ಹೆಚ್ಚುತ್ತಿರುವ ಬಿಸಿಲ ಝಳದ ನಡುವೆಯೇ, ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಬೇಸಿಗೆ ಮಳೆಯು, ತಂಪನೆ ವಾತಾವರಣ ನೆಲೆಸುವಂತೆ ಮಾಡಿದೆ. ಶಿವಮೊಗ್ಗ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ ಕೆಲ ದಿನಗಳಿಂದ ಪೂರ್ವ ಮುಂಗಾರು ಮಳೆಯಾಗುತ್ತಿದೆ. ಭಾನುವಾರ ಸಂಜೆ ಹಲವೆಡೆ ಚದುರಿದಂತೆ ಮಳೆಯಾದ ವರದಿಗಳು ಬಂದಿವೆ.

ಶಿವಮೊಗ್ಗ : ವಿವಿಧೆಡೆ ಮುಂದುವರಿದ ಬೇಸಿಗೆ ಮಳೆ

ಶಿವಮೊಗ್ಗ, ಏ. 30: ಹೆಚ್ಚುತ್ತಿರುವ ಬಿಸಿಲ ಝಳದ ನಡುವೆಯೇ, ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಬೇಸಿಗೆ ಮಳೆಯು, ತಂಪನೆ ವಾತಾವರಣ ನೆಲೆಸುವಂತೆ ಮಾಡಿದೆ.

ಶಿವಮೊಗ್ಗ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಇತ್ತೀಚೆಗೆ ಪೂರ್ವ ಮುಂಗಾರು ಮಳೆಯಾಗುತ್ತಿದೆ.  ಭಾನುವಾರ ಸಂಜೆ ಹಲವೆಡೆ ಚದುರಿದಂತೆ ಮಳೆಯಾದ ವರದಿಗಳು ಬಂದಿವೆ.

ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಬೇಸಿಗೆ ಬಿಸಿಲ ಬೇಗೆ ಹೆಚ್ಚಿದೆ. ತೀವ್ರ ಸ್ವರೂಪದ ತಾಪಮಾನವು ನಾಗರೀಕರ ನೆತ್ತಿ ಸುಡುವಂತೆ ಮಾಡಿತ್ತು.

ಮತ್ತೊಂದೆಡೆ, ಬೇಸಿಗೆ ವೇಳೆ ಆಗಾಗ್ಗೆ ಬೀಳುತ್ತಿದ್ದ ಮಳೆಯೂ ಕೂಡ ಕಡಿಮೆಯಾಗಿತ್ತು. ಆದರೆ ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ, ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ನಾಗರೀಕರಲ್ಲಿ ನೆಮ್ಮದಿಯ ಭಾವ ಮೂಡುವಂತೆ ಮಾಡಿಸಿದೆ.

ಮತ್ತೊಂದೆಡೆ, ಭಾರತೀಯ ಹವಾಮಾನ ಇಲಾಖೆಯು ರಾಜ್ಯದ ವಿವಿಧೆಡೆ ಗುಡುಗು, ಮಿಂಚು ಸಹಿತ ಭಾರೀ ವರ್ಷಧಾರೆಯಾಗುವ ಸಾಧ್ಯತೆಯಿದೆ ಎಂದು ಎಂದು ಮುನ್ಸೂಚನೆ ನೀಡಿದೆ.

ಸಾರ್ವಜನಿಕರ ಸ್ಥಿರಾಸ್ತಿ ನೋಂದಣಿ ಪ್ರಕ್ರಿಯೆಯನ್ನು ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಸುಲಭಗೊಳಿಸಲು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ-2 (ಸಾಫ್ಟ್’ವೇರ್) ಅಭಿವೃದ್ದಿಪಡಿಸಿದೆ. ಆನ್’ಲೈನ್ (ಗಣಕೀಕೃತ) ಮೂಲಕ ಸ್ಥಿರಾಸ್ತಿ ನೊಂದಣಿಗೆ ಅವಕಾಶ ಕಲ್ಪಿಸಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿಯೂ ಆನ್’ಲೈನ್ ಆಧಾರಿತ ನೊಂದಣಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಮೇ 15 ರ ನಂತರ ಜಿಲ್ಲೆಯ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ನೋಂದಾಯಿಸಲಾಗುವ ಕ್ರಯ ಪತ್ರ/ ವಿಭಾಗ ಪತ್ರ/ ದಾನ ಪತ್ರ/ ಆಧಾರ/ ಆಧಾರ ಖುಲಾಸೆ ಇನ್ನಿತರೆ ಎಲ್ಲಾ ದಸ್ತಾವೇಜುಗಳ ಮಾಹಿತಿಯನ್ನು, ಸಾರ್ವಜನಿಕರು ವೆಬ್ ಸೈಟ್ https://kaveri.karnataka.gov.in ಮತ್ತು https://igr.karnataka.gov.in ಮೂಲಕ ಆನ್‍ಲೈನ್‍ನಲ್ಲಿಯೇ ಅಪ್‍ಲೋಡ್ ಮಾಡಿ ಮುಂದಿನ ನೋಂದಣಿ ಪ್ರಕ್ರಿಯೆ ಮಾಡಿಕೊಳ್ಳುವಂತೆ ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. Previous post ಶಿವಮೊಗ್ಗ ಜಿಲ್ಲೆಯ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಮೇ 15 ರ ನಂತರ ಆನ್‍ಲೈನ್‍ ಆಧಾರಿತ ನೊಂದಣಿ!
ಶಿವಮೊಗ್ಗ ನಗರದ ಎನ್ಇಎಸ್ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ವಿಧಾನಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದರು. ತಮ್ಮ ಭಾಷಣದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ವಿರುದ್ದ ವಾಗ್ದಾಳಿ ನಡೆಸಿದರು. ‘ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ, ಉಳುವವನೇ ಭೂ ಒಡೆಯ ಎಂಬ ಐತಿಹಾಸಿಕ ಕಾರ್ಯಕ್ರಮ ಜಾರಿಗೆ ತಂದು ಲಕ್ಷಾಂತರ ಜನರಿಗೆ ಭೂ ಒಡೆತನದ ಹಕ್ಕು ನೀಡಲಾಯಿತು. ಇದೇನು ಮೋದಿ, ಅಮಿತ್ ಶಾ ಜಾರಿಗೆ ತಂದಿದ್ದರಾ? ಇವರು ಒಂದಿಂಚು ಭೂಮಿಯನ್ನುಕೂಡ ಯಾರಿಗೂ ಕೊಟ್ಟಿಲ್ಲ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. Next post ನರೇಂದ್ರ ಮೋದಿ, ಅಮಿತ್ ಶಾ ವಿರುದ್ದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ