
ಶಿಕಾರಿಪುರ – ‘ಮನೆ ಮೇಲೆ ಕಲ್ಲುತೂರಾಟ ನಡೆದಾಗ ಕಣ್ಣೀರು ಹಾಕಿದ್ದೆವೆ’ : ಸಂಸದ ಬಿ.ವೈ.ರಾಘವೇಂದ್ರ
ಶಿಕಾರಿಪುರ, ಮೇ 2: ಶಿಕಾರಿಪುರದ ಮನೆ ಮೇಲೆ ಕಲ್ಲು ತೂರಾಟ ನಡೆದಾಗ ಕುಟುಂಬದವರು ಕಣ್ಣೀರು ಹಾಕಿದ್ದೆವೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬೆಂಡೆಕಟ್ಟೆ ತಾಂಡಾ, ಬಳೂರು, ಗುಳೇದಾಹಳ್ಳಿ ತಾಂಡಾಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದ ವೇಳೆ ಅವರು ಮಾತನಾಡಿದರು.
ನಾನು ಏನಾದರೂ ತಪ್ಪು ಮಾತಾಡಿದರೆ ನನ್ನ ಮನೆತನ ಹಾಳಾಗಲಿ. ದೇವಾಲಯದ ಮುಂದೆ ನಿಂತುಕೊಂಡು ಮಾತಾಡುತ್ತಿದ್ದೆನೆ. ಸೇವೆ ಮಾಡಿದ ಮನೆತನಕ್ಕೆ ಕಲ್ಲು ಹೊಡೆಸುವ ಕೆಲಸವನ್ನು ವಿರೋಧಿಗಳು ಮಾಡಿದ್ದಾರೆ ಎಂದು ಹೇಳಿದರು.
ಮೀಸಲಾತಿ ಕುರಿತಂತೆ ಅಪಪ್ರಚಾರ ಮಾಡಲಾಗುತ್ತಿದೆ. ಯುವಕರಿಗೆ ತಪ್ಪು ತಿಳಿವಳಿಕೆ ಮೂಡಿಸುವ ಕಾರ್ಯ ನಡೆಸಲಾಗಿದೆ. ಸರ್ಕಾರ ಯಾರಿಗೂ ಅನ್ಯಾಯ ಮಾಡಿಲ್ಲ ಎಂಬುವುದನ್ನು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದರು.
In#byr, #byr #byraghavendra, #mpbyr, #mpbyraghavendra, #shikar, #shikaripur, #shikaripuraconstituency, #shimoga #shivamogga #karnataka #shimogalocalnews #ಶಿವಮೊಗ್ಗ #news #newsheadlines #newstoday #ಕರ್ನಾಟಕ #ನ್ಯೂಸ್ #ಕನ್ನಡನ್ಯೂಸ್ #ಕನ್ನಡ #ಕನ್ನಡವಾರ್ತೆ #ಕನ್ನಡಸುದ್ದಿಗಳು, #shimoganews, #Shivamogga, #shivamogganews #shimoganews, #udayasaakshi, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #ಉದಯಸಾಕ್ಷಿನ್ಯೂಸ್, #ಬಿವೈರಾಘವೇಂದ್ರ, #ಲೋಕಸಭಾಸದಸ್ಯಬಿವೈರಾಘವೇಂದರ, #ಶಿಕಾರಿಪುರವಿಧಾನಸಭಾಕ್ಷೇತ್ರ, #ಶಿವಮೊಗ್ಗ, #ಶಿವಮೊಗ್ಗನ್ಯೂಸ್, #ಸಂಸದರಪ್ರಚಾರ