
ಶಿವಮೊಗ್ಗ ಜಿಲ್ಲೆಯ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಮೇ 15 ರ ನಂತರ ಆನ್‍ಲೈನ್ ಆಧಾರಿತ ನೊಂದಣಿ!
ಶಿವಮೊಗ್ಗ, ಏ. 29: ಸಾರ್ವಜನಿಕರ ಸ್ಥಿರಾಸ್ತಿ ನೋಂದಣಿ ಪ್ರಕ್ರಿಯೆಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸುಲಭಗೊಳಿಸಲು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ-2 ತಂತ್ರಾಂಶ (ಸಾಫ್ಟ್’ವೇರ್) ಅಭಿವೃದ್ದಿಪಡಿಸಿದೆ. ಆನ್’ಲೈನ್ (ಗಣಕೀಕೃತ) ಮೂಲಕ ಸ್ಥಿರಾಸ್ತಿ ನೊಂದಣಿಗೆ ಅವಕಾಶ ಕಲ್ಪಿಸಿದೆ.
ಅದರಂತೆ ಶಿವಮೊಗ್ಗ ಜಿಲ್ಲೆಯ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿಯೂ ಆನ್’ಲೈನ್ ಆಧಾರಿತ ನೊಂದಣಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಮೇ 15 ರ ನಂತರ ಜಿಲ್ಲೆಯ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ನೋಂದಾಯಿಸಲಾಗುವ ಕ್ರಯ ಪತ್ರ/ ವಿಭಾಗ ಪತ್ರ/ ದಾನ ಪತ್ರ/ ಆಧಾರ/ ಆಧಾರ ಖುಲಾಸೆ ಇನ್ನಿತರೆ ಎಲ್ಲಾ ದಸ್ತಾವೇಜುಗಳ ಮಾಹಿತಿಯನ್ನು, ಸಾರ್ವಜನಿಕರು ವೆಬ್ ಸೈಟ್ https://kaveri.karnataka.gov.in ಮತ್ತು https://igr.karnataka.gov.in ಮೂಲಕ ಆನ್‍ಲೈನ್‍ನಲ್ಲಿಯೇ ಅಪ್‍ಲೋಡ್ ಮಾಡಿ ಮುಂದಿನ ನೋಂದಣಿ ಪ್ರಕ್ರಿಯೆ ಮಾಡಿಕೊಳ್ಳುವಂತೆ ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವಿವರ: ಶಿವಮೊಗ ಜಿಲ್ಲೆಯಲ್ಲಿ ಕಾವೇರಿ-2 ತಂತ್ರಾಂಶ ಜಾರಿಗೆ ಬರುವ ದಿನಾಂಕ : ಉಪ ನೋಂದಣಿ ಕಚೇರಿ ಭದ್ರಾವತಿಯಲ್ಲಿ ಮೇ 15, ಉಪ ನೋಂದಣಿ ಕಚೇರಿ ಹೊಸನಗರದಲ್ಲಿ ಮೇ 16, ಉಪ ನೋಂದಣಿ ಕಚೇರಿ ಸಾಗರದಲ್ಲಿ ಮೇ 17, ಉಪ ನೋಂದಣಿ ಕಚೇರಿ ಶಿಕಾರಿಪುರದಲ್ಲಿ ಮೇ 18, ಉಪ ನೋಂದಣಿ ಕಚೇರಿ ಶಿವಮೊಗ್ಗದಲ್ಲಿ ಮೇ 19, ಉಪ ನೋಂದಣಿ ಕಚೇರಿ ಸೊರಬದಲ್ಲಿ ಮೇ 20, ಉಪ ನೋಂದಣಿ ಕಚೇರಿ ತೀರ್ಥಹಳ್ಳಿಯಲ್ಲಿ ಮೇ 21 ರಂದು ನೋಂದಣಿ ಪ್ರಕ್ರಿಯೆ ಮಾಡಿಕೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ : 080-68265316 ಗೆ ಸಂಪರ್ಕಿಸಬಹುದೆಂದು ಶಿವಮೊಗ್ಗ ಜಿಲ್ಲಾನೋಂದಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
