ಶಿವಮೊಗ್ಗ, ಮೇ 15: ಹಣಕ್ಕಾಗಿ ಯುವತಿಯೋರ್ವಳನ್ನು ದುಷ್ಕರ್ಮಿಗಳು ಅಪಹರಿಸಿರುವ ಘಟನೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಕುರಿತಂತೆ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ರಂಜಿತಾ ಬಿ (22) ಕಿಡ್ನ್ಯಾಪ್ ಆದ ಯುವತಿ ಎಂದು ಗುರುತಿಸಲಾಗಿದೆ. ಮೇ 14 ರಂದು ಸಂಜೆ 5 ಗಂಟೆ ರಾತ್ರಿ 9.30 ರ ನಡುವೆ ಯುವತಿಯ ಕಿಡ್ನ್ಯಾಪ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ : ಹಣಕ್ಕಾಗಿ ಯುವತಿಯ ಅಪಹರಣ – ನಿಗೂಢವಾದ ಪ್ರಕರಣ!

ಶಿವಮೊಗ್ಗ, ಮೇ 15: ಹಣಕ್ಕಾಗಿ ಯುವತಿಯೋರ್ವಳನ್ನು ದುಷ್ಕರ್ಮಿಗಳು ಅಪಹರಿಸಿರುವ ಘಟನೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆ ಕುರಿತಂತೆ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ರಂಜಿತಾ ಬಿ (22) ಕಿಡ್ನ್ಯಾಪ್ ಆದ ಯುವತಿ ಎಂದು ಗುರುತಿಸಲಾಗಿದೆ. ಮೇ 14 ರಂದು ಸಂಜೆ 5 ಗಂಟೆ ರಾತ್ರಿ 9.30 ರ ನಡುವೆ ಯುವತಿಯ ಕಿಡ್ನ್ಯಾಪ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಹರಣಕ್ಕೊಳಗಾದ ಯುವತಿಯು ಸುಮಾರು 5.1 ಅಡಿ ಎತ್ತರ, ಬಿಳಿ ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಕಾಣೆಯಾದ ವೇಳೆ ನೇವಿ ಬ್ಲೂ ಬಣ್ಣದ ಚೂಡಿದಾರ್  ಧರಿಸಿರುತ್ತಾರೆ. ಸಾರ್ವಜನಿಕರಿಗೆ ಯುವತಿಯ ಸುಳಿವು ಲಭ್ಯವಾದಲ್ಲಿ ಜಯನಗರ ಪೊಲೀಸ್ ಠಾಣೆ ಅಥವಾ ಜಿಲ್ಲಾ ನಿಸ್ತಂತು ಕೇಂದ್ರ ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ : 08182-261400/261413/261416 ನ್ನು ಸಂಪರ್ಕಿಸಬಹುದೆಂದು ಜಯನಗರ ಪೊಲೀಸ್  ಠಾಣೆ  ಇನ್ಸ್ ಪೆಕ್ಟರ್ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ನಿಗೂಢ – ಅನುಮಾನ?: ಸದ್ಯ ಅಪಹರಣಕ್ಕೊಳಗಾದ ಯುವತಿಯು ಹೊರ ಜಿಲ್ಲೆಯವರಾಗಿದ್ದು, ನಗರದಲ್ಲಿ ನರ್ಸಿಂಗ್ ಕೋರ್ಸ್ ವೊಂದರ ಅಭ್ಯಾಸ ನಡೆಸುತ್ತಿದ್ದಾರೆ. ಸವಳಂಗ ರಸ್ತೆಯ ಮಹಿಳಾ ಪಿಜಿಯೊಂದರಲ್ಲಿ ತಂಗಿದ್ದಾರೆ ಎಂದು ತಿಳಿದುಬಂದಿದೆ.

ಯುವತಿ ಅಪಹರಣಕ್ಕೊಳಗಾದ ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಪ್ರತ್ಯೇಕ ತಂಡಗಳಾಗಿ ತನಿಖೆ ನಡೆಸಲಾರಂಭಿಸಿದ್ದಾರೆ. ವಿವಿಧೆಡೆಯ ಸಿಸಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲಿಸಿ ವಿವರ ಕಲೆ ಹಾಕಲಾರಂಭಿಸಿದ್ದಾರೆ ಎನ್ನಲಾಗಿದೆ.

ಅಪಹರಣ ಪ್ರಕರಣದ ಸುತ್ತ ಅನುಮಾನದ ಹುತ್ತ ನಿರ್ಮಾಣವಾಗಿದೆ. ಅಪಹರಣವಾಗಿದ್ದು ನಿಜವೇ? ಕಾರಣವೇನು? ಎಂಬುವುದು ಪೊಲೀಸರ ತನಿಖೆಯ ನಂತರಷ್ಟೆ ಹೆಚ್ಚಿನ ವಿವರಗಳು ಹೊರ ಬರಬೇಕಾಗಿದೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಸೇರಿದ ಅಡಕೆ ತೋಟದಲ್ಲಿ ಪುನುಗು ಬೆಕ್ಕು ಸಾಯಿಸಿ ವಾಮಾಚಾರ! ‘ಕುಟುಂಬದವರಿಗೆ ಕೆಡಕುಂಟು ಮಾಡಲು ವಿರೋಧಿಗಳಿಂದ ಮಾಟಮಂತ್ರ’ – ಬಿ.ವೈ.ರಾಘವೇಂದ್ರ ಆರೋಪ ಶಿಕಾರಿಪುರ, ಮೇ 15: ಶಿಕಾರಿಪುರ ತಾಲೂಕಿನ ಬಂಡಿಭೈರನಹಳ್ಳಿ ಮಜಿರೆ ಸಿದ್ದಾಪುರ ಗ್ರಾಮದಲ್ಲಿರುವ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಸೇರಿದ ಅಡಕೆ ತೋಟದಲ್ಲಿ ವಾಮಾಚಾರ ನಡೆಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ! ಈ ಸಂಬಂಧ ತೋಟದದಲ್ಲಿ ಕಾರ್ಯನಿರ್ವಹಿಸುವ ಎಸ್.ಕೆ.ರಮೇಶ್ ಅವರು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್.ಐ.ಆರ್. ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಘಟನೆ ಹಿನ್ನೆಲೆ: ಮೇ 11 ರಂದು ರಾತ್ರಿ ಸರಿಸುಮಾರು 10 ಗಂಟೆಯಿಂದ 10.30 ರೊಳಗೆ ವಾಮಾಚಾರ ನಡೆಸಲಾಗಿದೆ. ಪುನಗು ಬೆಕ್ಕನ್ನು ಸಾಯಿಸಿ ತೋಟದಲ್ಲಿ ಗುಂಡಿ ತೆಗೆದು ಹೂಳಲಾಗಿದೆ. ಅದರ ಮೇಲೆ ಹೂವು ಮತ್ತೀತರ ಪೂಜಾ ಸಾಮಗ್ರಿಗಳನ್ನು ಹಾಕಲಾಗಿದೆ. ಅಂದು ರಾತ್ರಿಯೇ ವಾಮಾಚಾರ ನಡೆದಿರುವ ವಿಷಯ ಬಿ.ಎಸ್.ಯಡಿಯೂರಪ್ಪರ ಕುಟುಂಬ ಸದಸ್ಯರಿಗೆ ಗೊತ್ತಾಗಿದೆ. Previous post ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಸೇರಿದ ಅಡಕೆ ತೋಟದಲ್ಲಿ ಪುನುಗು ಬೆಕ್ಕು ಸಾಯಿಸಿ ವಾಮಾಚಾರ!
ಸಂಪೂರ್ಣ ನಿಗೂಢವಾಗಿ ಪರಿಣಮಿಸಿದ್ದ ಯುವತಿಯ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಮುಂಬೈನಲ್ಲಿ ಕ್ರೈಸ್ತ ಸನ್ಯಾನಿಸಿಯಾಗಲು ಹಾಗೂ ಪೋಷಕರಿಂದ ಹಣ ಪಡೆಯುವ ಉದ್ದೇಶದಿಂದ, ಸ್ವತಃ ಯುವತಿಯೇ ಕಿಡ್ನ್ಯಾಪ್ ಕಥೆ ಸೃಷ್ಟಿಸಿದ್ದು ಬೆಳಕಿಗೆ ಬಂದಿದೆ! ಹಣಕ್ಕಾಗಿ ಯುವತಿಯ ಕಿಡ್ನ್ಯಾಪ್ ಮಾಡಲಾಗಿದೆ ಎಂಬ ದೂರು, ಶಿವಮೊಗ್ಗ ಪೊಲೀಸರ ನಿದ್ದೆಗೆಡಿಸಿತ್ತು ಸಿನಿಮೀಯ ಶೈಲಿಯಲ್ಲಿ ಪ್ರಕರಣದ ತನಿಖೆ ನಡೆಸಿದ್ದಾರೆ. ಇನ್ನೇನು ಹುಬ್ಬಳ್ಳಿಯಿಂದ ಮುಂಬೈಗೆ ಬಸ್ ಏರಲು ಸಿದ್ದವಾಗಿ ನಿಂತಿದ್ದ ಯುವತಿಯನ್ನು ಪತ್ತೆ ಹಚ್ಚಿ ಶಿವಮೊಗ್ಗಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. Next post ಮುಂಬೈನಲ್ಲಿ ಕ್ರೈಸ್ತ ಸನ್ಯಾಸಿನಿಯಾಗಲು ‘ಕಿಡ್ನ್ಯಾಪ್’ ಕಥೆ ಸೃಷ್ಟಿಸಿದ ಯುವತಿ..!