿಳಿಯಲಾರಂಭಿಸಿದ್ದರು. ಅಂದಿನಿಂದ 2018 ರವರೆಗೆ ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರದಿಂದ ಒಟ್ಟಾರೆ 8 ಬಾರಿ ವಿಧಾನಸಭೆ ಚುನಾವಣಾ ಕಣಕ್ಕಿಳಿದಿದ್ದಾರೆ.

1962 ರಲ್ಲಿ ಅಸ್ತಿತ್ವಕ್ಕೆ ಬಂದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ, 1983 ರಿಂದ ಬಿ.ಎಸ್.ಯಡಿಯೂರಪ್ಪ ಕಣಕ್ಕಿಳಿಯಲಾರಂಭಿಸಿದ್ದರು. ಅಂದಿನಿಂದ 2018 ರವರೆಗೆ ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರದಿಂದ ಒಟ್ಟಾರೆ 8 ಬಾರಿ ವಿಧಾನಸಭೆ ಚುನಾವಣಾ ಕಣಕ್ಕಿಳಿದಿದ್ದಾರೆ.

7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಮ್ಮೆ ಸೋಲಿನ ರುಚಿ ಕೂಡ ನೋಡಿದ್ದಾರೆ. 1999 ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದರು. ನಂತರದ ಚುನಾವಣೆಗಳಲ್ಲಿ ಅವರು ನಿರಂತರವಾಗಿ ಜಯ ಸಾಧಿಸಿಕೊಂಡು ಬಂದಿದ್ದಾರೆ. ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಚುನಾವಣೆಯಲ್ಲಿ ಅವರ ಪುತ್ರ ಬಿ.ವೈ.ವಿಜಯೇಂದ್ರ ಅಖಾಡಕ್ಕಿಳಿಯುತ್ತಿದ್ದಾರೆ.

ಶಿವಮೊಗ್ಗ, ಎ. 25: ಶಿವಮೊಗ್ಗ ನಗರದ ಹೊರವಲಯ ಗಾಡಿಕೊಪ್ಪದಲ್ಲಿ ಎರಡು ದಿನಗಳ ಕಾಲ ನಡೆದ, ಮುದ್ದು ಬಸವೇಶ್ವರ ಹಾಗೂ ಕೆಂಡದೇಶ್ವರಿ ಜಾತ್ರಾ ಮಹೋತ್ಸವ ಮತ್ತು ಗುಗ್ಗಳ ಕೆಂಡಾರ್ಚನೆಯು ಮಂಗಳವಾರ ಸಂಪನ್ನಗೊಂಡಿತು. Previous post ಶಿವಮೊಗ್ಗ : ಗಾಡಿಕೊಪ್ಪದಲ್ಲಿ ಯಶಸ್ವಿಯಾಗಿ ನಡೆದ ಜಾತ್ರಾ ಮಹೋತ್ಸವ
ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ, ವಿಧಾನಸಭಾ ಚುನಾವಣಾ ಕಣ ರಂಗೇರಲಾರಂಭಿಸಿದೆ. ಈ ನಡುವೆ ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕಾಗಿ, ಜಿಲ್ಲೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಆಗಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕ ಗಾಂಧಿ ಅವರು ಎ. 27 ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದಾರೆ. ಹೆಲಿಕ್ಯಾಪ್ಟರ್ ಮೂಲಕ ಶಿವಮೊಗ್ಗ ನಗರಕ್ಕೆ ಆಗಮಿಸಲಿರುವ ಈ ಇಬ್ಬರು ನಾಯಕರು, ಪಕ್ಷದ ಅಭ್ಯರ್ಥಿಗಳು ಹಾಗೂ ಮುಖಂಡರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ನಂತರ ಹೆಲಿಕ್ಯಾಪ್ಟರ್ ಮೂಲಕ ಉಡುಪಿ ಜಿಲ್ಲೆಗೆ ತೆರಳುತ್ತಿದ್ದಾರೆ. ಮತ್ತೊಂದೆಡೆ, ಮೇ ತಿಂಗಳಲ್ಲಿ ಬಿಜೆಪಿ ನಾಯಕರ ಪ್ರಧಾನಿ ನರೇಂದ್ರ, ಗೃಹ ಸಚಿವ ಅಮಿತ್ ಶಾ, ಆ ಪಕ್ಷದ ರಾಷ್ಟ್ರಾಧ್ಯಕ್ಷ ನಡ್ಡಾ ಅವರು ಪ್ರತ್ಯೇಕವಾಗಿ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದು ತಿಳಿದುಬಂದಿದ್ದು, ಅಧಿಕೃತ ದಿನಾಂಕಗಳು ಇನ್ನಷ್ಟೆ ಖಚಿತವಾಗಬೇಕಾಗಿದೆ. Next post ಚುನಾವಣಾ ಪ್ರಚಾರ : ಶಿವಮೊಗ್ಗ ಜಿಲ್ಲೆಗೆ ಆಗಮಿಸುತ್ತಿದ್ದಾರೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ರಾಷ್ಟ್ರೀಯ ನಾಯಕರು!