
ಶಿವಮೊಗ್ಗ : ಸೂಡಾ ನಿವೇಶನ ಅರ್ಜಿ ವಿತರಣೆಗೆ ತಾತ್ಕಾಲಿಕ ತಡೆ!
ಶಿವಮೊಗ್ಗ, ಜ.12: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಊರುಗಡೂರು ವಸತಿ ಬಡಾವಣೆಯ ನಿವೇಶನ ಹಂಚಿಕೆಗಾಗಿ ಜ.06 ರಂದು ಪ್ರಕಟಣೆ ಹೊರಡಿಸಿತ್ತು. ಆದರೆ ಕಾರಣಾಂತರದಿಂದ ಪ್ರಸ್ತುತ ಅರ್ಜಿ ವಿತರಿಸುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.