
ಸೊರಬ : ಕಾರು – ಬೈಕ್ ನಡುವೆ ಅಪಘಾತ ; ಸಹೋದರರಿಬ್ಬರ ದಾರುಣ ಸಾವು!
ಸೊರಬ, ಮೇ 3: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ, ಬೈಕ್ ಸವಾರ ಹಾಗೂ ಹಿಂಬದಿ ಸವಾರ ಮೃತಪಟ್ಟ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಉಳವಿ ಸಮೀಪ ಬುಧವಾರ ನಡೆದಿದೆ. ಮೃತರಿಬ್ಬರು ಸಹೋದರರಾಗಿದ್ದಾರೆ.
ಸಾಗರದ ರಾಮನಗರದ ನಿವಾಸಿಗಳಾದ ವೆಲ್ಡಿಂಗ್ ಕೆಲಸ ಮಾಡುವ ಸುಹೇಲ್ (27) ಹಾಗೂ ಅಫ್ರೀದ್ (21) ಮೃತಪಟ್ಟವರೆಂದು ಗುರುತಿಸಲಾಗಿದೆ. ಅಫ್ರೀದ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸುಹೇಲ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ್ದಾರೆ.
ಉಳವಿಯಲ್ಲಿ ಆಯೋಜಿತವಾಗಿದ್ದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಸೊರಬ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಅವಘಡದ ಕುರಿತಂತೆ ಇನ್ನಷ್ಟೆ ಹೆಚ್ಚಿನ ಇವರಗಳು ಲಭ್ಯವಾಗಬೇಕಾಗಿದೆ.
In#accident, #accidentnews, #bikeriderspotdeath, #roadaccident, #shimoga #shivamogga #karnataka #shimogalocalnews #ಶಿವಮೊಗ್ಗ #news #newsheadlines #newstoday #ಕರ್ನಾಟಕ #ನ್ಯೂಸ್ #ಕನ್ನಡನ್ಯೂಸ್ #ಕನ್ನಡ #ಕನ್ನಡವಾರ್ತೆ #ಕನ್ನಡಸುದ್ದಿಗಳು, #shimoganews, #Shivamogga, #shivamogganews #shimogalocalnews, #shivamogganews #shimoganews, #soraba, #udayasaakshi, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #ಅಪಘಾತ, #ಅಪಘಾತವರದಿ, #ಉದಯಸಾಕ್ಷಿ, #ಉದಯಸಾಕ್ಷಿನ್ಯೂಸ್, #ಕಾರುಬೈಕ್_ನಡುವೆಅಪಘಾತ, #ರಸ್ತೆಅಪಘಾತ, #ಶಿವಮೊಗ್ಗ, #ಶಿವಮೊಗ್ಗನ್ಯೂಸ್, #ಸಹೋದರರಿಬ್ಬರದಾರುಣಸಾವು, #ಸೊರಬ, #ಸೊರಬವರದಿ