
ಮತ್ತೇ ಕಾಂಗ್ರೆಸ್ ನತ್ತ ‘ಪಕ್ಷಾಂತರ’ ನಾಯಕರು : ಮರುಸೇರ್ಪಡೆಗೆ ಮುಖಂಡರ ಆಕ್ರೋಶ!
ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳದಂತೆ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮಧು ಕುಮಾರ್ ಆಗ್ರಹ
ಶಿವಮೊಗ್ಗ, ಮೇ 23: ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ತೊರೆದಿದ್ದ ಕೆಲ ನಾಯಕರು, ಇದೀಗ ಆ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಸದ್ದುಗದ್ದಲವಿಲ್ಲದೆ ಮತ್ತೇ ‘ಕೈ’ ಹಿಡಿಯುವ ಕಸರತ್ತು ನಡೆಸಲಾರಂಭಿಸಿದ್ದಾರೆ. ಆದರೆ ಪಕ್ಷಾಂತರ ನಾಯಕರ ಪುನಾರಾಗಮನಕ್ಕೆ, ಕಾಂಗ್ರೆಸ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಲಾರಂಭಿಸಿದ್ದಾರೆ!
ಈ ಸಂಬಂಧ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮಧು ಕುಮಾರ್ ಅವರು ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಇತ್ತೀಚೆಗೆ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದ ಪಕ್ಷದ ಮುಖಂಡರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು’ ಎಂದು ಪಕ್ಷದ ವರಿಷ್ಠರಿಗೆ ಆಗ್ರಹಿಸಿದ್ದಾರೆ.

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸುವ ಉದ್ದೇಶದಿಂದ, ಕೆಲ ನಾಯಕರು ಜೆಡಿಎಸ್ ಸೇರ್ಪಡೆಯಾಗಿದ್ದರು. ಆದರೆ ಜೆಡಿಎಸ್ ಪಕ್ಷ ಹೀನಾಯವಾಗಿ ಸೋಲನುಭವಿಸಿತ್ತು. ಇದೀಗ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ, ಪಕ್ಷಾಂತರ ನಾಯಕರು ಕಾಂಗ್ರೆಸ್ ಗೆ ಸೇರ್ಪಡೆಯಾಗಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿರುವ ಪಕ್ಷಾಂತರಿ ನಾಯಕರನ್ನು ಮತ್ತೆ ಸೇರ್ಪಡೆ ಮಾಡಿಕೊಂಡರೆ ಪಕ್ಷದ ಏಳ್ಗೆಗೆ ದುಡಿಯುತ್ತಿರುವ ನಿಷ್ಠಾವಂತ ನಾಯಕರು ಹಾಗೂ ಕಾರ್ಯಕರ್ತರಿಗೆ ಅತೀವ ನೋವುಂಟು ಮಾಡಲಿದೆ.
ಭವಿಷ್ಯದಲ್ಲಿ ಇದು ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರಲಿದೆ. ಈ ಕಾರಣದಿಂದ ಪಕ್ಷಾಂತರಿ ನಾಯಕರನ್ನು ಯಾವುದೇ ಕಾರಣಕ್ಕೂ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಮಧು ಕುಮಾರ್ ಪಕ್ಷದ ವರಿಷ್ಠರಿಗೆ ಆಗ್ರಹಿಸಿದ್ದಾರೆ.
One thought on “ಮತ್ತೇ ಕಾಂಗ್ರೆಸ್ ನತ್ತ ‘ಪಕ್ಷಾಂತರ’ ನಾಯಕರು : ಮರುಸೇರ್ಪಡೆಗೆ ಮುಖಂಡರ ಆಕ್ರೋಶ!”
Comments are closed.
ಮುಂಬರುವ ಲೋಕಸಭಾ ಚುನಾವಣೆ ದೃಷ್ಠಿಯಿಂದ
ಕ್ಷೇತ್ರದ ಮತದಾರರು ತಿರಸ್ಕರಿಸಿರುವ ಪಕ್ಷಕ್ಕೆ ಬಂದವರಿಗೆ ಜಾತಿ ಲೆಕ್ಕಾಚಾರದಲ್ಲಿ ವಿಶೇಷ ಸ್ಥಾನ ಮಾನ ನೀಡುವಂತಾ
ಪ್ರಯತ್ನದಲ್ಲಿರುವ ಇವರು ಪಕ್ಷ ಬಿಟ್ಟು ಹೋದವರು ಮತ್ತೆ
ಪಕ್ಷಕ್ಕೆ ಬರುವ ಇಚ್ಚೆ ತೋರಿಸಿರುವವರನ್ನು ಮತ್ತೆ ಪಕ್ಷಕ್ಕೆ
ಸೇರಿಸಿಕೊಂಡು ಅವರಿಗೆ ಸ್ಥಾನಮಾನ ನೀಡಲು ಮುಂದಾ ದರೆ ನಿಷ್ಠಾವಂತ ಕಾರ್ಯಕರ್ತರು ಪಕ್ಷಕ್ಕೆ ಬಿಜೆಪಿಗೆ ಗತಿ ಕಾಣಿಸಿದಂತೆ ಇವರಿಗೂ ಗತಿಕಾಣಿಸುವರು ವಿಚಾರ ಮಾಡಿ
ಹೆಜ್ಜೆ ಇಡುವುದು ಪಕ್ಷದ ಹಿತದೃಷ್ಟಿಯಿಂದ ಸೂಕ್ತ