ಶಿವಮೊಗ್ಗ, ಮೇ 10: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಬುಧವಾರ ನಡೆದ ಮತದಾನ ಕಾರ್ಯಕ್ಕೆ ಅಂತಿಮ ತೆರೆ ಬಿದ್ದಿದೆ. ಶಿವಮೊಗ್ಗ ಜಿಲ್ಲೆಯ 7 ಕ್ಷೇತ್ರಗಳಲ್ಲಿ, ಒಟ್ಟಾರೆ ಶೇ. 78.28 ರಷ್ಟು ಮತದಾನವಾಗಿದೆ. ಶಿವಮೊಗ್ಗಗ್ರಾಮಾಂತರ ಶೇ. 83.71, ಭದ್ರಾವತಿ ಶೇ. 68.47, ಶಿವಮೊಗ್ಗ ಶೇ. 68.74, ತೀರ್ಥಹಳ್ಳಿ ಶೇ. 84.83, ಶಿಕಾರಿಪುರ ಶೇ. 82.57, ಸೊರಬ ಶೇ. 82.97, ಸಾಗರ ಶೇ. 80.29 ರಷ್ಟು ಮತದಾನವಾಗಿದೆ.

ವಿಧಾನಸಭೆ ಚುನಾವಣೆ : ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 78.28 ರಷ್ಟು ಮತದಾನ

ಶಿವಮೊಗ್ಗ, ಮೇ 10: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಬುಧವಾರ ನಡೆದ ಮತದಾನ ಕಾರ್ಯಕ್ಕೆ ಅಂತಿಮ ತೆರೆ ಬಿದ್ದಿದೆ. ಶಿವಮೊಗ್ಗ ಜಿಲ್ಲೆಯ 7 ಕ್ಷೇತ್ರಗಳಲ್ಲಿ, ಒಟ್ಟಾರೆ ಶೇ. 78.28 ರಷ್ಟು ಮತದಾನವಾಗಿದೆ.

ಶಿವಮೊಗ್ಗಗ್ರಾಮಾಂತರ ಶೇ. 83.71, ಭದ್ರಾವತಿ ಶೇ. 68.47, ಶಿವಮೊಗ್ಗ ಶೇ. 68.74, ತೀರ್ಥಹಳ್ಳಿ ಶೇ. 84.83, ಶಿಕಾರಿಪುರ ಶೇ. 82.57, ಸೊರಬ ಶೇ. 82.97, ಸಾಗರ ಶೇ. 80.29 ರಷ್ಟು ಮತದಾನವಾಗಿದೆ.

ಪ್ರಸ್ತುತ ಜಿಲ್ಲೆಯ ಅಸೆಂಬ್ಲಿವಾರು ಮತದಾನದ ವಿವರ ಗಮನಿಸಿದರೆ, ತೀರ್ಥಹಳ್ಳಿ ಅಸೆಂಬ್ಲಿ ಕ್ಷೇತ್ರದಲ್ಲಿ ಅತ್ಯಧಿಕ ಮತದಾನವಾಗಿದೆ. ಶಿವಮೊಗ್ಗ ಹಾಗೂ ಭದ್ರಾವತಿ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿರುವುದು ಕಂಡುಬರುತ್ತದೆ.

ಉಳಿದಂತೆ ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ಸೊರಬ, ಸಾಗರ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಉತ್ತಮ ಮತದಾನವಾಗಿದೆ.

-: ಕ್ಷೇತ್ರವಾರು ಮತದಾನದ ವಿವರ :-

——————————————-

ಶಿವಮೊಗ್ಗಗ್ರಾಮಾಂತರ 83.71%

ಭದ್ರಾವತಿ 68.47%

ಶಿವಮೊಗ್ಗ68.74%

ತೀರ್ಥಹಳ್ಳಿ 84.83%

ಶಿಕಾರಿಪುರ 82.57%

ಸೊರಬ 82.97%

ಸಾಗರ 80.29%

ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಕ್ಕೆ ಬುಧವಾರ ಶಿವಮೊಗ್ಗ ಜಿಲ್ಲೆಯ 7 ಕ್ಷೇತ್ರಗಳಲ್ಲಿ ನಡೆದ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿತ್ತು. ಬಿಸಿಲ ಬೇಗೆಯ ನಡುವೆಯೂ ಮತಗಟ್ಟೆಗಳಲ್ಲಿ ಸರದಿ ಸಾಲಿನಲ್ಲಿ ನಿಂತು, ಅತ್ಯಂತ ಉತ್ಸಾಹದಿಂದ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಕೆಲ ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ, ಕೆಲ ಸಮಯ ಮತದಾನ ಕಾರ್ಯ ಸ್ಥಗಿತಗೊಂಡಿದ್ದ ವರದಿಗಳು ಹೊರತುಪಡಿಸಿದರೆ, ಉಳಿದಂತೆ ಯಾವುದೇ ಅಹಿತಕರ ಘಟನೆ ಹಾಗೂ ಗೊಂದಲ-ಗಡಿಬಿಡಿಯಿಲ್ಲದೆ ಮತದಾನ ಪ್ರಕ್ರಿಯೆ ನಡೆಯಿತು. Previous post ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ
ವಿಧಾನಸಭೆ ಸಾರ್ವತ್ರಿಕ ಚುನಾವಣೆ - 2023 ಮಹಾ ಸಮರಕ್ಕೆ ತೆರೆ ಬಿದ್ದಿದೆ. ಮೇ 13 ರ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ನಡುವೆ ರಾಜಕೀಯ ಪಕ್ಷ ಮಾತ್ರವಲ್ಲದೆ ಸಾರ್ವಜನಿಕ ವಲಯದಲ್ಲಿ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರಗಳು ಬಿರುಸುಗೊಂಡಿವೆ! ಯಾವ ಅಸೆಂಬ್ಲಿ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ? ಯಾವ ಪಕ್ಷಕ್ಕೆ ಎಷ್ಟೆಷ್ಟು ಮತ ಬೀಳಬಹುದು? ಯಾವ ಅಭ್ಯರ್ಥಿ ಗೆಲ್ಲಬಹುದು – ಸೋಲಬಹುದು? ಸೋಲು – ಗೆಲುವಿಗೆ ಕಾರಣವಾಗುವ ಅಂಶಗಳೇನು? ಎಂಬಿತ್ಯಾದಿ ಚರ್ಚೆಗಳು ಸರ್ವೇ ಸಾಮಾನ್ಯವಾಗಿದೆ. ಮತ್ತೊಂದೆಡೆ, ಕೆಲ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಅಸೆಂಬ್ಲಿ ಕ್ಷೇತ್ರಗಳ ಪ್ರತಿಯೊಂದು ಬೂತ್ ನಲ್ಲಿ ಆಗಿರುವ ಮತದಾನದ ವಿವರ ಕಲೆ ಹಾಕುತ್ತಿದ್ದಾರೆ. ತಮ್ಮ ಪಕ್ಷಗಳ ಬೂತ್ ಏಜೆಂಟ್ ಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದರ ಆಧಾರದ ಮೇಲೆ ಯಾವ್ಯಾವ ಭಾಗದಲ್ಲಿ ಎಷ್ಟೆಷ್ಟು ಮತ ತಮಗೆ ಬಿದ್ದಿರಬಹುದು? ಎದುರಾಳಿಗಳ ಮತ ಗಳಿಕೆ ಎಷ್ಟಿರಬಹುದು? ಎಂಬ ಊಹಾತ್ಮಕ ಲೆಕ್ಕಾಚಾರದಲ್ಲಿ ಮುಳುಗಿರುವುದು ಕಂಡುಬರುತ್ತಿದೆ. Next post ಮತದಾನದ ನಂತರ ಸೋಲು-ಗೆಲುವಿನ ಲೆಕ್ಕಾಚಾರ ಬಿರುಸು!