
ಶಿವಮೊಗ್ಗ : ಸೋಗಾನೆ, ಬಿದರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೇ 21 ರಂದು ವಿದ್ಯುತ್ ವ್ಯತ್ಯಯ!
ಶಿವಮೊಗ್ಗ, ಮೇ.19: ಶಿವಮೊಗ್ಗದ ಮಾಚೇನಹಳ್ಳಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹೊಸದಾಗಿ 110 ಕೆವಿ ಮಾರ್ಗ ಹಾಗೂ ಪರಿವರ್ತಕ ಚಾಲನೆಗೊಳಿಸುವ ಕಾಮಗಾರಿಯನ್ನು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಮೇ 21 ರಂದು ಈ ಮಾರ್ಗದಿಂದ ವಿದ್ಯುತ್ ಸರಬರಾಜು ಪಡೆಯುವ ಈ ಕೆಳಕಂಡ ಗ್ರಾಮಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 7 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಂಸ್ಥೆ ತಿಳಿಸಿದೆ.
ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಜಯಂತಿಗ್ರಾಮ, ಕಿಯೊನಿಕ್ಸ್ ಐ ಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ ಕಾಲೋನಿ, ನವುಲೆ, ಬಸವಾಪುರ, ಹಾತಿಕಟ್ಟೆ
ಹೊನ್ನವಿಲೆ, ಅಮರಾವತಿ ಕ್ಯಾಂಪ್, ಶೆಟ್ಟಿಹಳ್ಳಿ, ಹಳೇಶೆಟ್ಟಿಹಳ್ಳಿ, ಗುಡ್ರಕೊಪ್ಪ, ಮತ್ತಿಘಟ್ಟ, ಮಾಳೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
More Stories
ಮಹಾತ್ಮ ಗಾಂಧೀಜಿ ಪ್ರತಿಮೆ ಧ್ವಂಸಗೊಳಿಸಿದ ದುಷ್ಕರ್ಮಿಗಳು!
ಶಿವಮೊಗ್ಗ, ಆ. 21: ಅಪರಿಚಿತ ದುಷ್ಕರ್ಮಿಗಳು ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಧ್ವಂಸಗೊಳಿಸಿರುವ ಘಟನೆ, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಪಟ್ಟಣದಲ್ಲಿ ತಡರಾತ್ರಿ ನಡೆದಿದ್ದು, ಸೋಮವಾರ...
ಶಿವಮೊಗ್ಗ : ಆ.11 – 12 ರಂದು ಆಯನೂರು, ಕುಂಸಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದಲ್ಲಿ ಹೊಸದಾಗಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಿಸಲಾಗುತ್ತಿದ್ದು, ಟ್ಯಾಪಿಂಗ್ ಗೋಪುರದ ಅಳವಡಿಕೆ ಕಾರ್ಯ ನಡೆಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕುಂಸಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಈ ಕೆಳಕಂಡ ಗ್ರಾಮಗಳಲ್ಲಿ 11-08-2023 ಮತ್ತು 12-08-2023 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.