ಭದ್ರಾವತಿ ವಿಧಾನಸಭಾ ಕ್ಷೇತ್ರ : ‘ವ್ಯಕ್ತಿ’ ಪ್ರತಿಷ್ಠೆಯ ಕಣ!

ಭದ್ರಾವತಿ ವಿಧಾನಸಭಾ ಕ್ಷೇತ್ರ : ‘ವ್ಯಕ್ತಿ’ ಪ್ರತಿಷ್ಠೆಯ ಕಣ!

-ಬಿ.ರೇಣುಕೇಶ್-

ಶಿವಮೊಗ್ಗ ಜಿಲ್ಲೆಯ ಇತರೆ ವಿಧಾನಸಭಾ ಕ್ಷೇತ್ರಗಳ ರಾಜಕಾರಣವೇ ಒಂದು ರೀತಿಯಾದರೆ, ‘ಉಕ್ಕಿನ ನಗರ’ ಖ್ಯಾತಿಯ ಭದ್ರಾವತಿ ಅಸೆಂಬ್ಲಿ ರಾಜಕಾರಣ ಮತ್ತೊಂದು ರೀತಿಯಾಗಿದೆ. ಕಳೆದ ಎರಡೂವರೆ ದಶಕಗಳಿಂದೀಚೆಗೆ, ಇಲ್ಲಿ ಪಕ್ಷಕ್ಕಿಂತ ‘ವ್ಯಕ್ತಿ’ ಪ್ರತಿಷ್ಠೆಯೇ ಪ್ರಮುಖವಾಗಿರುವುದು ವಿಶೇಷವಾಗಿದೆ!

ಸ್ವಾತಂತ್ರ್ಯ ನಂತರ 2018 ರವರೆಗೆ ಭದ್ರಾವತಿ ಕ್ಷೇತ್ರದಲ್ಲಿ, ಒಟ್ಟಾರೆ 14 ವಿಧಾನಸಭೆ ಚುನಾವಣೆಗಳು ನಡೆದಿವೆ.  ಕಾಂಗ್ರೆಸ್, ಜನತಾಪಕ್ಷ, ಪ್ರಜಾ ಸೋಷಿಯಲಿಸ್ಟ್ ಪಕ್ಷ, ಜೆಡಿಎಸ್ ಪಕ್ಷಗಳು ಜಯ ಸಾಧಿಸಿವೆ. ಆದರೆ ಬಿಜೆಪಿ ಪಕ್ಷ ಒಮ್ಮೆಯೂ ಈ ಕ್ಷೇತ್ರದಲ್ಲಿ ಜಯ ಸಾಧಿಸಿಲ್ಲ!

ಪಕ್ಷ ಪ್ರತಿಷ್ಠೆ: 1957 ರಿಂದ 1994 ರವರೆಗೆ ನಡೆದಿರುವ ಚುನಾವಣೆಗಳ ಚಿತ್ರಣ ಗಮನಿಸಿದರೆ, ಕ್ಷೇತ್ರದಲ್ಲಿ ಅಭ್ಯರ್ಥಿಗಳ ಜೊತೆಜೊತೆಗೆ ಪಕ್ಷ ಪ್ರತಿಷ್ಠೆಯು ಪ್ರಮುಖವಾಗಿರುವುದು ಕಂಡುಬರುತ್ತದೆ. ಆದರೆ ನಂತರದ ಚುನಾವಣೆಗಳಲ್ಲಿ ಪಕ್ಷಗಳ ಪ್ರಾಮುಖ್ಯತೆ ನಗಣ್ಯವಾಗಿ, ವ್ಯಕ್ತಿ ಪ್ರತಿಷ್ಠೆಯೇ ಮುನ್ನಲೆಗೆ ಬಂದಿದ್ದು ಈ ಕ್ಷೇತ್ರದ ರಾಜಕೀಯ ವಿಶೇಷವಾಗಿದೆ.

‘ವ್ಯಕ್ತಿ’ ಪ್ರತಿಷ್ಠೆ: 1999 ರಿಂದ 2018 ರವರೆಗೆ ದಿವಂಗತ ಎಂ.ಜೆ.ಅಪ್ಪಾಜಿಗೌಡ ಹಾಗೂ ಬಿ.ಕೆ.ಸಂಗಮೇಶ್ವರ್ ರವರ ನಡುವೆ ಜಿದ್ದಾಜಿದ್ದಿನ ಅಖಾಡಕ್ಕೆ ಕ್ಷೇತ್ರ ಸಾಕ್ಷಿಯಾಗುತ್ತಾ ಬಂದಿದೆ. ಒಟ್ಟಾರೆ ಇವರಿಬ್ಬರು ಪರಸ್ಪರ ಐದು ಚುನಾವಣೆಗಳಲ್ಲಿ ಮುಖಾಮುಖಿಯಾಗಿದ್ದಾರೆ. ಇದರಲ್ಲಿ ಬಿ.ಕೆ.ಸಂಗಮೇಶ್ವರ್ ಮೂರು ಹಾಗೂ ಎಂ.ಜೆ.ಅಪ್ಪಾಜಿಗೌಡ ಎರಡು ಚುನಾವಣೆಗಳಲ್ಲಿ ಜಯ ಸಾಧಿಸಿದ್ದಾರೆ.

1999 ರಲ್ಲಿ ಎಂ.ಜೆ.ಅಪ್ಪಾಜಿ ಗೌಡ  ಪಕ್ಷೇತರವಾಗಿ ಕಣಕ್ಕಿಳಿದು ಜಯ ಸಾಧಿಸಿದ್ದರು.  2004 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ 2008 ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಬಿ.ಕೆ.ಸಂಗಮೇಶ್ವರ್ ಜಯ ಸಂಪಾದಿಸಿದ್ದರು. 2013 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಜೆ.ಅಪ್ಪಾಜಿಗೌಡ ಜಯ ಸಂಪಾದಿಸಿದರೆ, 2018 ರಲ್ಲಿ ಕಾಂಗ್ರೆಸ್ ನಿಂದ ಬಿ.ಕೆ.ಸಂಗಮೇಶ್ವರ್ ಗೆಲುವು ಸಂಪಾದಿಸಿದ್ದರು.

2020 ರಲ್ಲಿ ಅಪ್ಪಾಜಿಗೌಡರವರು ಕೊರೊನಾದಿಂದ ವಿಧಿವಶರಾದ ಹಿನ್ನೆಲೆಯಲ್ಲಿ, ಪ್ರಸ್ತುತ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಅವರ ಪತ್ನಿ ಶಾರದಾ ಅಪ್ಪಾಜಿಗೌಡರವರು ಅಖಾಡಕ್ಕಿಳಿದಿದ್ದಾರೆ. ಉಳಿದಂತೆ ಕ್ಷೇತ್ರದ ಹಾಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದಾರೆ.

ಮತ್ತೊಂದೆಡೆ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುವುದಕ್ಕಾಗಿ ಕಳೆದ ಕೆಲ ಚುನಾವಣೆಗಳಲ್ಲಿ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸಿ ಸೋಲನುಭವಿಸುತ್ತಿರುವ ಬಿಜೆಪಿಯು, ಈ ಬಾರಿ ಸ್ಥಳೀಯ ಪಕ್ಷದ ಮುಖಂಡ ಹಾಗೂ ವಕೀಲ ಮಂಗೋಟೆ ರುದ್ರೇಶ್ ಅವರಿಗೆ ಅವಕಾಶ ಕಲ್ಪಿಸಿದೆ. ಇದು ಸ್ಥಳೀಯ ಬಿಜೆಪಿ ಪಾಳೇಯದಲ್ಲಿ ಹೊಸ ಹುರುಪು ಮೂಡಿಸಿದೆ.

2018 ರ ಚುನಾವಣೆ: ಈ ಹಿಂದಿನ 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಬಿ.ಕೆ.ಸಂಗಮೇಶ್ವರ್ ಅವರು 75,722 ಮತ ಪಡೆದು ಜಯ ಸಾಧಿಸಿದ್ದರು. ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಎಂ.ಜೆ.ಅಪ್ಪಾಜಿಗೌಡ 64,155, ಬಿಜೆಪಿ ಅಭ್ಯರ್ಥಿ ಜಿ.ಆರ್.ಪ್ರವೀಣ್ ಪಟೇಲ್ ಅವರು 8974 ಮತ ಗಳಿಸಿದ್ದರು.

ಒಟ್ಟಾರೆ ಕಳೆದ 5 ಚುನಾವಣೆಗಳಿಂದ ನೇರ ಹಣಾಹಣಿಗೆ ಸಾಕ್ಷಿಯಾಗುತ್ತಿದ್ದ ಭದ್ರಾವತಿ ಕ್ಷೇತ್ರದಲ್ಲಿ, ಪ್ರಸ್ತುತ ಚುನಾವಣೆಯಲ್ಲಿ ಅದೇ ಜಿದ್ದಾಜಿದ್ದಿ ಮುಂದುವರಿಯಲಿದೆಯಾ? ಇಲ್ಲವೇ? ಎಂಬುವುದು ಯಕ್ಷಪ್ರಶ್ನೆಯಾಗಿ ಪರಿಣಮಿಸಿದೆ.

ಮೂರು ಬಾರಿ ಜಯ ಸಾಧಿಸಿದ್ದ ಅಪ್ಪಾಜಿಗೌಡ

*** ಮಾಜಿ ಶಾಸಕ, ದಿವಂಗತ ಎಂ.ಜೆ.ಅಪ್ಪಾಜಿಗೌಡ ಅವರು 1989 ರಿಂದ 2018 ರವರೆಗೆ ಒಟ್ಟಾರೆ 7 ಬಾರಿ ವಿಧಾನಸಭಾ ಚುನಾವಣಾ ಕಣಕ್ಕಿಳಿದಿದ್ದರು. ಇದರಲ್ಲಿ 1994 (ಪಕ್ಷೇತರ), 1999 (ಪಕ್ಷೇತರ) ಹಾಗೂ 2013 (ಜೆಡಿಎಸ್) ರಲ್ಲಿ ಜಯ ಸಾಧಿಸಿದ್ದರು.

*** ದಿವಂಗತ ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ಅವರು 1989 ರಿಂದ 2018 ರವರೆಗೆ ಒಟ್ಟಾರೆ 7 ಬಾರಿ ವಿಧಾನಸಭಾ ಚುನಾವಣಾ ಕಣಕ್ಕಿಳಿದಿದ್ದರು. ಇದರಲ್ಲಿ 1994 (ಪಕ್ಷೇತರ), 1999 (ಪಕ್ಷೇತರ) ಹಾಗೂ 2013 (ಜೆಡಿಎಸ್) ರಲ್ಲಿ ಜಯ ಸಾಧಿಸಿದ್ದರು. ಉಳಿದಂತೆ 1989 (ಕಾಂಗ್ರೆಸ್), 2004 (ಕಾಂಗ್ರೆಸ್), 2008 (ಜೆಡಿಎಸ್), 2018 (ಜೆಡಿಎಸ್) ಪಕ್ಷದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. 2020 ರಲ್ಲಿ ಕೊರೊನಾದಿಂದ ಅಪ್ಪಾಜಿಗೌಡರವರು ವಿಧಿವಶರಾಗಿದ್ದರು. ಪ್ರಸ್ತುತ ಚುನಾವಣೆಯಲ್ಲಿ ಅವರ ಪತ್ನಿ ಶಾರದಾ ಅಪ್ಪಾಜಿಗೌಡ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದು ಅವರು ಎದುರಿಸುತ್ತಿರುವ ಮೊದಲ ಚುನಾವಣೆಯಾಗಿದ್ದು, ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ಉಳಿದಂತೆ 1989 (ಜನತಾ ಪಕ್ಷ), 2004 (ಕಾಂಗ್ರೆಸ್), 2008 (ಜೆಡಿಎಸ್), 2018 (ಜೆಡಿಎಸ್) ಪಕ್ಷದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. 2020 ರಲ್ಲಿ ಕೊರೊನಾದಿಂದ ಅಪ್ಪಾಜಿಗೌಡರವರು ವಿಧಿವಶರಾಗಿದ್ದರು. ಪ್ರಸ್ತುತ ಚುನಾವಣೆಯಲ್ಲಿ ಅವರ ಪತ್ನಿ ಶಾರದಾ ಅಪ್ಪಾಜಿಗೌಡ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದು ಅವರು ಎದುರಿಸುತ್ತಿರುವ ಮೊದಲ ಚುನಾವಣೆಯಾಗಿದ್ದು, ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

6 ನೇ ಬಾರಿ ಕಣಕ್ಕಿಳಿಯುತ್ತಿರುವ ಬಿ.ಕೆ.ಸಂಗಮೇಶ್ವರ್

*** ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ಕೆ.ಸಂಗಮೇಶ್ವರ್ ಗೆ ಇದು 6 ನೇ ವಿಧಾನಸಭೆ ಚುನಾವಣೆಯಾಗಿದೆ. 1999 ರಿಂದ 2018 ರವರೆಗೆ 5 ಚುನಾವಣೆ ಎದುರಿಸಿದ್ದಾರೆ.

*** ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ಕೆ.ಸಂಗಮೇಶ್ವರ್ ಗೆ ಇದು 6 ನೇ ವಿಧಾನಸಭೆ ಚುನಾವಣೆಯಾಗಿದೆ. 1999 ರಿಂದ 2018 ರವರೆಗೆ 5 ಚುನಾವಣೆ ಎದುರಿಸಿದ್ದಾರೆ.

ಇದರಲ್ಲಿ 2004 (ಪಕ್ಷೇತರ), 2008 (ಕಾಂಗ್ರೆಸ್) ಹಾಗೂ 2018 (ಕಾಂಗ್ರೆಸ್) ರಲ್ಲಿ ಜಯ ಸಾಧಿಸಿದ್ದರು. 1999 (ಕಾಂಗ್ರೆಸ್) ಹಾಗೂ 2013 (ಪಕ್ಷೇತರ) ರಲ್ಲಿ ಪರಾಭವಗೊಂಡಿದ್ದರು. ಪ್ರಸ್ತುತ ಕ್ಷೇತ್ರದ ಶಾಸಕರಾಗಿರುವ ಬಿ.ಕೆ.ಸಂಗಮೇಶ್ವರ್ ಮತ್ತೊಮ್ಮೆ ಅಖಾಡಕ್ಕಿಳಿದಿದ್ದಾರೆ. ಕ್ಷೇತ್ರದಾದ್ಯಂತ ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದಾರೆ.

ಮಂಗೋಟೆ ರುದ್ರೇಶ್ ಗೆ ಇದೇ ಮೊದಲ ಎಲೆಕ್ಷನ್

*** ಭದ್ರಾವತಿ ವಿಧಾನಸಭೆ ಚುನಾವಣೆ ಇತಿಹಾಸದಲ್ಲಿ ಒಮ್ಮೆಯೂ ಬಿಜೆಪಿ ಪಕ್ಷ ಜಯ ಸಾಧಿಸಿಲ್ಲ. ಕಳೆದ ಚುನಾವಣೆಗಳಲ್ಲಿ ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತದಾರರ ಗಮನ ಸೆಳೆಯುವ ಬಿಜೆಪಿ ಪ್ರಯತ್ನಗಳು ಫಲ ನೀಡಿಲ್ಲ.

*** ಭದ್ರಾವತಿ ವಿಧಾನಸಭೆ ಚುನಾವಣೆ ಇತಿಹಾಸದಲ್ಲಿ ಒಮ್ಮೆಯೂ ಬಿಜೆಪಿ ಪಕ್ಷ ಜಯ ಸಾಧಿಸಿಲ್ಲ. ಕಳೆದ ಚುನಾವಣೆಗಳಲ್ಲಿ ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತದಾರರ ಗಮನ ಸೆಳೆಯುವ ಬಿಜೆಪಿ ಪ್ರಯತ್ನಗಳು ಫಲ ನೀಡಿಲ್ಲ.

ಈ ಬಾರಿ ಸ್ಥಳೀಯ ಪಕ್ಷದ ಮುಖಂಡ, ವಕೀಲ ಮಂಗೋಟೆ ರುದ್ರೇಶ್ ಅವರಿಗೆ ಪಕ್ಷ ಅವಕಾಶ ಕಲ್ಪಿಸಿದೆ. ಇದು ಸಹಜವಾಗಿಯೇ ಸ್ಥಳೀಯ ಬಿಜೆಪಿ ಘಟಕದಲ್ಲಿ ಹುರುಪು ಮೂಡಿಸಿದೆ. ಮಂಗೋಟೆ ರುದ್ರೇಶ್ ಅವರು ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ. ಕ್ಷೇತ್ರದಲ್ಲಿ ಬಿರಿಸಿನ ಸಂಚಾರ ನಡೆಸಿ, ಮತಯಾಚಿಸುತ್ತಿದ್ದಾರೆ.

2008 ರಲ್ಲಿ ಆಯನೂರು ಮಂಜುನಾಥ್ – 2013 ರಲ್ಲಿ ಸಿ.ಎಂ. ಇಬ್ರಾಹಿಂ ಸ್ಪರ್ಧೆ!

2008 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಆಯನೂರು ಮಂಜುನಾಥ್ ಅವರು ಭದ್ರಾವತಿ ಕ್ಷೇತ್ರದಲ್ಲಿ ಮೊದಲ ಬಾರಿ ಕಣಕ್ಕಿಳಿದಿದ್ದರು. ಆದರೆ 13,374 ಮತ ಗಳಿಸಲಷ್ಟೆ ಅವರು ಶಕ್ತರಾಗಿದ್ದರು. ಮೂರನೇ ಸ್ಥಾನ ಸಂಪಾದಿಸಿದ್ದರು. ವಿಜೇತ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಸಂಗಮೇಶ್ವರ್ 53,257 ಮತ ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಎಂ.ಜೆ.ಅಪ್ಪಾಜಿಗೌಡರವರು 52,770 ಮತ ಗಳಿಸಿದ್ದರು.

2008 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಆಯನೂರು ಮಂಜುನಾಥ್ ಅವರು ಭದ್ರಾವತಿ ಕ್ಷೇತ್ರದಲ್ಲಿ ಮೊದಲ ಬಾರಿ ಕಣಕ್ಕಿಳಿದಿದ್ದರು. ಆದರೆ 13,374 ಮತ ಗಳಿಸಲಷ್ಟೆ ಅವರು ಶಕ್ತರಾಗಿದ್ದರು. ಮೂರನೇ ಸ್ಥಾನ ಸಂಪಾದಿಸಿದ್ದರು. ವಿಜೇತ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಸಂಗಮೇಶ್ವರ್ 53,257 ಮತ ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಎಂ.ಜೆ.ಅಪ್ಪಾಜಿಗೌಡರವರು 52,770 ಮತ ಗಳಿಸಿದ್ದರು.

2013 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ, ಮೂಲತಃ ಭದ್ರಾವತಿಯವರೇ ಆದ ಸಿ.ಎಂ.ಇಬ್ರಾಹಿಂ ಅವರು ಕಣಕ್ಕಿಳಿದಿದ್ದರು. ಮತ್ತೊಂದೆಡೆ, ಕಾಂಗ್ರೆಸ್ ಟಿಕೆಟ್ ವಂಚಿತರಾದ ಬಿ.ಕೆ.ಸಂಗಮೇಶ್ವರ್ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಸದರಿ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಎಂ.ಜೆ.ಅಪ್ಪಾಜಿಗೌಡ ಅವರು 78,370 ಮತ ಪಡೆದು ಜಯ ಸಾಧಿಸಿದ್ದರು. ಸಿ.ಎಂ.ಇಬ್ರಾಹಿಂ ಅವರು 22,329 ಮತ ಪಡೆಯಲಷ್ಟೆ ಶಕ್ತವಾಗಿದ್ದರು. ಪಕ್ಷೇತರವಾಗಿ ಕಣಕ್ಕಿಳಿದಿದ್ದ ಬಿ.ಕೆ.ಸಂಗಮೇಶ್ವರ್ 34,271 ಮತ ಪಡೆದಿದ್ದರು.

ಪ್ರಸ್ತುತ ಚುನಾವಣಾ ಕಣದಲ್ಲಿದ್ದಾರೆ 14 ಅಭ್ಯರ್ಥಿಗಳು!

ಪ್ರಸ್ತು ವಿಧಾನಸಭೆ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಕರ್ನಾಟಕ)ದ ಪಿ.ಇ.ಬಸವರಾಜಪ್ಪ, ಎಎಪಿ ಆನಂದ್,

ಐಎನ್‍ಸಿ ಬಿ.ಕೆ.ಸಂಗಮೇಶ್ವರ್, ಜನತಾದಳ(ಸಂಯುಕ್ತ) ಶಶಿಕುಮಾರ್ ಬಿ.ಕೆ, ಜನತಾದಳ (ಎಸ್) ಶಾರದಾ ಅಪ್ಪಾಜಿ, ಬಿಜೆಪಿ ರುದ್ರೇಶ್ ಎಂ.ಜಿ, ಕರ್ನಾಟಕ ರಾಷ್ಟ್ರ ಸಮಿತಿಯ ಸುಮಿತ್ರಾ ಬಾಯಿ, ಪಕ್ಷೇತರ ಜಾನ್ ಬೆನ್ನಿ, ರಾಜಶೇಖರ್ ಎಸ್, ಎಸ್.ಕೆ.ಸುಧೀಂದ್ರ, ಶಶಿಕುಮಾರ್ ವೈ, ಮೋಹನ್ ಡಿ, ಬಿ.ಎನ್.ನಾಗರಾಜ್, ಅಹಮದ್ ಅಲಿ ಕಣದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ.

ಸಾಗರ : ಕರ್ಕಶ ಶಬ್ದ ಹೊರಹೊಮ್ಮಿಸುವ ಸೈಲೆನ್ಸರ್ ಗಳ ಮೇಲೆ ಬುಲ್ಡೋಜರ್ ಹರಿಸಿ ನಾಶ! Previous post ಸಾಗರ : ಕರ್ಕಶ ಶಬ್ದ ಹೊರಹೊಮ್ಮಿಸುವ ಸೈಲೆನ್ಸರ್ ಗಳ ಮೇಲೆ ಬುಲ್ಡೋಜರ್ ಹರಿಸಿ ನಾಶ!
ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ಪ್ರಸ್ತುತ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ, ೮೦ ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರು ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಿದೆ. ಅದರಂತೆ ಶನಿವಾರದಿಂದ ಬ್ಯಾಲೆಟ್ ಪೇಪರ್ ವೋಟಿಂಗ್ (ಮತ ಪತ್ರದ ಮೂಲಕ ಮತದಾನ) ಗೆ ಚಾಲನೆ ದೊರಕಿದೆ. ಕಳೆದ ಕೆಲ ದಿನಗಳ ಹಿಂದೆಯೇ, ಚುನಾವಣಾ ಆಯೋಗವು ಮನೆಯಿಂದ ಮತದಾನ ಮಾಡಲು ಅರ್ಹತೆ ಹೊಂದಿದವರ ಪಟ್ಟಿ ಸಿದ್ದಪಡಿಸಿತ್ತು. ಸಂಬಂಧಿಸಿದವರಿಂದ ಒಪ್ಪಿಗೆ ಪತ್ರ ಪಡೆದುಕೊಂಡಿತ್ತು. ಅಂತಹವರಿಗೆ ಏ.29 ರಿಂದ ಚುನಾವಣಾಧಿಕಾರಿಗಳು ಅವರ ಮನೆಗಳಿಗೆ ತೆರಳಿ ಮತದಾನಕ್ಕೆ ಅವಕಾಶ ಕಲ್ಪಿಸುತ್ತಿದ್ದಾರೆ. Next post ವಿಧಾನಸಭೆ ಚುನಾವಣೆ : ಹಿರಿಯರು, ವಿಕಲಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ – ಶನಿವಾರದಿಂದ ವಿಧ್ಯುಕ್ತ ಚಾಲನೆ!