
ಶಿವಮೊಗ್ಗ ನಗರದ ವಿವಿಧೆಡೆ ಜ.13 ರಂದು ವಿದ್ಯುತ್ ವ್ಯತ್ಯಯ
ಶಿವಮೊಗ್ಗ, ಜ. 11: ಶಿವಮೊಗ್ಗ ನಗರದ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ಫೀಡರ್ ಎ.ಎಫ್. – 8, 9, 10 ಹಾಗೂ 11 ರಲ್ಲಿ ಜ. 13 ರಂದು ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಂಸ್ಥೆ ತಿಳಿಸಿದೆ.
ಆಲ್ಕೋಳ, ಕಾಶೀಪುರ, ಐ.ಜಿ. ವೃತ್ತ, ಜಯದೇವ ಬಡಾವಣೆ, ಶಿವಪ್ಪನಾಯಕ ಬಡಾವಣೆ, ಕಲ್ಲಹಳ್ಳಿ ಎಬಿಸಿಡಿಇಎಫ್’ಜಿಹೆಚ್ ಬ್ಲಾಕ್, ಕರಿಯಣ್ಣ ಬಿಲ್ಡಿಂಗ್, ಕೆಂಚಪ್ಪ ಲೇಔಟ್, ಕಾಶೀಪುರ ರೈಲ್ವೆ ಟ್ರ್ಯಾಕ್ ಸಮೀಪ, ವಿನೋಬನಗರ 1,2,3 ನೇ ಹಂತ,
ಮೇದಾರ ಕೇರಿ, ಶಭ ಮಂಗಳ ಕಲ್ಯಾಣ ಮಂಟಪ, ಪೊಲೀಸ್ ಚೌಕಿ, ಸೂರ್ಯ ಲೇಔಟ್, ದೇವರಾಜ ಅರಸ್ ಬಡಾವಣೆ, ಕನಕ ನಗರ, ಪಿ ಅಂಡ್ ಟಿ ಕಾಲೋನಿ, ಲಕ್ಷ್ಮೀ ಟಾಕೀಸ್ ಮುಂಭಾಗ, ಆರ್.ಎಂ.ಸಿ. ಅರವಿಂದ ನಗರ, ಜೈಲ್ ಕಾಂಪೌಂಡ್, ಹುಚ್ಚುರಾಯ ಕಾಲೋನಿ,
ಚೇತನಾ ಪಾರ್ಕ್, ಶಿವಾಲಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ನಗರ ಉಪ ವಿಭಾಗ – 3 ರ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.